ವಾಷಿಂಗ್ಟನ್: ಡಿಎಸ್ಎಲ್ಆರ್ ಕ್ಯಾಮಾರಾ ತಂತ್ರಜ್ಞಾನದಲ್ಲಿ ಅದ್ವಿತೀಯ ಛಾಪು ಮೂಡಿಸಿರುವ ಕೆನನ್ ಇದೀಗ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಇನ್ನು ಮುಂದೆ ಕೆನಾನ್ ಕ್ಯಾಮಾರ ಗಳು ಗೂಗಲ್ ಫೋಟೋಸ್ ಗೆ ಸಪೋರ್ಟ್ ಆಗಲಿದ್ದು ಅಟೋಮ್ಯಾಟಿಕ್ ಬ್ಯಾಕಪ್ ಆಗಲಿದೆ.
ಆ್ಯಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ
image.canon ಅಪ್ಲಿಕೇಸನ್ ನ ಅಪ್ ಡೆಟ್ ವರ್ಷನ್ ನಲ್ಲಿ ಈ ಹೊಸ ಫೀಚರ್ ಲಭ್ಯವಿದೆ. ಇತ್ತೀಚಿಗಷ್ಟೆ ಗೂಗಲ್ ತಾನೂ ಕೆನಾನ್ ನೊಂದಿಗೆ ಕೈಜೋಡಿಸಿದ್ದು, ಇನ್ನು ಮುಂದೆ ಆ್ಯಪ್ ಮೂಲಕ ಅಟೋಮ್ಯಾಟಿಕ್ ಆಗಿ ಕ್ಯಾಮಾರದಲ್ಲಿನ ಫೋಟೋಗಳು ಬ್ಯಾಕಪ್ ಆಗಲಿವೆ ಎಂದಿದೆ.
ಈ ಫೀಚರ್ ಕೆನಾನ್ ಕ್ಯಾಮಾರ ಬಳಕೆದಾರರಿಗೆ ಒಂದು ತಿಂಗಳು ಉಚಿತವಾಗಿದ್ದು 100 ಜಿಬಿ ಕ್ಲೌಡ್ ಸ್ಟೋರೇಜ್ ದೊಕಲಿದೆ. ಮಾತ್ರವಲ್ಲದೆ ಗೂಗಲ್ ಕ್ಲೌಡ್ ನಲ್ಲಿ ಒರಜಿನಲ್ ರೆಸಲ್ಯೂಷನ್ ಫೋಟೋಗಳು ಸೇವ್ ಆಗಲಿದೆ ಎಂದು ತಿಳಿದುಬಂದಿದೆ. ಆದರೇ ಈ ಫೀಚರ್ ನನ್ನು ಬಳಸಬೇಕಾದರೇ
Google one ಸಬ್ ಸ್ಕ್ರೈಬ್ ಮಾಡುವುದು ಅನಿವಾರ್ಯವಾಗಿದೆ.
ಬಳಕೆದಾರರು ಮೊದಲಿಗೆ ಆ್ಯಂಡ್ರಾಯ್ಡ್ ಅಥವಾ ಐಓಎಸ್ ನಲ್ಲಿ
image.canon app ಅನ್ನು ಅಪ್ ಡೆಟ್ ಮಾಡಿಕೊಳ್ಳಬೇಕು. ಈ ಫೀಚರ್ ಕೆನಾನ್ ನ EOS R5, EOS R6, EOS 5D MARK 4, EOS 1500D ಕ್ಯಾಮೆರಾ ಮೋಡೆಲ್ ಗೆ ಸಪೋರ್ಟ್ ಆಗುತ್ತದೆ.
ಪ್ರಸ್ತುತ
image.canon app ಗೂಗಲ್ ಡ್ರೈವ್, ಯೂಟ್ಯೂಬ್ ನ್ನು ಬೆಂಬಲಿಸುತ್ತದೆ. ಇದೀಗ ಅಪ್ ಡೆಟ್ ವರ್ಷನ್ ಗೂಗಲ್ ಫೋಟೋಸ್ ಅನ್ನು ಕೂಡ ಸಪೋರ್ಟ್ ಮಾಡಲು ಆರಂಭಿಸಿದೆ. ಆದರೇ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಗೆ ಹಣಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ.