Advertisement

ಐಪಿಎಲ್‌ ಆಡುತ್ತಲೇ ನಾಯಕತ್ವ ಕಳೆದುಕೊಂಡವರು

12:14 PM May 02, 2019 | pallavi |

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್ ಇಲ್ಲಿ ಭಾವನೆಗಳಿಗೆ ಯಾವ ಬೆಲೆಯೂ ಇಲ್ಲ, ಹಣ ಹೂಡುವ ನೀವು ಅದನ್ನು ವಾಪಸ್‌ ಪಡೆಯುವ ಸಲುವಾಗಿ ಎಲ್ಲ ಯತ್ನಗಳನ್ನೂ ಮಾಡುತ್ತೀರಿ. ವೈಫ‌ಲ್ಯಕ್ಕೆ ಇಲ್ಲಿ ಗೌರವವಿಲ್ಲ. ನಿನ್ನೆಯವರೆಗೆ ಸಾಧಿಸಿದ ಯಶಸ್ಸೂ ಮುಖ್ಯವಲ್ಲ. ನಿಮ್ಮ ವೈಫ‌ಲ್ಯ ತಂಡಕ್ಕೆ ಹೊರೆಯಾಗುತ್ತಿದ್ದರೆ, ಎಂತಹ ದಿಗ್ಗಜರಾಗಿದ್ದರೂ ಸ್ಥಾನ ಕಳೆದುಕೊಳ್ಳುತ್ತೀರಿ. ಪ್ರತೀ ವರ್ಷ ಐಪಿಎಲ್ ನಡೆಯುವಾಗ ಅಂತಹ ನಿದರ್ಶನಗಳು ಕಣ್ಣಿಗೆ ಕಟ್ಟುತ್ತವೆ.

Advertisement

ಭಾರತ ಕಂಡ ಕ್ರಿಕೆಟ್ ದಂತಕಥೆ ಸೌರವ್‌ ಗಂಗೂಲಿಯನ್ನು, ಅವರ ಮಾತೃನೆಲದ ತಂಡ ಕೋಲ್ಕತಾ ನೈಟ್ರೈಡರ್ಸ್‌ ಮೊದಲ ಮೂರು ಆವೃತ್ತಿಗಳಲ್ಲೇ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ಅವರಿಗೆ ಬೇಕಾದ ಆಟಗಾರರು ಸಿಗಲಿಲ್ಲ. 2ನೇ ಆವೃತ್ತಿಯಲ್ಲಿ ನಾಯಕತ್ವವನ್ನೇ ಕಸಿದುಕೊಂಡಿತು. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ರಾಹುಲ್ ದ್ರಾವಿಡ್‌ ಹೊರಬಿದ್ದರು. ಪಂಜಾಬ್‌ ತಂಡದಿಂದ ಯುವರಾಜ್‌ ಸಿಂಗ್‌ ಕಳಚಿಕೊಂಡರು. ಡೆಲ್ಲಿ ಡೆವಿಲ್ಸ್ ತಂಡದಿಂದ ವೀರೇಂದ್ರ ಸೆಹ್ವಾಗ್‌ ಕೂಡ ಹೊರಬಿದ್ದರು.

ಇತ್ತೀಚೆಗಷ್ಟೇ ವೈಫ‌ಲ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ್‌ ರಾಯಲ್ಸ್ ನಾಯಕತ್ವವನ್ನು ಅಜಿಂಕ್ಯ ರಹಾನೆ ಕಳೆದುಕೊಂಡಿದ್ದಾರೆ. ಆ ಜಾಗವನ್ನು ಸ್ಟೀವ್‌ ಸ್ಮಿತ್‌ ಆಕ್ರಮಿಸಿಕೊಂಡಿದ್ದಾರೆ.

2008ರ ಉದ್ಘಾಟನಾ ಐಪಿಎಲ್ನಲ್ಲಿ ಹೈದರಾಬಾದ್‌ ಮೂಲದ ಡೆಕ್ಕನ್‌ ಚಾರ್ಜರ್ಸ್‌ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ನಾಯಕರಾಗಿ ಸಂಪೂರ್ಣ ವಿಫ‌ಲವಾದರು. ಇದೇ ಹಂತದಲ್ಲಿ ತಂಡದಿಂದ ಹೊರಬಿದ್ದರು, ಆಸ್ಟ್ರೇಲಿಯದ ಆ್ಯಡಂ ಗಿಲ್ಕ್ರಿಸ್ಟ್‌ ನಾಯಕರಾಗಿ ಆಯ್ಕೆಯಾದರು.

2009ರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಾಯಕತ್ವವನ್ನು ಇಂಗ್ಲೆಂಡ್‌ನ‌ ಕೆವಿನ್‌ ಪೀಟರ್ಸನ್‌ ಹೊತ್ತುಕೊಂಡಿದ್ದರು. ಆದರೆ ಅವರು 6 ಪಂದ್ಯಗಳಲ್ಲಿ ಗಳಿಸಿದ್ದು ಬರೀ 93 ರನ್‌ಗಳನ್ನು ಮಾತ್ರ. ಆ ಜಾಗಕ್ಕೆ ಅನಿಲ್ ಕುಂಬ್ಳೆಯನ್ನು ನೇಮಿಸಲಾಯಿತು.

