Advertisement

BJP ಹೇಳಿದಂತೆ ಸರಕಾರ ನಡೆಸಲಾಗದು: ಎಂ.ಬಿ.ಪಾಟೀಲ್‌

11:02 PM Jul 29, 2023 | Team Udayavani |

ವಿಜಯಪುರ: ಚುನಾವಣೆಯಲ್ಲಿ ರಾಜ್ಯದ ಜನರಿಂದ ತಿರಸ್ಕೃತರಾದ ಬಿಜೆಪಿ  ಹೇಳಿದಂತೆ ಸರಕಾರ ನಡೆಸಲಾಗದು ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಸಮುದಾಯದ ಪರ ಆಡಳಿತ ನಡೆಯುತ್ತಿದೆ ಎಂಬ ಆರೋಪದಲ್ಲಿ ಅರ್ಥವಿಲ್ಲ. ಜನರಿಂದ ತಿರಸ್ಕೃತ ರಾದವರ ಕುರಿತು ನನ್ನೆದುರು ಪ್ರಸ್ತಾವಿಸಬೇಡಿ ಎಂದರು.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿ ಯರ ವೀಡಿಯೋ ಚಿತ್ರೀಕರಣ ನಡೆದಿದೆ ಎಂಬ ಆರೋಪ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ದೇಶದ ಕಾನೂನಿಗೆ ಶಕ್ತಿ ಇದೆ. ಅದು ತನ್ನ ಕೆಲಸ ಮಾಡುತ್ತದೆ. ಈ ಪ್ರಕರಣದಲ್ಲಿ ನಿರಪರಾಧಿಗಳು ಬಲಿಪಶು ಆಗಬಾರದು ಎಂದು ಹೇಳಿದರು.

ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ ಸಂಪೂರ್ಣ ಭರ್ತಿಯಾಗಿಲ್ಲ. ಕಳೆದ ವಾರದಿಂದ ಜಲಾಶಯಕ್ಕಿದ್ದ ಒಳಹರಿವು ಈಗ ಕಡಿಮೆಯಾಗಿದೆ. ಜಲಾಶಯ ಭರ್ತಿಯಾಗುತ್ತಲೇ ಸರಕಾರದಿಂದ ಕೃಷ್ಣೆಗೆ ಬಾಗಿನ ಅರ್ಪಿಸಲಾಗುವುದು ಎಂದು ಹೇಳಿದರು.

ಕೆರೆ ತುಂಬಿಸಲು ಆದ್ಯತೆ

Advertisement

ಬಾಗಿನ ಅರ್ಪಿಸುವುದಕ್ಕಿಂತ ಮೊದಲು ಜಿಲ್ಲೆಯ ಜನರ ಆಶಯದಂತೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಿದೆ. ಬಾಗಿನ ಅರ್ಪಿಸುವುದಕ್ಕೆ ಆತುರ ತೋರದೆ ಕೆರೆಗೆ ನೀರು ತುಂಬಿಸಲು ಆದ್ಯತೆ ನೀಡಲಾಗುತ್ತಿದೆ. ನೀರಿನ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕಿದ್ದು, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next