Advertisement

ಮಕರರಾಶಿಯವರೇ, ನಿಮ್ಮ ಗುಣಗಳು ಹೀಗಿವೆ ನೋಡಿ…

06:27 AM Sep 03, 2016 | Team Udayavani |

ಸಂಸ್ಕೃತದಲ್ಲಿ ಮಕರ ಎಂದರೆ ಮೊಸಳೆ. ಹೀಗಾಗಿ ಭಾರತೀಯ ಜೋತಿಷ್ಯಶಾಸ್ತ್ರ ಈ ರಾಶಿಯನ್ನು ಜಲರಾಶಿಯನ್ನಾಗಿ ಪರಿಗಣಿಸುತ್ತದೆ.  ಈ ರಾಶಿಯಲ್ಲಿ ಸಮಾವೇಶಗೊಳ್ಳುವ ಜನ ಸಧೃಢರಾಗಿದ್ದು ಬಹಳಷ್ಟು ಎತ್ತರದ ಕಟ್ಟುಮಸ್ತಾದ ಆಳುಗಳಾಗಿರುತ್ತಾರೆ. ಶನೈಶ್ಚರನ ಉಪಸ್ಥಿತಿಗೆ ವ್ಯತಿರಿಕ್ತ ಪ್ರಭಾವಗಳನ್ನು ರಾಹು ಕೇತುಗಳ್ಳೋ ಕುಜ ಅಥವಾ ಸೂರ್ಯರೋ ಉಂಟು ಮಾಡಿದ್ದಲ್ಲಿ ದೃಢಕಾಯವನ್ನು ಈ ರಾಶೀಯವರು ಹೊಂದಿರಲಾರರು. ಸೂರ್ಯನು ಮಕರರಾಶಿಯವರ ಪಾಲಿಗೆ ಅನಿಷ್ಟಗಳನ್ನೇ ಗಂಟುಹಾಕುತ್ತಾನೆ. ಚಂದ್ರ ಕೂಡಾ ಇದಕ್ಕೆ ಹೊರತಾಗಿಲ್ಲ. ಈ ರಾಶಿಯ ಜನ ಎಂಥದೇ ರೀತಿಯ ಪ್ರತಿಕೂಲ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುತ್ತಾರೆ. ಆದರೆ ಕುಜ ದೋಷ ಒದಗಿಬಂದಾಗ ಚಂದ್ರನಿಗೆ ಶುಕ್ರನ ಕಾರಣದಿಂದ ಬಲ ಕುಂಟಿತ ಗೊಂಡಲ್ಲಿ ಲೈಂಗಿಕ ವಿಚಾರಗಳಲ್ಲಿ ಪರದಾಡುತ್ತಾರೆ. 

