Advertisement

ಬಿಜೆಪಿ ವಿರೋಧಿ ಬಣಕ್ಕೆ ಅಖೀಲೇಶ್‌ ಯಾದವ್‌ ಬೆಂಬಲ

12:51 PM Apr 16, 2017 | Team Udayavani |

ಲಕ್ನೋ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ಬಿಎಸ್‌ಪಿ ನಾಯಕಿ ಮಯಾವತಿ ಬಿಜೆಪಿ ವಿರುದ್ಧ ಸಮರ ಸಾರಿರುವಂತೆಯೇ, ಎಸ್ಪಿ ನಾಯಕ ಅಖೀಲೇಶ್‌ ಯಾದವ್‌ ಅದಕ್ಕೆ ದನಿಗೂಡಿಸಿದ್ದಾರೆ. ಇವಿಎಂಗಳು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಮುಂಬರುವ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಕೆ ಮಾಡಬೇಕು. ಚುನಾವಣಾ ಆಯೋಗ ಮತಯಂತ್ರಗಳ ಬಗ್ಗೆ ಎದ್ದಿರುವ ಶಂಕೆ ನಿವಾರಿಸುವ ಉತ್ತರದಾಯಿತ್ವ ಹೊಂದಿದೆ ಎಂದಿದ್ದಾರೆ.

Advertisement

ಲಕ್ನೋದಲ್ಲಿ ಮಾತನಾಡಿದ ಅವರು, “ಬಿಜೆಪಿ ಪ್ರಚಾರದ ವಿರುದ್ಧದ ಬಣದ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ. ಬಿಜೆಪಿ ವಿಪಕ್ಷಗಳ ನಾಯಕರನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ನಮ್ಮ ಪಕ್ಷ ಮಹತ್ವದ ಪಾತ್ರ ನಿರ್ವಹಿಸಲಿದೆ’ ಎನ್ನುವ ಮೂಲಕ ಮಾಯಾವತಿ ಪ್ರಯತ್ನಕ್ಕೆ ದನಿಗೂಡಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ  ಅನಂತರ ಬಿಎಸ್‌ಪಿ ಹಾಗೂ ಎಸ್‌ಪಿ ನಾಯಕರಿಂದ ಒಮ್ಮತದ ಹೇಳಿಕೆ ಬಂದಿರುವುದು ಇದೇ ಮೊದಲು.

“ಮತಯಂತ್ರದಲ್ಲಿ ಯಾವಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಯಾವಾಗ ಸಾಫ್ಟ್ವೇರ್‌ ಕೈಕೊಡುತ್ತದೆ ಎಂದು ಹೇಳಲಾಗದು. ಹೀಗಾಗಿ ನಮಗೆ ವಿದ್ಯುನ್ಮಾನ ಮತಯಂತ್ರಗಳ ಮೇಲೆ ವಿಶ್ವಾಸವಿಲ್ಲ’ ಎಂದು ಅಖೀಲೇಶ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next