Advertisement

ಕ್ಯಾ| ಬ್ರಿಜೇಶ್‌ ಚೌಟ ವಿಜಯ ಪತಾಕೆ; ವಿಜಯಕ್ಕೆ ತಡೆಯಾಗದ ಕಾಂಗ್ರೆಸ್‌ನ ಪದ್ಮರಾಜ್‌ ಪ್ರತಿರೋಧ

12:22 AM Jun 05, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮೂರು ದಶಕಗಳ ಜಯದ ಸರದಿಯನ್ನು ಮುಂದುವರಿಸಿದೆ. ಈ ಬಾರಿ 1,49,208 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಕಾಂಗ್ರೆಸ್‌ನ ಪದ್ಮರಾಜ್‌ ಆರ್‌. ಪೂಜಾರಿ ಅವರನ್ನು ಸೋಲಿಸಿದ್ದಾರೆ.

Advertisement

ಚೌಟ 7,64,132 ಮತ ಗಳಿಸಿದರೆ ಪದ್ಮರಾಜ್‌ 6,14,924 ಮತ ಪಡೆದಿದ್ದಾರೆ. ಈ ಬಾರಿ ಒಟ್ಟು ಮತಗಳಲ್ಲಿ ಶೇ. 53.97 ಅನ್ನು ಬಿಜೆಪಿ ಗಳಿಸಿದ್ದರೆ ಕಾಂಗ್ರೆಸ್‌ಗೆ ಶೇ. 43.43 ಪ್ರಾಪ್ತವಾಯಿತು. ಈ ಬಾರಿ ರೋಚಕತೆ ಸೃಷ್ಟಿಸುವಂತಹ ಮೂರನೇ ಪಾರ್ಟಿಯಾಗಲೀ, ವ್ಯಕ್ತಿಯಾಗಲೀ ಇರಲಿಲ್ಲ. ಕಳೆದ ಬಾರಿ 46,839 ಮತ ಗಳಿಸಿದ್ದ ಎಸ್‌ಡಿಪಿಐ ಈ ಬಾರಿ ಇಂಡಿ ಒಕ್ಕೂಟಕ್ಕೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮಂಗಳವಾರ ಬೆಳಗ್ಗೆ ಮತಎಣಿಕೆ ಕಾರ್ಯವು ಬಿಗಿಭದ್ರತೆಯಲ್ಲಿ ಆರಂಭಗೊಂಡಿತು. 19 ಹಂತಗಳಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಪ್ರತಿ ಹಂತಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು.

ಭದ್ರಕೋಟೆಯಲ್ಲೂ ಆತಂಕವಿತ್ತು!
ನಿರಾಯಾಸವಾಗಿ ಗೆಲುವು ಸಾಧಿಸುತ್ತೇವೆ, ಪ್ರಚಾರಕ್ಕೆ ಹೆಚ್ಚು ಯತ್ನ ಬೇಕಾಗಿಲ್ಲ ಎಂದು ಬಿಜೆಪಿ ಅಂದುಕೊಂಡಿದ್ದ ಕ್ಷೇತ್ರ ದಕ್ಷಿಣ ಕನ್ನಡ. ಆದರೂ ಪ್ರಚಾರದ ವೇಳೆ ಪಕ್ಷದ ಆಂತರಿಕ ವಲಯದಲ್ಲೇ ಗೆಲುವಿಗೆ ಕಷ್ಟ ಪಡಬೇಕು ಎಂಬ ಸಣ್ಣ ಒತ್ತಡ ಸೃಷ್ಟಿಯಾಗಿತ್ತು. ಆದರೆ ಕೊನೆಗೆ ದೊಡ್ಡ ಜಯ ಒಲಿದು ಬಂತು.

ದ.ಕ. ಕೇಸರಿ ಭದ್ರಕೋಟೆ ಎಂದುಕೊಂಡಿರುವಾಗಲೇ ಬಿಜೆಪಿ ಕಾರ್ಯಕರ್ತರಲ್ಲಿ ಬೆವರು ಮೂಡಿಸಿತ್ತು ಕಾಂಗ್ರೆಸ್‌. ಒಂದೆಡೆ ಯಾವುದೇ ಕಳಂಕವಿಲ್ಲದ ಅಭ್ಯರ್ಥಿಯಾಗಿರುವುದು, ಈ ಬಾರಿ ಜಾತಿ ರಾಜಕಾರಣ ಕೆಲಸ ಮಾಡುತ್ತದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಯಶಸ್ವಿಯಾಗಿ ಪ್ರಚುರಗೊಂಡಿದ್ದ ಕಾರಣ ಬಿಜೆಪಿ ಪ್ರಚಾರದ ಸಂದರ್ಭ ಒಂದಷ್ಟು ದಿಗಿಲುಗೊಂಡಿತ್ತು.

Advertisement

ಆರಂಭದಲ್ಲೇ ಯಾವುದೇ ಗೊಂದಲವಿಲ್ಲದೆ ಅಭ್ಯರ್ಥಿಯ ಹೆಸರು ಪ್ರಕಟವಾಗಿದ್ದು ಕ್ಯಾ| ಬ್ರಿಜೇಶ್‌ಚೌಟರಿಗೂ ಅನುಕೂಲವಾಯಿತು. ಪ್ರಚಾರಕ್ಕೆಸಮಯ ಸಿಕ್ಕಿತ್ತು. ಕಾಂಗ್ರೆಸ್‌ನ ಸವಾಲು ಎದುರಿಸುವುದಕ್ಕಾಗಿ ಪ್ರಚಾರ ಬಿರುಸುಗೊಳಿಸಲಾಯಿತು. ಮಾಜಿ ಯೋಧ, ದೇಶಪ್ರೇಮಿ, ಸುಶಿಕ್ಷಿತ ಅಭ್ಯರ್ಥಿ ಎನ್ನುವ ಅಂಶವನ್ನು ಪ್ರಚುರ ಪಡಿಸಲಾಯಿತು.