Advertisement

ಸ್ಪುರದ್ರೂಪಿಗಳಾಗಿದ್ದೂ  ಈ ರೀತಿಯಲ್ಲಿ ತೊಂದರೆ ಇರುವ ಜನರು ಲೈಂಗಿಕ ಶೋಷಣೆ ಅಥವಾ ಲೈಂಗಿಕ ಸುಖದ ಸಲುವಾಗಿನ ಕೊರತೆಯಿಂದ ಬಳಲುತ್ತಾರೆ. ಬಾಳ ಸಂಗಾತಿಗಳು ಇವರಿಗೆ ಮೋಸ ಮಾಡುವ, ಕೈಕೊಡುವ ಸಂದರ್ಭಗಳು ಹೇರಳ. ಅನೇಕರಲ್ಲಿ ಅನುರಕ್ತರಾಗಿಯಯೂ ಅರ್ಥರಹಿತದ ವೈವಾಹಿಕ ಜೀವನದಲ್ಲಿ ನರಳುತ್ತಿರುತ್ತಾರೆ. ಬಾಳ ಸಂಗಾತಿಗಿನ ಆಯ್ಕೆ ದಾರಿ ತಪ್ಪುವ ಸಂಭವ ಜಾಸ್ತಿ. ಇದು ಒಂದು ರೀತಿಯ ಪ್ರಾರಬ್ಧವೇ ಆಗಿ ಕಗ್ಗಂಟಾಗುತ್ತದೆ. 
ಬಹುತೇಕವಾಗಿ ಆರ್ಥಿಕ ಸ್ಥಿರತೆ, ಹಿಡಿತಗಳಿಗಾಗಿ ಕಾತರಿಸುತ್ತಾರಾದರೂ ಆರ್ಥಿಕ ಸಮತೋಲನ ಕೈ ಮೀರಿ ವ್ಯತಿರಿಕ್ತವಾಗಿಯೇ ಬೆಳೆದು ವಿಷಮಾವಸ್ಥೆಗೆ ತಲುಪಿಸುತ್ತದೆ. ಮಕರ ರಾಶಿಯವರಿಗೆ ಮಾರಕನಾದ ಕುಜನು ಲಾಭಾದಿಪತಿಯಾಗಿರುವುದು ಇದಕ್ಕೆ ಕಾರಣ. ಅನ್ಯರ ಬಗೆಗೆ ಯಾವಾಗಲೂ ಸಹಾಯ ಹಸ್ತ ಚಾಚಲು ತವಕಿಸುತ್ತಾರೆ. ಮಕರ ರಾಶಿಯವರಿಗೆ ಸಿಟ್ಟು ಬಂದರೆ ಸಾಕ್ಷಾತ್‌ ಉಗ್ರನರಸಿಂಹನೇ ಆಗಿಬಿಡುತ್ತಾರೆ. ಶುಕ್ರಗ್ರಹವು ಈ ರಾಶಿಯವರಿಗೆ ಯೋಗಕಾರಕನಾಗಿದ್ದು ದುರ್ಗಾಶಕ್ತಿಯ ಶಕ್ತಿ ಸ್ವರೂಪಿಣಿಯರ ಕೃಪಾಶೀರ್ವಾವಾದ ಇವರಿಗೆ ಸದಾ ದೊಡ್ಡ ಆಸ್ತಿಯಾಗಿದೆ. ಬುಧ ಹಾಗೂ ಶುಕ್ರರ ಸಂಯೋಜನೆ ಒಟ್ಟಿಗೆ ಇದ್ದು ಯುತಿಗೊಂಡಿದ್ದಲ್ಲಿ ಪರಸ್ಪರ ಸಮಸಪ್ತಕ ದೃಷ್ಟಿ ಹೊಂದಿದ್ದರೆ ರಾಜಯೋಗದ ಸಂಪನ್ನ ಆವರಣಗಳು ಮಕರ ರಾಶಿಯವರಿಗೆ ಸದಾ ಒಂದು ಬದುಕಿನ ಸಂಪರ್ಕದ ದೊಡ್ಡ ನಿಕ್ಷೇಪವೇ ಆಗಿದೆ. ಮಕರ ರಾಶಿಯವರು ಎದುರಿಸಬೇಕಾದ ದೊಡ್ಡ ತೊಂದರೆ ಎಂದರೆ ಮಂಡಿ ನೋವು ಮತ್ತು ಯಕೃತ್ತುಗಳ ತೊಂದರೆಗಳು. ಈ ರಾಶಿಯ ಜನ ಕುಡಿತಕ್ಕೆ ಜೋತು ಬೀಳಬಾರದು. ವಿಪುಲವಾಗಿ ಹಾಲು ಸೇವಿಸಿ.

