Advertisement

855 ಮೀಟರ್‌ ಸುರಂಗ ಪೂರೈಸಿದ ವಿಂಧ್ಯಾ

10:15 AM Oct 15, 2021 | Team Udayavani |

ಬೆಂಗಳೂರು: ಕಂಟೋನ್ಮೆಂಟ್‌- ಶಿವಾಜಿನಗರ ನಡುವಿನ ಸುರಂಗ ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಟನೆಲ್‌ ಬೋರಿಂಗ್‌ ಮಷಿನ್‌ “ವಿಂಧ್ಯಾ’ ಬುಧವಾರ ಹೊರಬಂದಿದೆ. ಈ ಮೂಲಕ “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗದಲ್ಲಿ ಮತ್ತೂಂದು ಮೈಲುಗಲ್ಲು ದಾಖಲಿಸಿದೆ. ಸುಮಾರು 855 ಮೀಟರ್‌ ಉದ್ದದ ಈ ಸುರಂಗ ಮಾರ್ಗವನ್ನು ಒಂದು ವರ್ಷದಲ್ಲಿ “ವಿಂಧ್ಯಾ’ ಟಿಬಿಎಂ ಪೂರೈಸಿದೆ.

Advertisement

ಇದರೊಂದಿಗೆ ಎರಡನೇ ಹಂತದ ಯೋಜನೆಯ ಮೊದಲ ಸುರಂಗದ ಜೋಡಿ ಮಾರ್ಗಗಳು ಪೂರ್ಣಗೊಂಡಂತಾಗಿದೆ. ಇದರ ನಂತರ ಹಳಿ ಜೋಡಣೆ, ಥರ್ಡ್‌ರೈಲ್‌, ಕೇಬಲ್‌ಗ‌ಳ ಅಳವಡಿಕೆ ಸೇರಿದಂತೆ ವಿವಿಧ ಕಾರ್ಯಗಳು ಹಂತ-ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. 2020ರ ಅಕ್ಟೋಬರ್‌ 4ರಂದು ವಿಂಧ್ಯಾ ತನ್ನ ಪಯಣವನ್ನು ಆರಂಭಿಸಿತ್ತು.

ಬುಧವಾರ ಭೂಮಿಯನ್ನು ಸೀಳಿ ಹೊರಬರುತ್ತಿದ್ದಂತೆ, ಸುರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು, ನೌಕರರು ಕರತಾಡನದೊಂದಿಗೆ ಸ್ವಾಗತಿಸಿದರು. ಈ ಯಂತ್ರವು ಮರುಜೋಡಣೆ ಮಾಡಿ, ಮತ್ತೆ ಎರಡು ತಿಂಗಳಲ್ಲಿ ಕಂಟೋನ್ಮೆಂಟ್‌ ನಿಂದ ಪಾಟರಿಟೌನ್‌ವರೆಗೆ ಸುರಂಗ ಕೊರೆಯುವ ಕಾರ್ಯ ಆರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ;- ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

9 ಟಿಬಿಎಂಗಳು ದಿನದ 24 ಗಂಟೆ ಕೆಲಸ ಮಾಡುತ್ತಿದ್ದು ಪ್ರತಿದಿನ ಸರಾಸರಿ 3.5 ಮೀ ಸುರಂಗ ಕೊರೆಯುತ್ತಿವೆ. ಗೊಟ್ಟಗೆರೆ- ನಾಗವಾರ (ರೀಚ್‌ -6 )ರಲ್ಲಿ 13.76 ಕಿ.ಮೀ. ಉದ್ದದ ಸುರಂಗ ನಿರ್ಮಿಸಲಾಗುತ್ತಿದ್ದು, ಭೂಮಿಯಲ್ಲಿ ಶೇ. 60 ಭಾಗ ಕಲ್ಲಿನಿಂದ ಕೂಡಿದೆ. ಇದರಿಂದ ಸವಾಲಾಗಿ ಪರಿಣಮಿಸಿದೆ. ಹಾಗಾಗಿ, 855 ಮೀಟರ್‌ ಅನ್ನು ನಿತ್ಯ ಸರಾಸರಿ ಎರಡೂವರೆ ಮೀಟರ್‌ ಕೊರೆಯಲು ಮಾತ್ರ ಸಾಧ್ಯವಾಗಿದೆ.

Advertisement

ಸಾಮಾನ್ಯವಾಗಿ ವಿದೇಶ ಅಥವಾ ಬೇರೆ ನಗರಗಳಲ್ಲಿ ನಿತ್ಯ ಕನಿಷ್ಠ 8-10 ಮೀಟರ್‌ ಕೊರೆಯಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಊರ್ಜಾ ಟಿಬಿಎಂನಂತೆಯೇ ವಿಂಧ್ಯಾ ಅನ್ನು ಕೂಡ “ಫಾಲ್ಸ್‌ ಬ್ಲಾಕ್‌’ ನಿರ್ಮಿಸಿ, ಹೊರತೆಗೆಯಲಾಗಿದೆ. ಈ ಮೊದಲೇ ರೂಪಿಸಿದ ನಕ್ಷೆ ಮತ್ತು ಯೋಜನೆ ಪ್ರಕಾರ 15 ಮೀಟರ್‌ ಹಿಂದೆಯೇ (ಈಗ ಹೊರಬಂದ ಕಟರ್‌ಹೆಡ್‌ ತುದಿಯಿಂದ 15 ಮೀಟರ್‌ ಹಿಂದಕ್ಕೆ) ಹೊರಬರಬೇಕಾಗಿತ್ತು.

ಆದರೆ, ಆ ನಿಗದಿಪಡಿಸಿದ್ದ ಮೂಲಜಾಗದಿಂದ ಕೇವಲ ಐದು ಮೀ. ಅಂತರದಲ್ಲಿ ಹತ್ತಾರು ಕಟ್ಟಡಗಳು ತಲೆಯೆತ್ತಿವೆ. ದೈತ್ಯಯಂಂತ್ರ ಅನಾಮತ್ತಾಗಿ ಹೊತ್ತುತರುವ ಕೆಸರು, ಮಣ್ಣಿನ ಗುಡ್ಡೆಯು ಆ ಕಟ್ಟಡಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿದ್ದವು. ಆದ್ದರಿಂದ ಫಾಲ್ಸ್‌ ಬ್ಲಾಕ್‌ ಎಂಬ ಕೃತಕ ಸುರಂಗ ಮಾರ್ಗ ನಿರ್ಮಿಸಿ, ಅದಕ್ಕೆ ರಿಂಗ್‌ಗಳನ್ನೂ ಅಳವಡಿಸಿ, ಅದರ ಮೂಲಕ ಹೊರತರಲಾಗಿದೆ ಎಂದು ತಜ್ಞರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next