ಸಂತೆಮರಹಳ್ಳಿ: ಯಳಂದೂರು ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಗುರುವಾರ ನಾಮಪತ್ರ ಸಲ್ಲಿಸಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮುಗಿಬಿದ್ದರು.
ಪಟ್ಟಣದಲ್ಲಿ ಒಟ್ಟು 11 ವಾರ್ಡುಗಳಿದ್ದು ಇದರಲ್ಲಿ ಕಾಂಗ್ರೆಸ್ ಎಲ್ಲಾ ವಾರ್ಡುಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಎಸ್‌ಪಿ 8ನೇ ವಾರ್ಡ್ ಹೊರತುಪಡಿಸಿ 10 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಬಿಜೆಪಿ 1ನೇ ವಾರ್ಡನ್ನು ಹೊರತುಪಡಿಸಿ 10 ವಾರ್ಡ್‌ಗಳಲ್ಲಿ ತಮ್ಮ ಪಕ್ಷದಿಂದ ಬಿ.ಫಾರಂ ನೀಡಿತು. ಅಲ್ಲದೆ ಜೆಡಿಎಸ್ ಕೇವಲ 3ನೇ ವಾರ್ಡಿನಿಂದ ಮಾತ್ರ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಇದರೊಂದಿಗೆ ಇದೇ ಪ್ರಥಮ ಬಾರಿಗೆ ಎಸ್‌ಡಿಪಿಐ ಪಕ್ಷವು 10ನೇ ವಾರ್ಡಿನಲ್ಲಿ ತನ್ನ ಅಭ್ಯರ್ಥಿ ನಿಲ್ಲಿಸುವ ಮೂಲಕ ಗಮನ ಸೆಳೆಯಿತು. ಇದರೊಂದಿಗೆ ಪಕ್ಷೇತರರಾಗಿ ಅನೇಕ ಸದಸ್ಯರು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಒಟ್ಟು 43 ನಾಮಪತ್ರಗಳು ಸಲ್ಲಿಕೆಯಾದವು ಒಟ್ಟು 11 ವಾರ್ಡುಗಳಿಗೆ 48 ನಾಮಪತ್ರಗಳು ಸಲ್ಲಿಕೆಯಾದವು.
ನಾಮಪತ್ರ ಸಲ್ಲಿಸಿದವರ ಅಂತಿಮಪಟ್ಟಿ:
Advertisement
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ಚುನಾವಣಾ ಕಚೇರಿ ಮುಂಭಾಗ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಸಾವಿರಾರು ಜನರು ಜಮಾವಣೆಗೊಂಡಿದ್ದರು. ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ ಹಾಗೂ ಜೆಡಿಎಸ್ ಪಕ್ಷ ಸೇರಿದಂತೆ ಅನೇಕರು ಪಕ್ಷೇತರ ಅಭ್ಯರ್ಥಿಗಳಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ನಾಮಪತ್ರ ಸಲ್ಲಿಸಿದರು.
Related Articles
Advertisement
ಸಾಮಾನ್ಯ ವರ್ಗಕ್ಕೆ ಮೀಸಲ್ಪಟ್ಟ 1 ನೇ ವಾರ್ಡಿನಿಂದ ಮಹೇಶ್(ಕಾಂಗ್ರೆಸ್), ಎನ್. ರಘು (ಬಿಎಸ್‌ಪಿ), ಎಸ್. ಜಯಲಕ್ಷ್ಮೀ (ಪಕ್ಷೇತರ) ಎಸ್. ರಾಮಣ್ಣ (ಪಕ್ಷೇತರ).
