ಬೆಂಗಳೂರು: ನಾನು ಪ್ರಜ್ವಲ್ ಪರವಾಗಿ ಮಾತನಾಡುವುದಿಲ್ಲ. ಸತ್ಯಾ ಸತ್ಯತೆ ಹೊರಬರಲಿ. ಆದರೆ ರೇವಣ್ಣ ವಿಷಯದಲ್ಲಿ ಸರಕಾರ ಹೇಗೆ ನಡೆದುಕೊಳ್ಳುತ್ತಿದೆ. ಅಧಿಕಾರ ದುರ್ಬಳಕೆ ಆಗುತ್ತಿದೆ ಎಂಬುದು ಗೊತ್ತಿದೆ. ಹೀಗಾಗಿ ರೇವಣ್ಣ ಪರವಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಸಂಬಂಧಿ, ಸಹೋದರ ಎನ್ನುವ ಕಾರಣಕ್ಕೆ ರೇವಣ್ಣ ಪರವಾಗಿ ಹೋರಾಟ ಮಾಡುವುದಿಲ್ಲ. ಒಕ್ಕಲಿಗ ನಾಯಕನಾಗಿಯೂ ಹೋರಾಡುವುದಿಲ್ಲ. ಯಾವ ಒಕ್ಕಲಿಗ ನಾಯಕರ ಬೆಂಬಲವನ್ನೂ ಕೋರುವುದಿಲ್ಲ. ಇದು ನನ್ನ ಪಕ್ಷದ ವಿಚಾರ. ನಾನು ಪಕ್ಷದ ಶಾಸಕಾಂಗ ನಾಯಕ. ರೇವಣ್ಣ ನಮ್ಮ ಪಕ್ಷದ ಶಾಸಕ ಎಂದರು.
ಮಹಿಳೆಯರ ಅಶ್ಲೀಲ ವೀಡಿಯೋ ತುಂಬಿದ ಪೆನ್‌ಡ್ರೈವ್‌ಗಳನ್ನು ಹಾದಿಬೀದಿಯಲ್ಲಿ ಸುರಿದಿರುವ ಕಿಡಿಗೇಡಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ನೀನು ನನ್ನನ್ನು ಕಿಂಗ್ ಆಫ್ ಬ್ಲ್ಯಾಕ್‌ವೆುàಲರ್ ಎನ್ನುತ್ತೀಯಾ? ನಾಚಿಕೆ ಆಗಬೇಕು ನಿನಗೆ. ನಿಮ್ಮ ಮುಖ್ಯಮಂತ್ರಿಗೆ ಮಾನ-ಮರ್ಯಾದೆ ಇದೆಯೇ? ಡಾ| ಜಿ.ಪರಮೇಶ್ವರ್‌ಗೆ ಬೆನ್ನುಮೂಳೆ ಇದೆಯೇ? ನನ್ನನ್ನು ಹಿಟ್ ಆ್ಯಂಡ್ ರನ್ ಎನ್ನುತ್ತೀರಾ? ಹಾಗಾದರೆ ನೀವೆಲ್ಲ ಏನು? ನಿಮ್ಮ ಎಸ್‌ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಇದೆಯೇ ಎಂದು ಕಿಡಿಕಾರಿದರು.
ಕುಮಾರಕೃಪಾದಲ್ಲಿ
ನೊಂದ ಮಹಿಳೆಯರು
ಹುಣಸೂರಿನ ಪವಿತ್ರಾ ಎಂಬವರ ಮನೆಯಿಂದ ಕರೆತಂದ ಮಹಿಳೆಯನ್ನು ರಾಜಗೋಪಾಲ್ ತೋಟದ ಮನೆಯಲ್ಲಿ ಅಪಹರಿಸಿಟ್ಟಿದ್ದಾಗಿ ಕತೆ ಕಟ್ಟಿರುವುದು ಗೊತ್ತಿಲ್ಲವೇ? ನೊಂದ ಮಹಿಳೆಯರು ಎನ್ನಲಾದ 12 ಜನರನ್ನು ಕುಮಾರಕೃಪಾದಲ್ಲಿ ಇಟ್ಟಿದ್ದಾರೆ. ಪೆನ್‌ಡ್ರೈವ್ ಸೋರಿಕೆ ಮಾಡಿ, ಮಹಿಳೆಯರ ಮಾನ, ಮರ್ಯಾದೆಯನ್ನು ಹಾದಿಬೀದಿಯಲ್ಲಿ ಹರಾಜು ಹಾಕಿ ಈಗ ಅನುಕಂಪ ತೋರುವ ನಾಟಕ ಆಡುತ್ತಿದ್ದೀರಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.