Advertisement

ರಾಜಧಾನಿಯಲ್ಲಿ ವರುಣನ ಆರ್ಭಟ

10:42 AM Nov 22, 2021 | Team Udayavani |

ಬೆಂಗಳೂರು: ಭಾನುವಾರ ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ ವೇಳೆಗೆ ಮತ್ತೆ ತನ್ನ ರುದ್ರ ನರ್ತನ ಪ್ರದರ್ಶಿಸಿತು. ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಮಳೆ ರಾತ್ರಿ 10 ಗಂಟೆವರೆಗೆ ಸುರಿಯಿತು.

Advertisement

ಯಲಹಂಕ, ಯಶವಂತಪುರ, ನಾಗಸಂದ್ರ, ಟಿ.ದಾಸರಹಳ್ಳಿ, ಚಿಕ್ಕಬಾಣವಾರ, ಹಲಸೂರು, ಶಿವಾಜಿನಗರ, ಹೆಬ್ಟಾಳ, ರೇಸ್‌ ಕೋರ್ಸ್‌ ರಸ್ತೆ, ಯಲಹಂಕ ಕೋಗಿಲು ಕ್ರಾಸ್‌, ನೆಲಮಂಗಲ, ಶಿವಾನಂದ ಸರ್ಕಲ್‌ ಹಾಗೂ ಇತರೆಡೆ ಭಾರೀ ಮಳೆ ಆಯಿತು. ಪರಿಣಾಮ ನಗರದ ರಸ್ತೆಗಳಲ್ಲಿ ನೀರು ನಿಂತಿದ್ದು, ಬಿಡಿಎ ಅಂಡರ್‌ ಪಾಸ್‌, ಶಿವಾನಂದ ವೃತ್ತ ಅಂಡರ್‌ ಪಾಸ್‌ ಹಾಗೂ ಇತರೆಡೆ ನೀರು ನಿಂತಿತ್ತು.

ಅಲ್ಲದೆ, ತಗ್ಗು ಪ್ರದೇಶಗಳಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ ಗಳಿಗೆ ನೀರು ನುಗ್ಗಿತ್ತು. ಯಶವಂತಪುರದ ಮೋಹನ್‌ಕುಮಾರ್‌ ನಗರದಲ್ಲಿ ರೈಲ್ವೆ ಕಾಂಪೌಂಡ್‌ ಕುಸಿದು, ಮೂರು ಆಟೋಗಳು, ಒಂದು ಬೈಕ್‌ ಜಖಂಗೊಂಡಿತು. ಇದೇ ವೇಳೆ ಒಬ್ಬರ ಕಾಲಿಗೆ ಗಾಯವಾಗಿದ್ದು, ಆಸ್ಪ ತ್ರೆಗೆ ದಾಖಲಿಸಲಾಗಿದೆ.

ಮತ್ತೂಂದೆಡೆ ಟಿ.ದಾಸರಹಳ್ಳಿಯಲ್ಲೂ ಸುರಿದ ಮಳೆಗೆ ಮನೆ, ಕಟ್ಟಡಗಳ ಒಳಗೆ ನೀರು ನುಗ್ಗಿತ್ತು. ಯಲಹಂಕದಲ್ಲಿ ಸಂಜೆ 7 ಗಂಟೆ ನಂತರ ಸುಮಾರು 12 ಸೆಂ.ಮೀಟರ್‌ ಮಳೆಯಾಗಿದ್ದು, ರಸ್ತೆಗಳಲ್ಲಿ ಮೊಳಕಾಲಿನವರೆಗೆ ನೀರು ನಿಂತಿತ್ತು. ಹೀಗಾಗಿ ವಾಹನ ಸವಾರರು ಸಂಚರಿಸಲು ಪರದಾಟ ನಡೆಸಿ ದರು. ಬಿಡಿಎ ಅಂಡರ್‌ಪಾಸ್‌ನಲ್ಲಿ ಬೈಕ್‌ ಸವಾರ ಇಬ್ಬರು ಮಕ್ಕಳ ಜತೆ ನೀರಿನಲ್ಲಿ ಸಿಲುಕ್ಕಿದ್ದರು, ಬಳಿಕ ಸ್ಥಳೀಯರು ರಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next