Advertisement

ಕೋವಿಡೋತ್ತರ ದಿನಗಳಲ್ಲಿ ಖಾಸಗಿ ಸಾಲ ಸಿಗುವುದಿಲ್ಲ?

10:18 AM Jun 13, 2020 | mahesh |

ನವದೆಹಲಿ: ಕೋವಿಡೋತ್ತರ ದಿನಗಳಲ್ಲಿ ಸಾಲ ಪಡೆಯುವುದು, ಅದರಲ್ಲೂ ಖಾಸಗಿ ಸಾಲ ಪಡೆಯುವುದು ಕಷ್ಟವಾಗಲಿದೆಯೇ? ಹೌದು ಎಂದು ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ಎಂಬ ಅಧ್ಯಯನ ಸಂಸ್ಥೆ ಹೇಳಿದೆ. ಅದು 2009ರಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತ ವೇಳೆ, ಬ್ಯಾಂಕ್‌ಗಳು ಹೇಗೆ ವರ್ತಿಸಿದ್ದವು ಎಂಬುದನ್ನು ಲೆಕ್ಕಾಚಾರ ಮಾಡಿ ಈ ರೀತಿಯ ಅಭಿಪ್ರಾಯ ನೀಡಿದೆ. ಸದ್ಯ ಕೋವಿಡ್ ಇರುವುದರಿಂದ ಜನರ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ. ಹಾಗಾಗಿ ಜನರು ಮೊದಲು ತಾವು ಅಡವಿಟ್ಟು ಪಡೆದ ಸಾಲ, ನಂತರ ಖಾಸಗಿ ಸಾಲ, ಕಡೆಗೆ ಕ್ರೆಡಿಟ್‌ ಕಾರ್ಡ್‌ ಮೂಲಕ ಪಡೆದ ಸಾಲ ಹಿಂತಿರುಗಿಸಲು ಆದ್ಯತೆ ನೀಡುತ್ತಾರೆ ಎಂದು ಹಿಂದಿನ ಅಂಕಿಅಂಶದ ಆಧಾರದ ಮೇಲೆ ಹೇಳಿದೆ.

Advertisement

ಹಿಂತಿರುಗಿಸದವರೇ ಜಾಸ್ತಿ: 2009ರಲ್ಲಿ ಖಾಸಗಿ ಸಾಲ, ಕ್ರೆಡಿಟ್‌ ಕಾರ್ಡ್‌ ಮೂಲಕ ಸಾಲ ಪಡೆದವರ ಪೈಕಿ ಬಹುತೇಕರು ಹಿಂತಿರುಗಿಸಿರಲಿಲ್ಲ. ಆದರೆ
ವಾಹನ, ಗೃಹಸಾಲಗಳಲ್ಲಿ ಇಂತಹ ಪರಿಸ್ಥಿತಿ ಬಹಳ ಕಡಿಮೆಯಿತ್ತು. ಈ ಹಳೆಯ ಅನುಭವ ಈಗಲೂ ಬ್ಯಾಂಕ್‌ಗಳಿಗೆ ಮಾನದಂಡವಾಗುತ್ತದೆ. ಸಾಲ
ಕೇಳಲು ಹೋದಾಗ, ವ್ಯಕ್ತಿಗಳನ್ನು ನೋಡಿ ಆಯ್ಕೆ ಮಾಡುತ್ತವೆ. ಕೊಡುವ ಮುನ್ನ ಗರಿಷ್ಠ ಪ್ರಮಾಣದಲ್ಲಿ ಪರಿಶೀಲನೆ ನಡೆಸುತ್ತವೆ.

ಆರ್‌ಬಿಐ ಸೂಚನೆ: 6 ತಿಂಗಳು ಕಾಲ ಸಾಲದ ಕಂತು ಪಾವತಿ ಮುಂದೂಡಲು ಆರ್‌ಬಿಐ ಅವಕಾಶ ನೀಡಿದೆ. ಇದರಿಂದ ಗ್ರಾಹಕರ ಸಾಲ ಮೌಲ್ಯಾಂಕದ ಮೇಲೆ
ಪರಿಣಾಮವಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಆದರೆ ಬ್ಯಾಂಕ್‌ಗಳು ಹೀಗೆ ಕಂತು ಮುಂದೂಡಿದ ವರಿಗೆ, ಹೊಸ ಸಾಲ ನೀಡಲು ಹಿಂಜರಿಯುತ್ತಿವೆ.

ಪಾವತಿ ಸಾಮರ್ಥಯ ಎಷ್ಟಿದೆ?
ಸಾಲ ಮರುಪಾವತಿ ಮಾಡಲು ವ್ಯಕ್ತಿಯೊಬ್ಬರಿಗೆ ಎಷ್ಟು ಶಕ್ತಿಯಿದೆ ಎಂದೂ ಬ್ಯಾಂಕ್‌ ಗಮನಿಸುತ್ತವೆ. ವ್ಯಕ್ತಿಯ ಆದಾಯ, ಬ್ಯಾಂಕ್‌ ಖ್ಯಾತೆಯಲ್ಲಿನ ಹಣದ ಹರಿವು, ಉದ್ಯೋಗ ಭದ್ರತೆ, ಸದ್ಯ ಸಾಲ ಹಿಂತಿರುಗಿಸುವ ಸಾಮರ್ಥಯ, ಸಾಲ ಮೌಲ್ಯಾಂಕ (ಕ್ರೆಡಿಟ್‌ ಸ್ಕೋರ್‌)ಇವೆಲ್ಲವನ್ನೂ ಪರಿಶೀಲಿಸಿ, ಸಾಲ ನೀಡಲು ಸಾಧ್ಯವಿದೆಯೋ ಇಲ್ಲವೋ ಎಂದು ಬ್ಯಾಂಕ್‌ಗಳು ತಿಳಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next