Advertisement

ಸುಳ್ಳುಗಳನ್ನು ತಡೆಯಲು ನಾಗರಿಕರು ಕಟಿಬದ್ಧರಾಗಿ : ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌

08:39 PM Aug 28, 2021 | Team Udayavani |

ನವದೆಹಲಿ: ಸತ್ಯವನ್ನು ತಿಳಿಯಲು ಜನರು ಕೇವಲ ಸರ್ಕಾರದ ಮೇಲೆ ಅವಲಂಬಿತರಾಗಬಾರದು. ಸರ್ಕಾರಗಳು ಮತ್ತೆ ಮತ್ತೆ ಅಧಿಕಾರಕ್ಕೆ ಬರಲು ಸುಳ್ಳುಸುದ್ದಿಗಳನ್ನು ಹರಡಿಸುತ್ತವೆ. ಜಗತ್ತಿನಾದ್ಯಂತ ಹಲವು ದೇಶಗಳು ಕೊರೊನಾ ಅಂಕಿಸಂಖ್ಯೆಗಳನ್ನು ತಿರುಚುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ನ 6ನೇ ಮುಖ್ಯ ನ್ಯಾಯಮೂರ್ತಿ ಎಂ.ಸಿ.ಚಾಗ್ಲಾ ಸ್ಮಾರಕ ಉಪನ್ಯಾಸದಲ್ಲಿ ಆನ್‌ಲೈನ್‌ ಮೂಲಕ ಮೇಲಿನಂತೆ ಮಾತನಾಡಿದರು.

ಸಾರ್ವಜನಿಕ ಬುದ್ಧಿಜೀವಿಗಳು ಸರ್ಕಾರದ ಸುಳ್ಳುಗಳನ್ನು ತಡೆಯಲು ಕಟಿಬದ್ಧರಾಗಬೇಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಮೋಸಗಳು, ಸುಳ್ಳು ನಿರೂಪಣೆಗಳು, ನಕಲಿ ಸುದ್ದಿಗಳನ್ನು ತಡೆಯುವುದು ಎಲ್ಲರ ಕರ್ತವ್ಯ ಎಂದು ನ್ಯಾ.ಚಂದ್ರಚೂಡ್‌ ಹೇಳಿದ್ದಾರೆ.

ಇದನ್ನೂ ಓದಿ :ಕ್ಯಾಸಿನೊ ಬಂದ್ ಇರುವುದರಿಂದ ಗೋವಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ: ಶ್ರೀನಿವಾಸ್ ನಾಯಕ್

ಈ ವಿಚಾರದಲ್ಲಿ ಮಾಧ್ಯಮಗಳದ್ದೂ ಜವಾಬ್ದಾರಿಯಿದೆ. ಸರ್ಕಾರಗಳು ಹಬ್ಬಿಸುವ ಸುಳ್ಳುಗಳನ್ನು ನಿಷ್ಪಕ್ಷಪಾತವಾಗಿ ತಡೆಯಬೇಕು. ಹಾಗೆಯೇ ಜನರು ತಮಗಿಷ್ಟವಾಗುವ ಸುದ್ದಿಗಳನ್ನು ಓದುವುದು, ನಂಬಿಕೆಗೆ ವಿರುದ್ಧವಾಗಿರುವ ಪುಸ್ತಕಗಳನ್ನು ಓದದೇ ಇರುವುದು, ನಮಗಿಷ್ಟವಾಗದ್ದು ಬಂದ ತಕ್ಷಣ ಟೀವಿಯನ್ನೇ ನಿಶ್ಶಬ್ದಗೊಳಿಸುವುದನ್ನು ಮಾಡುತ್ತೇವೆ. ನಾವು ಸತ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ನಮಗೆ ಸರಿಯೆನಿಸುವುದನ್ನು ನಂಬುವುದರಲ್ಲೇ ಖುಷಿಪಡುತ್ತೇವೆ ಎಂದು ನ್ಯಾ.ಚಂದ್ರಚೂಡ್‌ ವಿಶ್ಲೇಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next