Advertisement
ನಗರದಲ್ಲಿ ಜರುಗಿದ ಎಸ್‌ಯುಸಿಐ ಕಮ್ಯೂನಿಷ್ಟ ಪಕ್ಷದ ವಿಜಯಪುರ ಜಿಲ್ಲಾ ಎರಡನೇ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ವ್ಯವಸ್ಥೆ ಬದಲಾವಣೆಗಳು ಪ್ರಾರಂಭದಲ್ಲಿ ಪ್ರಗತಿಪರವಾಗಿ ವರ್ತಿಸುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆ ವ್ಯಕ್ತಿ ಸ್ವಾತಂತ್ರ್ಯಾ ಸಮಾನತೆ, ಬ್ರಾತೃತ್ವ ಎನ್ನುವ ಪ್ರಗತಿಪರ ಘೋಷಣೆಯೊಂದಿಗೆ ಬಂದಿದ್ದು, ಆ ಸಂದರ್ಭದಲ್ಲಿ ಮಾನವ ಕುಲದ ಉತ್ತಮ ಬೆಳವಣಿಗೆಯಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪೂರ್ಣಾಧಿಕಾರ ಬಂಡವಾಳಶಾಹಿಗಳ ಕೈಗೆ ಸಿಕ್ಕು ನಲುಗುತ್ತಿದೆ ಎಂದು ಕಿಡಿ ಕಾರಿದರು.
ನಿರುದ್ಯೋಗ, ಬೆಲೆ ಏರಿಕೆ, ಬಡತನ, ಭ್ರಷ್ಟಾಚಾರ, ಅಭದ್ರತೆ, ಅಸಹಿಷ್ಣುತೆ, ಕೋಮುವಾದ, ಮೂಢನಂಬಿಕೆ, ಅವೈಜ್ಞಾನಿಕತೆ, ಅತ್ಯಾಚಾರ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ರೈತರು, ಕಾರ್ಮಿಕರು ವಿದ್ಯಾರ್ಥಿ-ಯುವಕರನ್ನು, ಮಹಿಳೆಯರನ್ನು ಒಟ್ಟಾರೆ ಜನಸಾಮಾನ್ಯರನ್ನು ಪೆಡಂಭೂತವಾಗಿ ಕಾಡುತ್ತಿವೆ. ಹಾಗಾಗಿ ಇಂದು ಜನತೆ ಇದೆಲ್ಲದರ ವಿರುದ್ದ ಒಗ್ಗಟ್ಟಾಗಿ ಹೋರಾಟ ಕಟ್ಟಬೇಕಾಗಿದೆ. ಈ ಹೋರಾಟ ಅಂತಿಮವಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಹೋಗಬೇಕಾಗಿದೆ ಎಂದರು. ಸಮಾವೇಶದ ಕೊನೆಯಲ್ಲಿ ನೇಮಕವಾದ ನೂತನ ಜಿಲ್ಲಾ ಸಮಿತಿಗೆ ಪ್ರಗತಿಪರ ಹೋರಾಟ ಕಟ್ಟಲು ಪಕ್ಷದ ಸಂಘಟನೆ ವಿಸ್ತರಿಸಲು ಉತ್ಸಾಹಭರಿತರಾಗಿರಬೇಕು. ಜಿಲ್ಲೆಯಲ್ಲಿ ಎಡಪಂಥಿಯ ವಿಚಾರಗಳು ಗಟ್ಟಗೊಳ್ಳುವಲ್ಲಿ ಅನುಮಾನವಿಲ್ಲ. ವ್ಯವಸ್ಥೆಯಲ್ಲಿರುವ ಹಳೆ ವಿಚಾರಗಳು, ವ್ಯಕ್ತಿವಾದ, ಅಹಂ, ಇವುಗಳನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಪಕ್ಷದ ಆಂತರಿಕ ಹೋರಾಟ ಬೆಳೆಸಲು ಯಾವತ್ತೂ ಜಾಗರೂಕತೆ ವಹಿಸಬೇಕು ಎಂದರು.
Related Articles
Advertisement
ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ, ಭರತಕುಮಾರ, ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಎಚ್.ಗೀತಾ, ಸುನೀಲ ಸಿದ್ರಾಮಶೆಟ್ಟಿ, ಶೋಭಾ ಯರಗುದ್ರಿ, ಶಿವಬಾಳಮ್ಮ ಕೊಂಡಗೂಳಿ, ಕಾಶೀಬಾಯಿ ತಳವಾರ, ಸುಮಾ ಜೇವೋರ, ಸುರೇಖಾ, ಆಕಾಶ್, ಕಾವೇರಿ ರಜಪೂತ, ಸಂಗೀತಾ, ದ್ಯಾಮಣ್ಣ ಬಿರಾದರ, ಪ್ರೇಮಾ ಸಿದ್ರಾಮಶೆಟ್ಟಿ, ಅಂಜನಾ ಕುಂಬಾರ, ಮಾಹಾದೇವಿ ಧರ್ಮಶೆಟ್ಟಿ, ಮಹಾದೇವಿ ತೇಲಿ, ಶ್ರೀಕಾಂತ ಪಾಲ್ಗೊಂಡಿದ್ದರು.