Advertisement

ವಿಲೀನ ಕುರಿತ ಮಾಹಿತಿ ಕಪೋಲಕಲ್ಪಿತ, ಇದೊಂದು ಸುಳ್ಳು ವದಂತಿ : ಕ್ಯಾಪ್ಟನ್ ಕಾರ್ಣಿಕ್

07:31 PM Dec 21, 2020 | sudhir |

ಬೆಂಗಳೂರು: ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವ ವಿಲೀನ ಪ್ರಕ್ರಿಯೆಯ ಕುರಿತ ಸುದ್ದಿಗಳು ಸಂಪೂರ್ಣ ಕಪೋಲಕಲ್ಪಿತ. ಭಾರತೀಯ ಜನತಾ ಪಾರ್ಟಿ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಈ ಕುರಿತು ನಡೆದಿರುವ ಚರ್ಚೆಗಳು ಅನಗತ್ಯ ಗೊಂದಲ ಸೃಷ್ಟಿ ಮಾಡುವ ದುರುದ್ದೇಶದಿಂದ ಕೂಡಿವೆ. ಯಾರು ಕೂಡಾ ಈ ವದಂತಿಗಳಿಗೆ ಕಿವಿಗೊಡಬಾರದೆಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ವಿನಂತಿಸಿದ್ದಾರೆ.

Advertisement

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ ಹಾಗೂ ಕೋವಿಡ್ ಸಂಕಷ್ಟದ ಸಮಸ್ಯೆಗಳ ನಡುವೆಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಈಗ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯಪ್ರವೃತ್ತವಾಗಿದೆ. “ಬೆಂಗಳೂರು ಮಿಶನ್ 2022” ಬೆಂಗಳೂರಿಗೆ ನವ ಚೈತನ್ಯದಿಂದ ಕೂಡಿರುವ ನಿಟ್ಟಿನಲ್ಲಿ ಸರಕಾರದ ಅಭಿವೃದ್ಧಿ ಚಿಂತನೆಯನ್ನು ಸಾದರಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಸಂಸದ ಗೋಪಾಲ್‌ ಶೆಟ್ಟಿ ಅವರ ಸಹಾಯ ಮರೆಯುವಂತಿಲ್ಲ : ಮುಂಡಪ್ಪ ಪಯ್ಯಡೆ

Advertisement

Udayavani is now on Telegram. Click here to join our channel and stay updated with the latest news.

Next