Advertisement
ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಕ್ಯಾ.ಅಮರೀಂದರ್ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಗುರುವಾರ ಈ ಊಹಾಪೋಹಗಳಿಗೆ ಸ್ವತಃ ಅಮರೀಂದರ್ ಅವರೇ ತೆರೆ ಎಳೆದಿದ್ದು, “ನಾನು ಕಾಂಗ್ರೆಸ್‌ನಿಂದ ಹೊರಬರುವುದು ಖಚಿತ. ಆದರೆ, ಬಿಜೆಪಿಗೆ ಹೋಗುವುದಿಲ್ಲ’ ಎಂದಿದ್ದಾರೆ.
Related Articles
Advertisement
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನವ್ ಜೋತ್ ಸಿಂಗ್ ಸಿಧು ಅವರೇ ಮುಂದುವರಿ ಯುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಚರಣ್ ಜಿತ್ ಸಿಂಗ್ ಛನ್ನಿ ಮತ್ತು ಸಿಧು ನಡುವಿನ ಮಾತುಕತೆ ಯಲ್ಲಿ ಪ್ರಸ್ತಾಪವಾಗಿದೆ. ಡಿಜಿಪಿ ನೇಮಕ, ಸಂಪುಟ ದಲ್ಲಿ ಕಳಂಕಿತ ನಾಯಕರಿಗೆ ಸ್ಥಾನ ನೀಡಿರುವ ಬಗ್ಗೆ ಸೇರಿದಂತೆ ಸಿಧು ಎತ್ತಿರುವ ಆಕ್ಷೇಪಗಳಿಗೆ ಸೂಕ್ತವಾಗಿ ಸ್ಪಂದಿಸುವ ಬಗ್ಗೆ ಸಿಎಂ ಛನ್ನಿ ಒಪ್ಪಿಕೊಂಡಿ ದ್ದಾರೆ.
ಅ.4ರಂದು ರಾಜ್ಯ ಸಂಪುಟ ಸಭೆ ನಡೆಯಲಿದ್ದು, ಆಗ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಮಾತುಕತೆ ಬಳಿಕ ಮಾತನಾಡಿ ಶಾಸಕ ಗುರುದೀಪ್ ಸಿಂಗ್ ಶಾಪಿನಿ ಸಿಧು ರಾಜಿನಾಮೆ ವಾಪಸ್ ಪಡೆಯಲು ಒಪ್ಪಿದ್ದಾರೆ ಎಂದರು.
ಟ್ವಿಟರ್ ಪ್ರೊಫೈಲ್ ಬದಲು
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕ್ಯಾ. ಅಮರೀಂದರ್ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಅನ್ನು ಬದಲಿಸಿದ್ದಾರೆ. “ನಿವೃತ್ತ ಸೇನಾಧಿಕಾರಿ, ಪಂಜಾಬ್‌ನ ಮಾಜಿ ಸಿಎಂ, ರಾಜ್ಯಕ್ಕಾಗಿ ಸೇವೆಯ ಮುಂದುವರಿಕೆ’ ಎಂದು ಬರೆದುಕೊಂಡಿದ್ದಾರೆ. ಎಲ್ಲೂ ಕಾಂಗ್ರೆಸ್ ಪಕ್ಷದ ಕುರಿತು ಉಲ್ಲೇಖ ಮಾಡಿಲ್ಲ. ಮತ್ತೂಂದೆಡೆ ಭಾರತೀಯ ಫುಟ್ಬಾಲ್ ತಂಡದ ಗೋಲ್‌ಕೀಪರ್ ಅ ದರ್ ಸಿಂಗ್ ಅವರಿಗೆ ಹೊಸ ಸಮಸ್ಯೆ ಎದುರಾಗಿದೆ. ಮಾಜಿ ಸಿಎಂ ಅಮರೀಂದರ್ ಸಿಂಗ್ ಅವರಿಗೆ ಎಂದು ಟ್ಯಾಗ್ ಮಾಡಿ, ಕೆಲವು ಪತ್ರಕರ್ತರು ಟ್ವೀಟ್ ಮಾಡಿರುವುದು ಫುಟ್ಬಾಲ್ ಆಟಗಾರನಿಗೆ ತಪ್ಪಾಗಿ ತಲುಪಿದೆ. ಹೀಗಾಗಿ, “ನಾನು ಪಂಜಾಬ್‌ನ ಮಾಜಿ ಸಿಎಂ ಅಲ್ಲ. ಭಾರತೀಯ ಫುಟ್ಬಾಲ್ ತಂಡದ ಗೋಲ್‌ಕೀಪರ್ ಅಮರೀಂದರ್ ಸಿಂಗ್. ದಯ ವಿಟ್ಟು ನನಗೆ ಟ್ಯಾಗ್ ಮಾಡಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.