Advertisement

2012ರ ಐಪಿಎಲ್ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಡೆಕ್ಕನ್‌ ಚಾರ್ಜರ್ಸ್‌ ತಂಡದ ನಾಯಕರಾಗಿದ್ದರು. ಆ ವೇಳೆ ಅವರು ಆಡಿದ 12 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 200 ರನ್‌. ಇದರಿಂದ ಸ್ವತಃ ಸಂಗಕ್ಕರ ತಾವು ತಂಡದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು.

ರಾಯಲ್ ಚಾಲೆಂಜರ್ಸ್‌ ಬೆಂಗಳೂರಿನ ನಾಯಕ ಪಟ್ಟವನ್ನು ವಿರಾಟ್ ಕೊಹ್ಲಿ ಪಡೆದುಕೊಂಡಿದ್ದು 2012ರಲ್ಲಿ. 2011ರಲ್ಲಿ ತಂಡವನ್ನು ಫೈನಲ್ಗೆ ತಲುಪಿಸಿದ್ದ ನ್ಯೂಜಿಲೆಂಡ್‌ನ‌ ಡೇನಿಯೆಲ್ ವೆಟ್ಟೊರಿ 2012ರಲ್ಲಿ ಗಳಿಸಿದ್ದು ಬರೀ 5 ಐದು ವಿಕೆಟ್! ಅದರ ಪರಿಣಾಮ ಅವರು ತಂಡದಿಂದ ಹೊರಗುಳಿದರು. ಇದು ಕೊಹ್ಲಿಯನ್ನು ಪಟ್ಟಕ್ಕೇರಿಸಿತು.

ಆಸ್ಟ್ರೇಲಿಯ ದಂತಕಥೆ ರಿಕಿ ಪಾಂಟಿಂಗ್‌ ಮುಂಬಾಯಿ ತಂಡ ಕೂಡಿಕೊಳ್ಳುವುದರ ಜತೆಗೆ ನಾಯಕರಾಗಿ ಆಯ್ಕೆಯಾದರು. ಆದರೆ 6 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 52 ರನ್‌. ಇದರಿಂದ ಬೇಸತ್ತ ಅವರು ನಾಯಕತ್ವವನ್ನು ರೋಹಿತ್‌ ಶರ್ಮಗೆ ನೀಡಿ, ತಾವು ಹೊರಗುಳಿದರು.

ವೆÓr್ ಇಂಡೀಸ್‌ ಅನ್ನು ಎರಡು ಬಾರಿ ಟಿ20 ಚಾಂಪಿಯನ್‌ ಮಾಡಿರುವ ಡ್ಯಾರೆನ್‌ ಸ್ಯಾಮಿ, 2014ರ ಕೊನೆಯ ಹಂತದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕರಾದರು.

2015ರ ಐಪಿಎಲ್ ಆರಂಭದಲ್ಲಿ ಶೇನ್‌ ವಾಟ್ಸನ್‌. 2016ರ ಐಪಿಎಲ್ ಆವೃತ್ತಿಯಲ್ಲಿ ಡೇವಿಡ್‌ ಮಿಲ್ಲರ್‌, ಕೋಲ್ಕತ ತಂಡದ ಅತ್ಯಂತ ಯಶಸ್ವಿ ನಾಯಕ ಗೌತಮ್‌ ಗಂಭೀರ್‌ 2018ರಲ್ಲಿ ತಾವು ತಂಡದಿಂದಲೇ ಹೊರಗುಳಿದರು.

2019:ಅಜಿಂಕ್ಯ ರಹಾನೆಯಿಂದ ಸ್ಟೀವ್‌ ಸ್ಮಿತ್‌ಗೆ ಈ ಬಾರಿ ಐಪಿಎಲ್ನ ಅತ್ಯಂತ ವಿಫ‌ಲ ತಂಡಗಳಲ್ಲಿ ರಾಜಸ್ಥಾನ್‌ ರಾಯಲ್ಸ್ಗೆ 2ನೇ ಸ್ಥಾನ. ಮೊದಲ ಸ್ಥಾನ ಬೆಂಗಳೂರಿಗೆ. ರಾಜಸ್ಥಾನದ ಈ ವೈಫ‌ಲ್ಯದ ಪರಿಣಾಮ ಅಜಿಂಕ್ಯ ರಹಾನೆ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಆ ಹೊಣೆಗಾರಿಕೆ ಈಗ ಆಸ್ಟ್ರೇಲಿಯದ ಸ್ಟೀವ್‌ ಸ್ಮಿತ್‌ಗೆ ಸಿಕ್ಕಿದೆ. ಆದರೂ ಈಗಾಗಲೇ ತಡವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next