Advertisement
ಬುರ್ಖಾ ಧರಿಸಿ ಮಹಿಳೆಯೊಬ್ಬರು ವಕೀಲರ ನಿವಾಸದತ್ತ ಆಗಮಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಕೀಲರ ಪಕ್ಕದ ಮನೆಯ ನಿವಾಸಿಯೊಬ್ಬರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂದೆಡೆ, ಬಾಲಿವುಡ್ ನಟಿ ರಾಖೀ ಸಾವಂತ್ ಅವರು ಗುರ್ಮೀತ್ ಮತ್ತು ಹನಿಪ್ರೀತ್ ನಡುವಿನ ಸಂಬಂಧದ ಕುರಿತು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮೂರೂವರೆ ವರ್ಷಗಳಿಂದಲೂ ಅವರಿ ಬ್ಬರೂ ನನಗೆ ಗೊತ್ತು ಎಂದಿದ್ದಾರೆ ರಾಖೀ. ಅಷ್ಟೇ ಅಲ್ಲ, ನಾನು ಗುರ್ಮೀತ್ ಜತೆಗೆ ಆತ್ಮೀಯವಾಗಿದ್ದುದನ್ನು ನೋಡಿ, ನಾನೆಲ್ಲಿ ಆತನನ್ನು ಮದುವೆ ಆಗಿಬಿಡುತ್ತೇನೋ ಎಂಬ ಭಯ ಹನಿಪ್ರೀತ್‌ಗೆ ಕಾಡುತ್ತಿತ್ತು ಎಂದೂ ಹೇಳಿದ್ದಾರೆ ರಾಖೀ.
ದೇಶದ್ರೋಹ ಮತ್ತು ಹಿಂಸೆಗೆ ಪ್ರಚೋದನೆ ಆರೋಪ ಹೊತ್ತಿರುವ ಹನಿಪ್ರೀತ್‌ರ ನಿರೀಕ್ಷಣ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಬಂಧನದಿಂದ ತಪ್ಪಿಸಿಕೊಳ್ಳಲೆಂದು ತಲೆಮರೆಸಿಕೊಂಡು ಓಡಾಡುತ್ತಿರುವ ಕಾರಣ, ಜಾಮೀನಿಗೆ ಆಕೆ ಅರ್ಹಳಲ್ಲ ಎಂದು ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ “ನೀವು ಶರಣಾಗುವುದು ಸೂಕ್ತ’ ಎಂದು ಹೇಳಿತ್ತು.