Advertisement
ಅವರು ಉಡುಪಿ ನಗರಸಭಾ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಭಿವೃದ್ಧಿಗೆ ಇನ್ನೊಂದು ಹೆಸರು ಬಿಜೆಪಿ ಎಂಬಂತೆ ಬಿಜೆಪಿ ಆಡಳಿತಾವಧಿಯಲ್ಲಿದಾಖಲೆ ಮಟ್ಟದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿರುವುದೇ ಸಾಕ್ಷಿ. ಕೇವಲ ಅಪಪ್ರಚಾರವನ್ನೇ ಬಂಡ ವಾಳವನ್ನಾಗಿಸಿ ಕೊಂಡಿರುವ ಕಾಂಗ್ರೆಸ್ ಅಭಿವೃದ್ಧಿಯ ವಿಷಯದ ನೈಜತೆಯ ಬದಲು ಸುಳ್ಳು ಕಥೆಗಳ ಮೂಲಕ ಜನರ ದಾರಿ ತಪ್ಪಿಸುವ ಹುನ್ನಾರದಲ್ಲಿ ತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತಣ್ತೀದಡಿ ಎಲ್ಲ ವರ್ಗಗಳ ಕಲ್ಯಾಣದ ಜತೆಗೆ ಈ ಕ್ಷೇತ್ರ ವ್ಯಾಪ್ತಿಯಲ್ಲೂ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭಗೊಂಡಿದೆ ಎಂದರು.
ಮೀನುಗಾರಿಕೆ ಸಚಿವನಾಗಿದ್ದ ಸಂದರ್ಭ ಹೆಜಮಾಡಿ ಬಂದರು ಅಭಿವೃದ್ಧಿಗೆ 181 ಕೋಟಿ ರೂ. ಮಂಜೂರಾತಿಗೆ ವಿಶೇಷ ಪ್ರಯತ್ನ ನಡೆಸಿರುವ ಜತೆಗೆ ಸುವರ್ಣ ತ್ರಿಭುಜ ಬೋಟ್ ಅವಘಡದ ಪರಿಹಾರದ ಸಮಸ್ಯೆಗಳು ಎದುರಾದಾಗ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪನವರ ಬಳಿ ಮಾತನಾಡಿ ಪ್ರತೀ ಕುಟುಂಬಕ್ಕೂ ನೀಡಿರುವ ಪರಿಹಾರಕ್ಕೆ ಹೆಚ್ಚುವರಿಯಾಗಿ ತಲಾ 10 ಲಕ್ಷ ರೂ. ನೀಡಿ ಮೀನುಗಾರರ ಸಂಕಷ್ಟಕ್ಕೆ ನೆರವಾಗಿರುವಂತಹ ದಾಖಲೆ ಯಾವುದಾದರೂ ಇದ್ದರೆ ಅದು ನನ್ನ ಪ್ರಯತ್ನದ ಫಲ ಎಂದರು. ಸುಳ್ಳಿನ ಸರದಾರನಾಗಲು
ಗೋಪಾಲ ಪೂಜಾರಿ ಪೈಪೋಟಿ
ಮಾಜಿ ಶಾಸಕ ಗೋಪಾಲ ಪೂಜಾರಿ ಚುನಾವಣೆ ಪ್ರಚಾರ ಸಭೆಗಳಲ್ಲಿ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ನನ್ನ ಬಗ್ಗೆಯೂ ಸುಳ್ಳು ಹೇಳುತ್ತಾ ಸುಳ್ಳಿನ ಸರದಾರನಾಗಲು ಹೊರಟಿದ್ದಾರೆ. ಜನತೆ ಕಾಂಗ್ರೆಸ್ ನಾಯಕರ ಕೀಳು ಮಟ್ಟದ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು ತಕ್ಕ ಉತ್ತರ ನೀಡುವರು ಎಂದರು.
Related Articles
Advertisement
ಪ.ಜಾ., ಪ.ಪಂ.ಗಳ, ಹಿಂ. ವರ್ಗಗಳ ಅಭಿವೃದ್ಧಿಗೆ ಕ್ರಮ ನನ್ನ ಅವಧಿಯಲ್ಲಿ ಶೇ. 97 ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿರುವುದೇ ಒಂದು ದಾಖಲೆ. ಪ.ಜಾ., ಪ.ಪಂ.ದವರ ಎಲ್ಲ ಮಕ್ಕಳನ್ನೂ ಮುಕ್ತವಾಗಿ ಹಾಸ್ಟೆಲಿಗೆ ಸೇರಿಸಿಕೊಳ್ಳಲು ಆದೇಶವನ್ನು ಕೊಟ್ಟಿದ್ದಲ್ಲದೇ ಅನುಷ್ಠಾನವನ್ನೂ ಮಾಡಿದ್ದೇನೆ. ಹಿಂದುಳಿದ ವರ್ಗದ ಇಲಾಖೆಯಲ್ಲಿ ನಾನು ಮಂತ್ರಿಯಾಗುವವರೆಗೆ ಮಕ್ಕಳಿಗೆ ಹಾಸ್ಟೆಲ್‌ಗಳ ಕೊರತೆ ಇತ್ತು. 26,000 ಮಕ್ಕಳನ್ನು ಹಾಸ್ಟೆಲ್‌ಗೆ ಒಂದೇ ದಿವಸ ಸೇರಿಸುವಂತಹ ಆದೇಶ ಮಾಡಿ ಅನುಷ್ಠಾನ ಮಾಡಿ¨ªೆ. ಇಂದು ಹಾಸ್ಟೆಲ್ ಇಲ್ಲದೆ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೋಟ ತಿಳಿಸಿದರು. ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಅಂಬಲಪಾಡಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ಮುಖಂಡರಾದ ಹರಿಮಕ್ಕಿ ರತ್ನಾಕ ರ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಅಂಬಲಪಾಡಿ ನಗರ ಬೂತ್ ಅಧ್ಯಕ್ಷರಾದ ಜಯರಾಮ್ ಸಾಲ್ಯಾ ನ್, ಶ್ರೀಕಾಂತ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾ ರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.