ಕ್ಯಾಪ್ಸಿಕಂ- 2, ಬಟಾಣಿ 1 ಹಿಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಳ್ಳುಳ್ಳಿ 6 ಎಸಳು, ಈರುಳ್ಳಿ- 2, ಟೊಮೆಟೊ- 2, ಬಾಸ್ಮತಿ ಅಕ್ಕಿ- 500ಗ್ರಾಂ, ಎಣ್ಣೆ ಅಥವಾ ತುಪ್ಪ ಅಥವಾ ಡಾಲ್ಡಾ (ಕರಿಯಲು), ಚಕ್ಕೆ – 1 ರಿಂದ 2 ಚೂರು, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸ್ವಲ್ಪ, ಜೀರಿಗೆ – 1 ಟೀ ಚಮಚ, ಹಸಿಮೆಣಸು – 2 ರಿಂದ 3, ಕೊತ್ತಂಬರಿ ಕಟ್ಟು, ಪಲಾವ್ ಪೌಡರ್ 4 ಟೀ ಚಮಚ, ಕ್ಯಾರೆಟ್ – 2.
Advertisement
ತಯಾರಿಸುವ ವಿಧಾನ:ಕ್ಯಾಪ್ಸಿಕಂ, ಕ್ಯಾರೆಟ್, ಟೊಮೆಟೊ, ಹಸಿಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಕ್ಯಾಪ್ಸಿಕಮ್ ಮತ್ತು ಕ್ಯಾರೆಟನ್ನು ತೆಳ್ಳಗೆ ಉದ್ದವಾಗಿ ಹೆಚ್ಚಿ. ಟೊಮೆಟೊ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಹೆಚ್ಚಿದ ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪಿನ ಜೊತೆಗೆ ಬೆಳ್ಳುಳ್ಳಿ 6 ಎಸಳು, ಚಕ್ಕೆ 1 ಚೂರು, ಹಸಿ ಮೆಣಸು- 2, ಹಾಕಿ ರುಬ್ಬಿಕೊಳ್ಳಿ. 15 ನಿಮಿಷ ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದಿಟ್ಟುಕೊಳ್ಳಬೇಕು. ಒಂದು ಕುಕ್ಕರಿನಲ್ಲಿ ಎಣ್ಣೆಯನ್ನು ಹಾಕಿ ಕಾದ ನಂತರ ಒಂದು ಚೂರು ಚಕ್ಕೆ, ಜೀರಿಗೆ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಹೆಚ್ಚಿಕೊಂಡ ತರಕಾರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಫ್ರೈ ಮಾಡುವಾಗ ರುಬ್ಬಿಕೊಂಡ ಮಿಶ್ರಣ, ಉಪ್ಪು ಮತ್ತು ತುಪ್ಪ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಬೇಕು. ಈಗ ನೆನೆಸಿಟ್ಟ ಅಕ್ಕಿ ಹಾಕಿ. ಅದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಕುಕ್ಕರಿನಲ್ಲಿ 3 ಸೀಟಿ ಹೊಡೆಸಬೇಕು. ನಂತರ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ. (ಇದಕ್ಕೆ ಬೇಕಾದರೆ ಗೋಡಂಬಿ, ದ್ರಾಕ್ಷಿ ಮತ್ತು ಪನೀರನ್ನು ಸೇರಿಸಬಹುದು. ಪನೀರ್‌ಅನ್ನು ಹಾಕುವುದಾದರೆ, ತುರಿದು ಹಾಕಿ)