Advertisement

ನೀತಿ ಸಂಹಿತೆ ಉಲ್ಲಂಘಿಸದ ಅಭ್ಯರ್ಥಿಗಳು: ಡಿಸಿ

12:44 AM May 26, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆದಿದ್ದರೂ ಅಭ್ಯರ್ಥಿಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ಸಾರ್ವ ಜನಿಕ ಶಾಂತಿಗೆ ಭಂಗವಾಗವಂಥ ಘಟನೆ ನಡೆದಿಲ್ಲ. ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸುವಲ್ಲಿ ರಚಿಸಲಾದ ತಂಡಗಳು ಸಕ್ರಿಯವಾಗಿ ಕೆಲಸ ಮಾಡಿವೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಶ್ಲಾ ಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಮುಂದಿನ 45 ದಿನ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಮೂಡಿಗೆರೆ, ಚಿಕ್ಕಮಗಳೂರು, ತರಿಕರೆ, ಶೃಂಗೇರಿ ಕ್ಷೇತ್ರದ ಮತಯಂತ್ರಗಳನ್ನು ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಚುನಾವಣಾ ಆಯೋಗದ ಆದೇಶ ಬಂದ ಅನಂತರ ಮುಂದಿನ ಕ್ರಮ ತೆಗೆದುಕೊಳ್ಳ ಲಾಗುತ್ತದೆ ಎಂದರು.

ಸಿ -ವಿಜಿಲ್‌ ಪ್ರಥಮ
ಸಿ-ವಿಜಿಲ್‌ನಲ್ಲಿ ದಾಖ ಲಾದ ದೂರುಗಳನ್ನು ವಿಲೇವಾರಿ ಮಾಡುವಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟು 273 ದೂರು ದಾಖಲಾಗಿದ್ದು, 225 ದೂರು ಇತ್ಯರ್ಥ ಮಾಡಲಾಗಿದೆ. 48 ಅನಪೇಕ್ಷಿತ ದೂರು ಎಂದರು.

ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಪ್ಲಾಸ್ಟಿಕ್‌ ಮುಕ್ತ ವ್ಯವಸ್ಥೆ ಇತ್ತು ಎಂದರು.

Advertisement

ಮತದಾರರಿಗೆ ಮಾಹಿತಿ ನೀಡಲು 1950 ಟ್ರೋಲ್‌ ಫ್ರೀ ದೂರವಾಣಿ ವ್ಯವಸ್ಥೆ ಮಾಡಲಾಗಿತ್ತು. ಮುಂದೆಯೂ ಇದು ಕೆಲಸ ಮಾಡಲಿದೆ ಎಂದು ತಿಳಿಸಿದರು.
ಶಾಂತಿಯುತ ಚುನಾವಣೆ ನಡೆಸಲು ಸಹಕರಿಸಿದ ಎಲ್ಲ ಸರಕಾರಿ ಅಧಿಕಾರಿಗಳಿಗೆ, ಬ್ಯಾಂಕ್‌, ಪೊಲೀಸ್‌, ಸಿಆರ್‌ಪಿಎಫ್ ಸಿಬಂದಿಗೆ, ಅಭ್ಯರ್ಥಿಗಳಿಗೆ, ಮಾಧ್ಯಮದವರಿಗೆ ಕೃತಜ್ಞತೆ ತಿಳಿಸಿದರು.

ಎಸ್ಪಿ ನಿಶಾ ಜೇಮ್ಸ್‌, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next