Advertisement

ಯಶವಂತಪುರ ಫ್ಲೈಓವರ್‌ನಿಂದ ಬಿದ್ದ ಕ್ಯಾಂಟರ್‌; ಚಾಲಕ ಗಂಭೀರ

09:16 AM Nov 17, 2017 | |

ಬೆಂಗಳೂರು: ಇಲ್ಲಿನ ಬಿಎಂಟಿಸಿ ಬಸ್‌ ನಿಲ್ದಾಣದ ಬಳಿ  ಕೋಳಿಗಳನ್ನು ಸಾಗಿಸುತ್ತಿದ್ದಕ್ಯಾಂಟರವೊಂದು ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಅವಘಡ ಶುಕ್ರವಾರ ಬೆಳಗ್ಗೆ ನಡೆದಿದ್ದು, ಚಾಲಕ ಗಂಭೀರವಾಗಿ  ಗಾಯಗೊಂಡಿದ್ದಾರೆ.

Advertisement

ಟ್ರಾಫಿಕ್‌ ಇದ್ದ ವೇಳೆ ಏಕಾಏಕಿ ಬ್ರೇಕ್‌ ಹಾಕಿದ ಕಾರಣ ಕ್ಯಾಂಟರ್‌ ಕೆಳಗೆ ಬಿದ್ದಿದ್ದು, ಈ ವೇಳೆ ಕ್ಯಾಂಟರ್‌‌ನೊಳಗೆ ಚಾಲಕ ಸೇರಿದಂತೆ ಮೂವರಿದ್ದರು ಎಂದು ತಿಳಿದು ಬಂದಿದೆ. ಇನ್ನುಳಿದ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಚಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕ್ಯಾಂಟರ್‌ನಲ್ಲಿದ್ದ ಕೆಲ ಕೋಳಿಗಳೂ ಸಾವನ್ನಪ್ಪಿವೆ. 

ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next