Advertisement

US: ನನ್ನನ್ನು ಖರೀದಿಸಲು ಸಾಧ್ಯವಿಲ್ಲ: ವಿವೇಕ್‌ ರಾಮಸ್ವಾಮಿ ಚಾಟಿ

09:07 PM Aug 24, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿ ಸ್ಥಾನದ ಜಟಾಪಟಿಯಲ್ಲಿ ಭಾರೀ ಸುದ್ದಿಯಾಗಿರುವ ಭಾರತೀಯ ಮೂಲದ ಅಮೆರಿಕನ್‌ ಪ್ರಜೆ, ಉದ್ಯಮಿ ವಿವೇಕ್‌ ರಾಮಸ್ವಾಮಿ ಇದೀಗ ಮತ್ತೂಮ್ಮೆ ಸುದ್ದಿಯಾಗಿದ್ದಾರೆ. ಅಮೆರಿಕದ ಪ್ರಬಲ ಅಭ್ಯರ್ಥಿ ಆಕಾಂಕ್ಷಿಗಳ ನಡುವೆಯೇ, ಮಾರಾಟಕ್ಕಿಲ್ಲದ ಏಕೈಕ ವ್ಯಕ್ತಿ ನಾನೊಬ್ಬನೇ ಎಂದು ಘೋಷಿಸಿಕೊಂಡಿದ್ದಾರೆ.

Advertisement

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಉತ್ಸುಕರಾಗಿರುವ 8 ಮಂದಿ ಆಕಾಂಕ್ಷಿಗಳಿಗಾಗಿ ಚರ್ಚಾ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಪೈಕಿ ವಿವೇಕ್‌ ರಾಮಸ್ವಾಮಿಯೂ ಇದ್ದರು. ಆಕಾಂಕ್ಷಿಗಳ ನಡುವೆ ಮುಕ್ತ ಚರ್ಚೆ ಆರಂಭವಾಗುತ್ತಿದ್ದಂತೆ ಇತರೆ ಆಕಾಂಕ್ಷಿಗಳು ವಿವೇಕ್‌ ಅವರನ್ನು ಗುರಿಯಾಗಿಸಿ ಅವರೊಬ್ಬ ರಾಜಕೀಯ ಅನುಭವವೇ ಇಲ್ಲದ ವ್ಯಕ್ತಿ, ಅಂಥವರಿಗೆ ದೇಶದ ಅಧ್ಯಕ್ಷ ಸ್ಥಾನ ನೀಡಲು ಸಾಧ್ಯವೇ ಇಲ್ಲ. ಅವರ ಭಾಷಣಗಳು ಚಾಟ್‌ ಜಿಪಿಟಿಯ ನಕಲುಗಳು ಅವುಗಳನ್ನು ನಂಬಿ, ದೇಶ ನಡೆಸಲು ಸಾಧ್ಯವೂ ಇಲ್ಲ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ವಿವೇಕ್‌, ಅನುಭವಿ ರಾಜಕಾರಣಿಗಳು ಸಿದ್ಧ ಘೋಷಣೆಗಳಿಂದ ದೇಶ ನಡೆಸಿದ್ದು ಸಾಕು, ಇನ್ನಾದರೂ ಜನರ ಮುಕ್ತ ಚರ್ಚೆಗಳು ಆರಂಭವಾಗಲಿ ಎಂದಿದ್ದಾರೆ. ಅಲ್ಲದೇ, ನನ್ನನ್ನು ಈ ದೇಶ ಸ್ವೀಕರಿಸಲು ಒಪ್ಪಿದೆ. ಕಾರಣ, ಈ ವೇದಿಕೆಯಲ್ಲಿ ದುಡ್ಡಿಗೆ ಮಾರಾಟವಾಗದ, ಕೊಂಡುಕೊಳ್ಳಲು ಸಾಧ್ಯವೂ ಇಲ್ಲದ ವ್ಯಕ್ತಿ ನಾನೊಬ್ಬನೇ ಎಂದು ವಿವೇಕ್‌ ಚಾಟಿ ಬೀಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next