Advertisement

ಕ್ಯಾಂಡಿ ಟೆಸ್ಟ್‌ ; ಶಿಖರ್‌ ಧವನ್‌ ಭರ್ಜರಿ ಶತಕ 

03:46 PM Aug 12, 2017 | |

ಕ್ಯಾಂಡಿ: ಇಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಶನಿವಾರದಿಂದ ನಡೆಯುತ್ತಿರುವ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

Advertisement

ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಭರ್ಜರಿ ಆಟವಾಡಿದ ಆರಂಭಿಕರಾದ ಧವನ್‌ 119 ರನ್‌ಗಳಿಸಿ ಔಟಾದರು. ಇದು ಅವರ ಟೆಸ್ಟ್‌ನ 6 ನೇ ಶತಕವಾಗಿದೆ. ಧವನ್‌ಗೆ ಸಾಥ್‌ ನೀಡಿದ ರಾಹುಲ್‌ 85 ರನ್‌ಗಳಿಸಿ ಔಟಾದರು.ಪೂಜಾರಾ 8 ರನ್‌,ರೆಹಾನೆ 17 ರನ್‌ಗೆ ಔಟಾಗಿ ನಿರಾಶರಾದರು. 

3 ಪಂದ್ಯಗಳ ಸರಣಿಯಲ್ಲಿ  ಈಗಾಗಲೇ 2 ಪಂದ್ಯಗಳನ್ನು ಗೆದ್ದಿರುವ ಭಾರತ 4 ವಿಕೆಟ್‌ ನಷ್ಟಕ್ಕೆ 268 ರನ್‌ಗಳಿಸಿದೆ. ಕೊಹ್ಲಿ 27 ,ಅಶ್ವಿ‌ನ್‌ 1 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next