Advertisement
ಐತಿಹಾಸಿಕ ಸಿನಿಮಾ/ ಧಾರಾವಾಹಿಗಳಲ್ಲಿ ಸೇನಾಧಿಕಾರಿಗಳ ಪೋಷಾಕು ನೋಡಿದ್ದೀರಾ? ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್ ರೀತಿಯ ಬಟ್ಟೆಯನ್ನು ಧರಿಸಲಾಗುತ್ತಿತ್ತು. ಮುಂದೆ ಎದೆಯವರೆಗೆ ಹಾಗೂ ಹಿಂದೆ ನೆಲ ತಾಕುವಷ್ಟು ಉದ್ದವಿರುವ ಆ ಉಡುಪಿಗೆ “ಕೇಪ್’ ಎಂದು ಹೆಸರು. ಅಷ್ಟೆಲ್ಲಾ ಯಾಕೆ, ಹೇರ್ ಸಲೂನ್‌ಗೆ ಹೋದಾಗ ನಮ್ಮನ್ನು ಕುರ್ಚಿಯ ಮೇಲೆ ಕೂರಿಸಿ, ಮೈಗೆ ಹೊದೆಸುವ ಬಟ್ಟೆಯೂ ಕೇಪ್ ವಿನ್ಯಾಸದ ಒಂದು ವಿಧ. ಆದರೀಗ ಕೇಪ್, ಕೇವಲ ಬಟ್ಟೆಯಷ್ಟೇ ಅಲ್ಲ, ಫ್ಯಾಷನ್ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಟ್ರೆಂಡ್.
ಕೇಪ್ ಅನ್ನು ಗೌನ್ ಮೇಲೆ ಪ್ರತ್ಯೇಕವಾಗಿ ಧರಿಸಬೇಕೆಂದಿಲ್ಲ. ಉದ್ದದ ಗೌನ್ ಜೊತೆಗೆ ಕೇಪ್‌ಗ್ಳು ಅಟ್ಯಾಚ್ ಆಗಿರುತ್ತವೆ. ಹಾಫ್ ಬ್ಲೇಝರ್‌ನಂತೆ ಮುಂದೆ ಮತ್ತು ಹಿಂದೆ, ಮೊಣಕೈವರೆಗೆ ಮಾತ್ರ ಕವರ್ ಆಗುವ ಕೇಪ್‌ಗ್ಳು ಸದ್ಯದ ಟ್ರೆಂಡ್.
Related Articles
ಉದ್ದನೆಯ ಗೌನ್ ಜೊತೆಗೆ, ಇಡೀ ಬೆನ್ನನ್ನು ಕವರ್ ಮಾಡಿ, ನೆಲ ಮುಟ್ಟುವಷ್ಟು ಉದ್ದವಿರುವ ಕೇಪ್‌ಗ್ಳು ಅಟ್ಯಾಚ್ ಆಗಿರುತ್ತವೆ. ಇಂಥ ಗೌನ್‌ಗಳು ರಾಯಲ್ ಲುಕ್ ನೀಡುವುದರಿಂದ, ಮದುವೆಯಂಥ ದೊಡ್ಡ ಸಮಾರಂಭಗಳಿಗೆ ಹೇಳಿ ಮಾಡಿಸಿದ್ದಾಗಿವೆ.
