ಲಂಡನ್: ಏಕಾಂಗಿಯಾಗಿ ಯಾರ ಸಹಾಯವೂ ಇಲ್ಲದೇ ದಕ್ಷಿಣ ಧ್ರುವವನ್ನು ಏರುವ ಮೂಲಕ ಭಾರತೀಯ ಮೂಲದ ಬ್ರಿಟಿಷ್ ಸಿಖ್ ಸೇನಾಧಿಕಾರಿ ಮತ್ತು ಫಿಸಿಯೋಥೆರಪಿಸ್ಟ್, 32 ವರ್ಷದ ಕ್ಯಾಪ್ಟನ್ ಹರ್‌ಪ್ರೀತ್ ಚಾಂದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಿದ ಮೊದಲ ಶ್ವೇತ ವರ್ಣೀಯರಲ್ಲದ ಸಮುದಾಯದ ಮೊದಲ ಮಹಿಳೆ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.
ಮೈನಲ್ 50 ಡಿ.ಸೆ.ನ ಕೊರೆಯುವ ಚಳಿಯಲ್ಲಿ, ಗಂಟೆಗೆ 60 ಮೈಲು ವೇಗದಲ್ಲಿ ಬೀಸುವ ಗಾಳಿಯ ನಡುವೆಯೇ 1,127 ಕಿಮೀ ದೂರವನ್ನು ಸಂಚರಿಸಿರುವ ಹರ್‌ಪ್ರೀತ್, ತಮ್ಮ ಟ್ರೆಕಿಂಗ್‌ನ 40ನೇ ದಿನದಂದು ಈ ವಿಚಾರವನ್ನು ಲೈವ್ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಶತ್ರು ರಾಷ್ಟ್ರದೊಂದಿಗೆ ಕಾಂಗ್ರೆಸ್ ಸಂವಾದ : ಇದು ರಾಷ್ಟ್ರ ವಿರೋಧಿ ಚಿಂತನೆ ; ಕಾರ್ಣಿಕ್
“3 ವರ್ಷಗಳ ಹಿಂದೆ ಈ ಧ್ರುವೀಯ ಲೋಕದ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಈಗ ಇಲ್ಲಿಗೇ ಬಂದು ತಲುಪಿದ್ದೇನೆ. ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಬರೆದಿದ್ದಾರೆ.