“ಚಾವಡಿ ಸಭೆ’ಯ ತಂತ್ರಗಾರಿಕೆ
ಬಿಜೆಪಿಯಿಂದ ಆರಂಭದಲ್ಲಿ ಕಾರ್ಯಕರ್ತರ ಪ್ರಚಾರ ಕಾರ್ಯ ತುಸು ಮಂದಗತಿಯಲ್ಲೇ ಸಾಗುತ್ತಿರುವುದು ಸಂಘ ಪರಿವಾರದ ಗಮನಕ್ಕೆ ಬಂದಿತ್ತು. ಮೋದಿ ಹೆಸರು ಹೇಳಿದರೆ ಸಾಕು ವೋಟು ಬೀಳುತ್ತದೆ ಎಂಬ ಭ್ರಮೆಯಲ್ಲಿ ಕಾರ್ಯಕರ್ತರು, ನಾಯಕರಿದ್ದರು. ಪ್ರಚಾರಕ್ಕೆ ಅವರನ್ನೇ ನೆಚ್ಚಿಕೊಂಡರೆ ಕಷ್ಟ ಎನ್ನುವುದು ಅರಿತುಕೊಂಡ ಸಂಘ ಪರಿವಾರದ ಮಂದಿ ತಮ್ಮದೇ ರೀತಿಯಲ್ಲಿ “ಚಾವಡಿ ಸಭೆ’ ಆಯೋಜಿಸಿದರು. ಸಾಮಾನ್ಯವಾಗಿ 20-40 ಮಂದಿ
ಯನ್ನು ಸೇರಿಸಿ ಅವರಲ್ಲಿರುವ ಸಂಶಯ, ಪ್ರಶ್ನೆಗಳಿಗೆ ಉತ್ತರಿಸುವುದು, ಕೇಂದ್ರ ಸರಕಾರ ನಡೆಸಿರುವ ಕಾರ್ಯಗಳ ಬಗ್ಗೆ ವಿವರಿಸುವುದು ಇದರ ಮುಖ್ಯ ಅಂಗ. ಪಕ್ಷದ ಬ್ಯಾನರ್‌ ಇಲ್ಲದೆ ನೇರವಾಗಿ ಹಾಗೂ ಔಪಚಾರಿಕತೆ ಇಲ್ಲದೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ 300-400 ಸಭೆಗಳನ್ನು ನಡೆಸಲಾಗಿದೆ.

ನಡೆಯದ ಜಾತಿ ರಾಜಕಾರಣ
ಇದುವರೆಗೆ ಜಾತಿ ಕಾರಣ ಸುಳಿಯದಿದ್ದ ದಕ್ಷಿಣ ಕನ್ನಡದಲ್ಲೂ ಈ ಬಾರಿ ನಸುವಾಗಿ ಜಾತಿ ಮಾತು ಕೇಳಿ ಬರತೊಡಗಿತ್ತು. ಜಿಲ್ಲೆಯಲ್ಲಿ ಬಿಲ್ಲವರ ಸಂಖ್ಯೆ ದೊಡ್ಡದಾಗಿದೆ. ಬಿಲ್ಲವ ಮತದಾರರು ಈ ಬಾರಿ ಬಿಜೆಪಿ ಪರವಾಗಿ ನಿಲ್ಲಲಾರರು, ಅಲ್ಲದೆ ಕಾಂಗ್ರೆಸ್‌ನಿಂದ ಬಿಲ್ಲವರ ಸಂಘಟನೆಯಲ್ಲೇ ತೊಡಗಿಸಿಕೊಂಡ ಪದ್ಮರಾಜ್‌ ಅಭ್ಯರ್ಥಿಯಾಗಿರುವುದರಿಂದ ಅವರ ಕೈ ಬಿಡಲಾರರು ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇತ್ತು. ಆದರೆ ಈ ಲೆಕ್ಕಾಚಾರ ವಕೌìಟ್‌ ಆದಂತಿಲ್ಲ. ಹಿಂದಿನಂತೆಯೇ ಈ ಬಾರಿಯೂ ಹಿಂದುತ್ವವೇ ಪ್ರಮುಖವಾಗಿ ಹೊರಹೊಮ್ಮಿತು.

ಪುತ್ತಿಲ ಪರಿವಾರ ಸಹಕಾರಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಪುತ್ತೂರಿನಲ್ಲಿ ಸೆಡ್ಡು ಹೊಡೆದು ಬಳಿಕ ಪಕ್ಷಕ್ಕೇ ಸವಾಲಾಗಿದ್ದ ಹಿಂದೂ ಮುಖಂಡ ಅರುಣ್‌ ಪುತ್ತಿಲ ಅವರನ್ನು ಬಿಜೆಪಿ ಸಮಾಧಾನ ಪಡಿಸಿ ಪಕ್ಷಕ್ಕೆ ಸೇರಿಸಿಕೊಂಡದ್ದು ಕೂಡ ಮಹತ್ವದ ಪಾತ್ರ ವಹಿಸಿದೆ. ಪುತ್ತೂರು ಭಾಗದಲ್ಲಿ ಪುತ್ತಿಲ ಪರಿವಾರ ಬಿಜೆಪಿ ಗೆಲುವಿಗೆ ಸಾಕಷ್ಟು ಬೆವರು ಸುರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next