ಮಕರ ರಾಶಿಗೆ ಸೇರಿದ ನಪ್ರಿಯ ಪ್ರತಿಭಾವಂತರು
ಭಾರತದ ಮಾಜಿ ಪ್ರಧಾನಿ ಸಾಕ್ಷಾತ್‌ ದುರ್ಗಾಶಕ್ತಿ ಎಂದು ಬಣ್ಣಿಸಲ್ಪಟ್ಟ ಶ್ರೀಮತಿ ಇಂದಿರಾಗಾಂಧಿ ಬದುಕಿನ ಸುಖದುಃಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿದ ದಿಟ್ಟ ಮಹಿಳೆ. ದುರಂತಮಯ ಸಾವನ್ನು ಚಂದ್ರ ಹಾಗೂ ಶನೈಶ್ಚರರ ಪರಸ್ಪರ ಪರಿವರ್ತನಾಯೋಗದಲ್ಲಿ ಎದುರಿದಬೇಕಾಗಿ ಬಂತು. ಉತ್ತಮ ರಾಜಕೀಯ ಮುತ್ಸದ್ದಿಗಳಾದ ಮೊಘಲ್‌ ಚಕ್ರಾದಿಪತ್ಯದ ಅಕºರ್‌ ಹೆಚ್ಚಾಕಡಿಮೆ ಮೂರೂವರೆ ದಶಕಗಳ ಕಾಲ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಪ್ರಶ್ನಾತೀತರಾಗಿದ್ದ ಜ್ಯೋತಿಬಸು, ರಷ್ಯಾದ ಮಾಜಿ ಅಧ್ಯಕ್ಷ ಬ್ರಿಝೊ°àವ್‌ ತರುಣ ರಾಜಕಾರಣದಲ್ಲಿ ಹೆಸರು ಮಾಡುತ್ತಿರುವ ವರುಣ್‌ ಗಾಂಧಿ, ಅಮೆರಿಕದಲ್ಲಿ ಕಪ್ಪು ವರ್ಣೀಯರ ಬವಣೆಗಳ ನಿವಾರಣೆಗಾಗಿ ಹಂತಕನ ಗುಂಡಿಗೆ ಎದೆ ಒಡ್ಡಿದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌, ಎತ್ತರಪ್ರದೇಶದ ದಲಿತರ ಕಣ್ಮಣಿ ಮಾಜಿ ಮುಖ್ಯಮಂತ್ರಿ  ಮಾಯಾವತಿ,  ಸಾಮ್ರಾಜ್ಯ ಶಾ ನೆಪೋಲಿಯನ್ನ ಬೋನಾಪಾರ್ಟ್‌ ಹಗರಣದಿಂದಾಗಿ ಅಧಿಕಾರದಿಂದ ಹೊರದೂಡಿಸಿಕೊಂಡ ರಿಚರ್ಡ್‌ನಿಕ್ಸನ್‌, ಜಾಗತಿಕ ಮಟ್ಟದಲ್ಲೇ ಅತ್ಯಂತ ಜನಪ್ರಿಯ ಸಿನಿಮಾ ನಟ ರಜನೀಕಾಂತ್‌,  ತೆಲುಗು ಜನಪ್ರಿಯ ನಟ, ಮಾಜಿ ಆಂಧ್ರಪ್ರದೇಶ ಮುಖ್ಯಂತ್ರಿ ಎನ್‌ ಟಿ ರಾಮರಾವ್‌,  ತಾಂತ್ರಿಕ ತಜ್ಞನಾಗಿ, ಉತ್ತಮ ಆಡಳಿತಗಾರನಾಗಿ ಪ್ರಸಿದ್ಧರಾದ ಸರ್‌.ಎಂ ವಿಶ್ವೇಶ್ವರಯ್ಯ, ದಣಿವರಿಯದ ಹೋರಾಟಗಾರ ಜೆ.ಪಿ. ನಾರಾಯಣ್‌ ಹುಟ್ಟು ಹೋರಾಟಗಾರ್ತಿ ಮೇಧಾ ಪಾಟ್ಕರ್‌,  ಕಾಮಿನಿಯರಾಗಿ ಪುರುಷರ ಶೃಂಗಾರ ಅಭಿರುಚಿಯ ನಿಕ್ಷೇಪವನ್ನೇ ಸೂರೆಗೈದ ಹಾಲಿವುಡ್‌ ನಟಿಯರಾದ ಸೋಫಿಯಾ ಲಾರೆನ್‌, ಮರ್ಲಿನ್‌ ಮನ್ರೊà, ಬ್ರಿಟ್ನಿ ಸ್ಟಿಯರ್ಸ್‌ ಬಾಲಿವುಡ್‌ನ‌ ಕರೀನಾ ಕಪೂರ್‌ ರಾಖೀಗುಲ್ಜಾರ್‌ ಭಾರತದ ರಾಜಕೀಯ  ಕ್ಷಿತಿಜದಲ್ಲಿ ಬಿರುಗಾಳಿ ಎಬ್ಬಿಸಿದ ಚಂದ್ರಸ್ವಾಮಿ ಮುಸ್ಲಿಂ ಸಮುದಾಯದಿಂದ ಬಂದು ಭಾರತ ಚಿತ್ರರಂಗದ ದೃವತಾರೆಗಳಾದ ದಿಲೀಪ್‌ ಕುಮಾರ್‌, ಶಾರುಕ್‌ಖಾನ್‌, ಸೈಫ್ ಅಲಿ ಖಾನ್‌, ಭಾರತೀಯ ನೃತ್ಯ ಕಲೆಯ ಗಟ್ಟಿ ಶಕ್ತಿಯಾದ ಬ್ರಿಜ್‌ ಭೂಷಣ್‌, ಅಣ್ವಶಾಸ್ತ್ರ ಪಿತಾಮಹ ಹೋಮಿ ಬಾಬಾ, ಬಹುದೊಡ್ಡ ಜಾಗತಿಕ ಪುರಸ್ಕಾರವಾದ ನೊಬೆಲ್‌ ಪಾರಿತೋಷಕದ ಮೂಲಶಕ್ತಿಯಾದ ಆಲ್‌ ಫ್ರೆಡ್‌ ನೊಬೆಲ್‌  ಹೀಗೆ ಪ್ರಸಿದ್ಧ ವ್ಯಕ್ತಿಗಳ ದೊಡ್ಡಯಾದಿಯೇ ಮಕರರಾಶಿಯನ್ನು ಪಡೆದವರ ಸರತಿಯಲ್ಲಿದೆ. 