Advertisement
ಶಾರ್ಟ್ ಕೇಪ್ ಡ್ರೆಸ್ಶಾರ್ಟ್ ಡ್ರೆಸ್ ಪ್ರಿಯರೂ ತಮ್ಮ ದಿರಿಸಿಗೆ ಹೊಸ ಸ್ಪರ್ಶ ನೀಡಬಹುದು. ಶಾರ್ಟ್ ಡ್ರೆಸ್‌ಗಳ ಮುಂಭಾಗದಲ್ಲಿ ಮೊಣಕೈವರೆಗೆ ಹಾಗೂ ಹಿಂದೆ ಡ್ರೆಸ್‌ನಷ್ಟೇ ಉದ್ದ ಇರುವ ಕೇಪ್ ಅನ್ನು ಅಟ್ಯಾಚ್ ಮಾಡಲಾಗಿರುತ್ತದೆ. ಶಾರ್ಟ್ ಸಿಲ್ಕ್ ಡ್ರೆಸ್ ಜೊತೆಗೆ ಲೇಯರ್x ಕೇಪ್ ಇರುವ ಉಡುಪುಗಳು ಪಾರ್ಟಿಗಳಲ್ಲಿ ಫ್ಯಾಷನೇಬಲ್ ಎನಿಸುತ್ತವೆ. ಪ್ಯಾಂಟ್ ಸೂಟ್ ಜೊತೆಗೆ ಕೇಪ್
ಬೋರಿಂಗ್ ಎನಿಸುವ ಪ್ಯಾಂಟ್‌ಸೂಟ್ಸ್/ ಜಂಪ್‌ಸೂಟ್‌ಗೂ ಈಗ ಕೇಪ್ ಹೊಸ ಲುಕ್ ನೀಡಿದೆ. ಫಿಟ್ ಇರುವ ಪ್ಯಾಂಟ್‌ಗೆ ಶಾರ್ಟ್, ಸೊಂಟದವರೆಗೆ ಬರುವ ಅಥವಾ ಪೂರ್ತಿ ಕವರ್ ಆಗಿ ನೆಲ ಮುಟ್ಟುವ ಕೇಪ್‌ಗ್ಳು ಅಟ್ಯಾಚ್ ಆಗಿರುತ್ತವೆ. ಯಾವುದು ಉತ್ತಮ?
ಕೇಪ್ ಡ್ರೆಸ್‌ಗಳು ನೋಡಲು ಸ್ವಲ್ಪ ಅದ್ದೂರಿ ಅನ್ನಿಸುವುದರಿಂದ ಜೊತೆಗೆ ಧರಿಸುವ ಆ್ಯಕ್ಸೆಸರೀಸ್ ಆದಷ್ಟು ಸಿಂಪಲ್ ಆಗಿರಲಿ. ಸ್ಯಾಂಡಲ್ಸ್ ಅಥವಾ ಪೆನ್ಸಿಲ್ ಹೈ ಹೀಲ್ಸ್ ಉತ್ತಮ ಆಯ್ಕೆ. ಮೇಕಪ್ ಕೂಡ ತೆಳುವಾಗಿಯೇ ಇರಲಿ.
• ಕ್ರಾಪ್ಡ್ ಕೇಪ್/ ಕೇಪ್ಲೆಟ್ಸ್ (ಸೊಂಟದವರೆಗೆ ಉದ್ದವಿರುವ ಜ್ಯಾಕೆಟ್‌ನಂಥ ಉಡುಪು)ಗಳನ್ನು ಶಾರ್ಟ್ ಸ್ಕರ್ಟ್ ಜೊತೆಗೆ ಧರಿಸಿದರೆ ಚೆನ್ನ.
• ಲೇಯರ್ ಮತ್ತು ಫೋಲ್ಡ್‌ಗಳಿರುವ ಕೇಪ್‌ಗ್ಳನ್ನು ಪೆನ್ಸಿಲ್ ಸ್ಕರ್ಟ್ ಜೊತೆಗೆ ಧರಿಸಬಹುದು.
• ಮದುವೆಗೆ ಧರಿಸುವ ಬಿಳಿ ಗೌನ್ ಜೊತೆಗೆ ಕೇಪ್ ಫ್ಯಾಷನೇಬಲ್ ಆಗಿ ಕಾಣುತ್ತದೆ. ಕೇಳಿರಿ, ಕೇಪ್ ಚರಿತೆ…
ಕೇಪ್ ಡ್ರೆಸ್‌ಗಳು ಮೊದಲು ಚಾಲ್ತಿಗೆ ಬಂದದ್ದು, ಕ್ರೈಸ್ತ ಸಮುದಾಯದ ಮೆನೊನೈಟ್ ಮಹಿಳೆಯರಿಂದ. ತಮ್ಮ ಸಾಂಪ್ರದಾಯಿಕ ಡ್ರೆಸ್‌ನ ಭಾಗವಾಗಿ ಅವರು ಕೇಪ್ ಡ್ರೆಸ್‌ಗಳನ್ನು ಧರಿಸುತ್ತಿದ್ದರು. 19ನೇ ಶತಮಾನದ ಕೊನೆಯವರೆಗೂ ಹೆಚ್ಚು ಸದ್ದು ಮಾಡದ ಈ ದಿರಿಸು ಈಗ ಕೇವಲ ಮೇಲುಡುಪಾಗಿ ಉಳಿದಿಲ್ಲ. – ಪ್ರಿಯಾಂಕಾ