Advertisement

ಪಾಂಡೆ ಪರಾಕ್ರಮ; ಭಾರತ “ಎ’ರೋಚಕ ಜಯ

07:45 AM Aug 05, 2017 | Team Udayavani |

ಪ್ರಿಟೋರಿಯಾ: “ಎ’ ತಂಡಗಳ ತ್ರಿಕೋನ ಸರಣಿಯ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನಾಯಕ ಮನೀಷ್‌ ಪಾಂಡೆ ಸಾಹಸದಿಂದ ಭಾರತ ಆತಿಥೇಯ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಒಂದು ವಿಕೆಟ್‌ ಅಂತರದಿಂದ ಸೋಲಿಸಿದೆ.

Advertisement

ಗುರುವಾರ ಇಲ್ಲಿನ “ಎಲ್‌ಸಿ ಡಿ ವಿಲಿಯರ್ ಓವಲ್‌’ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ಕೀಪರ್‌ ಹೆನ್ರಿಕ್‌ ಕ್ಲಾಸೆನ್‌ ಅವರ ಶತಕ ಸಾಹಸದಿಂದ (127) 48.2 ಓವರ್‌ಗಳಲ್ಲಿ 266 ರನ್‌ ಪೇರಿಸಿ ಸವಾಲೊಡ್ಡಿತು.

ಭಾರತ ಸಾಕಷ್ಟು ಆತಂಕದ ಕ್ಷಣಗಳನ್ನು ಎದುರಿಸಿದರೂ ಇದನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿ 49.4 ಓವರ್‌ಗಳಲ್ಲಿ 9 ವಿಕೆಟಿಗೆ 267 ರನ್‌ ಬಾರಿಸಿ ಗೆಲುವು ಸಾಧಿಸಿತು. ಆಗ ಪಾಂಡೆ 93 ರನ್‌ ಬಾರಿಸಿ ಅಜೇಯರಾಗಿದ್ದರು (85 ಎಸೆತ, 5 ಬೌಂಡರಿ, 2 ಸಿಕ್ಸರ್‌).

ಭಾರತ “ಎ’ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್‌ 68 ರನ್‌ ಬಾರಿಸಿದ ಸಂಜು ಸ್ಯಾಮ್ಸನ್‌ (90 ಎಸೆತ, 5 ಬೌಂಡರಿ, 2 ಸಿಕ್ಸರ್‌). ರಿಷಬ್‌ ಪಂತ್‌ 20 ಮತ್ತು ಕೆಳ ಸರದಿಯಲ್ಲಿ ಆಡಲಿಳಿದ ಕೃಣಾಲ್‌ ಪಾಂಡ್ಯ 25 ರನ್‌ ಹೊಡೆದರು. ಪಾಂಡೆ-ಪಾಂಡ್ಯ 8ನೇ ವಿಕೆಟಿಗೆ 35 ರನ್‌ ಒಟ್ಟುಗೂಡಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ಭಾರತದ ಪರ ಶಾದೂìಲ್‌ ಠಾಕೂರ್‌ 4, ಸಿದ್ಧಾರ್ಥ ಕೌಲ್‌ 3 ವಿಕೆಟ್‌ ಕಿತ್ತರು. ಶತಕವೀರ ಕ್ಲಾಸೆನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಇದರೊಂದಿಗೆ ಆಫ್ರಿಕಾ ಎದುರಿನ ಆರಂಭಿಕ ಪಂದ್ಯದಲ್ಲಿ ಅನುಭವಿಸಿದ 2 ವಿಕೆಟ್‌ ಸೋಲಿಗೆ ಭಾರತ “ಎ’ ಸೇಡು ತೀರಿಸಿಕೊಂಡಿತು. ಇತ್ತಂಡಗಳು ಆ. 8ರಂದು ನಡೆಯುವ ಫೈನಲ್‌ನಲ್ಲಿ ಪುನಃ ಮುಖಾಮುಖೀಯಾಗಲಿವೆ.

Advertisement

ಕೂಟದ ತೃತೀಯ ತಂಡವಾದ ಅಫ್ಘಾನಿಸ್ಥಾನ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದ್ದು, ಶನಿವಾರ ಕೊನೆಯ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next