ಇಂದಿರಾ ಗಾಂಧಿ ಮತ್ತು ತುರ್ತುಸ್ಥಿತಿ
ಇಂದಿರಾಗಾಂಧಿಯವರ ಪ್ರಧಾನಿ ಪಟ್ಟದ ಸಂದರ್ಭ ಭಾರತ ಎದೆಯುಬ್ಬಿಸಿ ತಲೆಯೆತ್ತಿ ನಿಂತಿದ್ದು ಜಗತ್ತೇ ತಿಳಿದ ವಿಚಾರ. ಇವರ ರಾಶಿ ಮಕರ. ಚಂದ್ರ ಹಾಗೂ ಶನೈಶ್ಚರರ ನಡುವಣ ಪರಿವರ್ತನಾಯೋಗ ಇಂದಿರಾ ಜಾತಕದ ಮುಖ್ಯ ಅಂಶ. ದುಷ್ಟನಾದರೂ ಶನೈಶ್ಚರ ಇಂದಿರಾರನ್ನು ಮೇಲೇರಿಸಿದ್ದು ಅತಿಂಥ ರೀತಿಯಲ್ಲಲ್ಲ. ಇದೇ ಶನೈಶ್ಚರ ಸ್ವಾಮಿ ತನ್ನ ವೈರಿ ಸೂರ್ಯನನ್ನು ವಿಧವಿಧ ಕಾರಣಗಳಿಂದ ಸಂವೇದಿಸಿ ಇಂದಿರಾ ತುರ್ತುಸ್ಥಿತಿಯನ್ನು ದೇಶದ ಮೇಲೆ ಹೇರುವಂಥಾದ್ದು ಪುಟಗಟ್ಟಲೆ ವಿಶ್ಲೇಷಿಸಬಹುದಾದ ವಿಚಾರ. ಚಂದ್ರ ಹಾಗೂ ಶನೈಶ್ಚರರ ಪರಿವರ್ತನಾಯೋಗ ಇಂದಿರಾರ ಅದೃಷ್ಟವಾದರೂ ವಿರೋಧಿಗಳ ಅಪವಾದಕ್ಕೆ ಇದು ದಾರಿಯನ್ನು ಮಾಡಿತ್ತು. 

ಜೆ.ಪಿ. ಹೋರಾಟ ಮತ್ತು ತುರ್ತುಸ್ಥಿತಿ
ಶನೈಶ್ಚರನ ದೈತ್ಯಬಲದಿಂದ ಬಂಧನಗಳಿಗೆ ಅನಾರೋಗ್ಯದ ವಿಚಾರಗಳಿಗೆ ಜಯಪ್ರಕಾಶ ನಾರಾಯಣ ಹೆದರಲೇ ಇಲ್ಲ. ಇಂದಿರಾಗಾಂಧಿಯವರ ಆಡಳಿತ ವೈಖರಿಗೆ ದೊಡ್ಡ ಚಳವಳಿಯನ್ನೇ ಹುಟ್ಟು ಹಾಕಿದ ಹೋರಾಟಗಾರ ಇವರು. ಇವರ ರಾಶಿಯೂ ಮಕರರಾಶಿ. ಇವರಿಗೆ ಉತ್ತಮನಾದ ಸೂರ್ಯನು ದುಷ್ಟನಾದರೂ ಬಲಾಡ್ಯನಾದ ಶನೈಶ್ಚರನು ಪರಸ್ಪರ ವೈರಿಗಳಾದರೂ ವ್ಯವಸ್ಥೆಯ ವಿರುದ್ಧ ಹೋರಾಡಲು ಶಕ್ತಿ ನೀಡಿದರು. ಶನೈಶ್ಚರನ ಕಾರಣಗಳಿಂದ ಬಂಧನ ಅನಾರೋಗ್ಯ ಇತ್ಯಾದಿ ಸಂಭವಿಸುತ್ತಲೇ ಇದ್ದವು. ಜೆ.ಪಿ ಹೋರಾಟ ಹಾಗೂ ತುರ್ತುಸ್ಥಿತಿ ಪರಸ್ಪರ ಸಂಬಂಧ ಹೊಂದಿದ್ದವು. 

