Advertisement

ಶಿಕ್ಷಣ ಇಲಾಖೆ ಎಡವಟ್ಟು; ಪರೀಕ್ಷೆ ಆರಂಭವಾದರೂ ಸಿಗದ ಕೇಂದ್ರ- ಗೊಂದಲದಲ್ಲಿ ಅಭ್ಯರ್ಥಿಗಳು

10:10 AM Nov 06, 2022 | Team Udayavani |

ಕಲಬುರಗಿ: ಇಂದು ನಡೆಯುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಲು ನಾನಾ ಕಡೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳು ಸಿಗದೆ ಗೊಂದಲ ಏರ್ಪಟ್ಟಿದೆ. ಅದಲ್ಲದೆ ಶಿಕ್ಷಣ ಇಲಾಖೆಯ ಎಡವಟ್ಟಿನಿಂದಾಗಿ ಪರೀಕ್ಷಾ ಕೇಂದ್ರಗಳೇ ಸಿಗುತ್ತಿಲ್ಲ

Advertisement

ಇದರಿಂದಾಗಿ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದ್ದು ಭವಿಷ್ಯದಲ್ಲಿ ಉದ್ಯೋಗ ನಷ್ಟ ಸಾಧ್ಯತೆ ಎದುರಾಗಿದೆ ಎಂದು ಹಲವರು ದೂರಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದಾಗಿ ಪರೀಕ್ಷಾ ಕೇಂದ್ರಗಳು ನಿಗದಿತ ಸ್ಥಳದಲ್ಲಿ ಇಲ್ಲದೇ ಇರುವುದು ಈಗ ತೊಂದರೆ ಉಂಟಾಗಿದೆ.

ಹಲವಾರು ಅಭ್ಯರ್ಥಿಗಳ ಹಾಲ್ ಟಿಕೆಟ್ ನಲ್ಲಿ ಜೀವನ್ ಪ್ರಕಾಶ್ ಪರೀಕ್ಷಾ ಕೇಂದ್ರ ದಾಖಲಾಗಿದೆ. ಆದರೆ ವಾಸ್ತವದಲ್ಲಿ ಜೀವನ್ ಪ್ರಕಾಶ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರವೇ ಇಲ್ಲ. ಇದರಿಂದಾಗಿ ಆ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ವಿರುದ್ಧ ಹಾಗೂ ಡಿಡಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ಸಮಯ ಮುಗಿಯುತ್ತಿದ್ದರೂ ಪರೀಕ್ಷಾ ಕೇಂದ್ರ ಸಿಗದೇ ಇರುವುದಕ್ಕೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಮತ್ತು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶದಲ್ಲಿ ಎಂಟಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ತೊಂದರೆ ಎದುರಾಗಿದ್ದು, ಹಲವಾರು ವಿದ್ಯಾರ್ಥಿಗಳು ಮತ್ತು ಭಾವಿ ಶಿಕ್ಷಕರು ಉದ್ಯೋಗ ನಷ್ಟದ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ಪರ್ಯಾಯ ವ್ಯವಸ್ಥೆ ಅಥವಾ ಮರು ಪರೀಕ್ಷೆ ನಡೆಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next