Advertisement
ರಾಜ್ಯದಲ್ಲಿ ಅನೇಕ ಸಮಾಜಗಳು ಮುಂದುವರಿದಿವೆ. ಆದರೆ ಕೋಲಿ ಸಮಾಜ ತೀರಾ ಹಿಂದುಳಿದಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದರು. ಕೋಲಿ ಅತ್ಯಂತ ನಿರ್ಗತಿಕ ಸಮಾಜವಾಗಿದೆ. ತಾವು ಮುಜರಾಯಿ ಖಾತೆ ಸಚಿವರಾಗಿದ್ದಾಗ ಹಿಂದುಳಿದ ವರ್ಗಗಳ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ 33ಕೋಟಿ ರೂ. ಮಂಜೂರಿಗೊಳಿಸಿದ್ದೆವು.
Related Articles
Advertisement
ಇದರ ಅಧ್ಯಕ್ಷ ಸ್ಥಾನ ಚಿಂಚೋಳಿ ತಾಲೂಕಿಗೆ ಸಿಗಬೇಕೆಂದು ಒತ್ತಾಯಿಸಿದರು. ಮಾಜಿ ಸಚಿವ ರೇವು ನಾಯಕ ಬೆಳಮಗಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಲಕ್ಷಣ ಆವಂಟಿ, ಜಿಲ್ಲಾ ಕೋಲಿ ಸಮಾಜ ಅಧ್ಯಕ್ಷ ರವಿರಾಜ ಕೊರವಿ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪ ತಳವಾರ, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್ ಯಾಕಾಪುರ, ಸಾರಿಗೆ ಅಧಿಧಿಕಾರಿ ಮಂಜುನಾಥ ಕೊರವಿ ಮಾತನಾಡಿದರು.
ಕೋಲಿ ಸಮಾಜದ ಅಧ್ಯಕ್ಷ ಲಕ್ಷಣ ಆವಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಲೇಪೇಟ ಗುರುಲಿಂಗ ಮಹಾಸ್ವಾಮೀಜಿ, ರಟಕಲ್‌ನ ಸಿದ್ದ ಶಿವಯೋಗಿಗಳು, ಹಳ್ಳಿಖೇಡನ ಶ್ರೀ ದತ್ತಾತ್ರೇಯ ಶರಣರು, ತೊನಸಹಳ್ಳಿಯ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ, ಭೀಮಣ್ಣ ಸಾಲಿ,ಜಿಪಂ ಸದಸ್ಯ ಗೌತಮ ಪಾಟೀಲ, ರವಿಕಾಂತ ಹುಸೇಬಾಯಿ, ಶ್ರೀಧರ ಘಾಲಿ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ ಮತ್ತಿತರ ಕೋಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.
ಕಾಶಿನಾಥ ನಾಟೀಕಾರ ಸ್ವಾಗತಿಸಿದರು. ಜಯಪ್ಪ ಚಾಪೆಲ್ ನಿರೂಪಿಸಿದರು. ಗಿರಿರಾಜ ನಾಟೀಕಾರ ವಂದಿಸಿದರು. ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಲಕ್ಷಿದೇವತೆ ದೇಗುಲದ ವರೆಗೆ ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.