Advertisement

ಮರ್ಲಿನ್‌ ಮನ್ರೋ , ಬ್ರಿಟ್ನಿ ಸ್ಟಿಯರ್ಸ್‌ರ ತೊಳಲಾಟಗಳು ಮತ್ತು ಮಕರ ರಾಶಿ
ಸುಮಾರು ಐದು ದಶಕಗಳ ತಂದೆ ತನ್ನ ಸೌಂದರ್ಯದಿಂದ ಪ್ರೇಕ್ಷಕರನ್ನು ಕಾಡಿ ನಿದ್ದೆ ಗೆಡಿಸಿದ್ದ ಬಾಲಿವುಡ್‌ ಸುಂದರಿ ಮರ್ಲಿನ್‌ ಮನ್ರೋ  ಮಕರರಾಶಿಯವರು. ಇಂದೂ ತನ್ನ ಮಾದಕ ಚೆಲುವಿನಿಂದ ಆಕರ್ಷಿಸುತ್ತಿರುವ ಹಾಲಿವುಡ್‌ ತಾರೆ ಬ್ರಿಟ್ನಿ ಸ್ಟಿಯರ್ಸ್‌ ಕೂಡಾ ಮಕರರಾಶಿಯವರೇ. ಮರ್ಲಿನ್‌ ಅನೇಕ ಪುರುಷರ ಜೊತೆ ನಡೆದುಬಂದ ದಾರಿ ಅಮೆರಿಕಾದ ಮಾಜಿ ಅಧ್ಯಕ್ಷರೊಬ್ಬರ ಬಳಿಯಲ್ಲಿ ನಡೆದಿತ್ತೆನ್ನಲಾದ ಅವಳ ಸಲ್ಲಾಪ ನಂತರ ನಿಗೂಢ ರೀತಿಯಲ್ಲಿ 35ರ ತಾರುಣ್ಯದಲ್ಲೇ ತೀರಿಕೊಂಡ ರೀತಿ ಎಲ್ಲಾ ಈಗಲೂ ಒಂದು ಬಹು ಚರ್ಚಿತ ವಿಷಯವೇ ಆಗಿದೆ. ಬ್ರಿಟ್ನಿ ಸ್ಟಿಯರ್ಸ್‌ ಕೂಡಾ ಪುರುಷರ ಕಾರಣದಿಂದ ಪರದಾಡಿದ ರತಿ ವರ್ಚಸ್ಸಿನಿಂದ ಪುರುಷರ ನಿದ್ದೆಗೆಡಿಸಿದ್ದ ವಿಚಾರ ಚರ್ಚೆಗೊಳಗಾಗಿದು,ª ಆಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಇಬ್ಬರ ಜೀವನದ ಈ ರೀತಿಯ ಮಿಸುಕಾಟಗಳಿಗೆ ಕಾರಣವೇನಿರಬಹುದು? ಇಬ್ಬರ ಜಾತಕದಲ್ಲಿಯೂ ಹರಳುಗಟ್ಟಿರುವ ಕುಜದೋಷ ಸುಸ್ಥಿತಿಯಲ್ಲಿರದ ಇಬ್ಬರ ಜಾತಕಗಳಲ್ಲೂ ಬಾಳ ಸಂಗಾತಿಯ ಮನೆ ಅಧಿಪತಿ ಶನೈಶ್ಚರನ ಗುಣಧರ್ಮಗಳಿಂದ ಎನ್ನಬಹುದು. ಚಂದಿರ ಮರ್ಲಿನ್‌ ಮೋಹಕತೆಗೆ ಕಾರಣನಾಗಿದ್ದರೆ ಸೂರ್ಯ ಬ್ರಿಟ್ನಿಯ ಮನೋಹರ ಸೌಂದರ್ಯಕ್ಕೆ ಕಾರಣನಾಗಿದ್ದಾನೆ. ಚಂದ್ರ ಸೂರ್ಯ ಇಬ್ಬರಿಗೂ ಶನೈಶ್ಚರ ಅತ್ಯಂತ ಗರಿಷ್ಠ ಪ್ರಮಾಣದ ವೈರಿ ಎಂಬ ವಿಚಾರ ಇಲ್ಲಿ ಗಮನಾರ್ಹ.

ಅನಂತ ಶಾಸ್ತ್ರಿ  

Advertisement

Udayavani is now on Telegram. Click here to join our channel and stay updated with the latest news.

Next