ಸಾಮಾನ್ಯ ವರ್ಗಕ್ಕೆ ಮೀಸಲಾಗಿಟ್ಟ 2 ನೇ ವಾರ್ಡಿನಿಂದ ವೈ.ಜಿ. ರಂಗನಾಥ (ಕಾಂಗ್ರೆಸ್), ಶಿವಶಂಕರ (ಬಿಜೆಪಿ), ವೈ.ಎಲ್. ಸಿದ್ದರಾಜು (ಬಿಎಸ್‌ಪಿ), ವೈ.. ಉಮಾಶಂಕರ, ನಾಗಣ್ಣ ಎಂ. ವಿನೋದ್, ಮುನವರ್‌ಬೇಗ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
ಅನುಸೂಚಿತ ಪಂಗಡಕ್ಕೆ ಮೀಸಲಾದ 3 ನೇ ವಾರ್ಡಿಗೆ ಮಹಾದೇವನಾಯಕ (ಕಾಂ ಗ್ರೆಸ್) ಮುರಳಿಕೃಷ್ಣ (ಬಿಜೆಪಿ), ಜಗದೀಶ್ (ಬಿಎಸ್‌ಪಿ), ಶ್ರೀನಿವಾಸನಾಯಕ (ಜೆಡಿ ಎಸ್) ಸಿ. ನಾಗರಾಜು, ವೈ.ಸಿ. ಕೃಷ್ಣ ಮೂರ್ತಿ, ಎಸ್. ಕೃಪೇಂದ್ರ ರವರು ಪಕ್ಷೇತರ ಅಭ್ಯರ್ಥಿ ಗಳಾಗಿ ನಾಮಪತ್ರ ಸಲ್ಲಿಸಿದರು. ಇದರಲ್ಲಿ ಸಿ. ನಾಗರಾಜು 2 ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಮಹಿಳೆ ಕ್ಷೇತ್ರದ 4ನೇ ವಾರ್ಡಿ ನಿಂದ ಎಂ. ನಾಗರತ್ನ (ಕಾಂಗ್ರೆಸ್) ಬಿ. ಸವಿತಾ (ಬಿಜೆಪಿ) ಬಿ. ಮಹಾದೇವಮ್ಮ (ಬಿಎಸ್‌ಪಿ). ಪ.ಜಾತಿಗೆ ಮೀಸಲಾದ 5 ನೇ ವಾರ್ಡಿನಿಂದ ಕೆ. ಮಲ್ಲಯ್ಯ(ಕಾಂಗ್ರೆಸ್), ಮಹಾದೇವ (ಬಿಜೆಪಿ), ಎಲ್. ಲಿಂಗರಾಜು (ಬಿಎಸ್‌ಪಿ) ಎಂ. ಮಲ್ಲಿಕಾರ್ಜುನ ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದರು.
ಅನುಸೂಚಿತ ಪಂಗಡಕ್ಕೆ ಮೀಸಲಾದ 6 ನೇ ವಾರ್ಡಿನಿಂದ ಎಸ್.ಮಂಜು (ಕಾಂಗ್ರೆಸ್) ವೈ.ಎಸ್. ಭೀಮಪ್ಪ (ಬಿಜೆಪಿ) ಜಿ. ನವೀನ್ (ಬಿಎಸ್‌ಪಿ) ನಾಮಪತ್ರ ಸಲ್ಲಿಸಿದರು. ಅನು ಸೂಚಿತ ಪಂಗಡ ಮಹಿಳಾ ಸ್ಥಾನಕ್ಕೆ ಮೀಸಲಾದ 7 ನೇ ವಾರ್ಡಿನಿಂದ ಆರ್. ಪ್ರಭಾವತಿ (ಕಾಂಗ್ರೆಸ್) ಎಂ. ಚಂದ್ರಿಕಾ (ಬಿಜೆಪಿ) ನಾಗ ವೇಣಿ (ಬಿಎಸ್‌ಪಿ) ನಾಮಪತ್ರ ಸಲ್ಲಿಸಿದರು. ಸಾಮಾನ್ಯ ವರ್ಗದ 8 ನೇ ವಾರ್ಡಿನಿಂದ ಬಿ. ರವಿ (ಕಾಂಗ್ರೆಸ್) ಆರ್. ಭಾಗ್ಯರತ್ನ (ಬಿಜೆಪಿ). ಪ.ಜಾತಿ ಮಹಿಳೆಯ 9ನೇ ವಾರ್ಡಿನಿಂದ ಸುಶೀಲಾ (ಕಾಂಗ್ರೆಸ್) ವåಹದೇವಮ್ಮ (ಬಿಜೆಪಿ) ಶೋಭಾ (ಬಿಎಸ್‌ಪಿ) ಆರ್. ಮಹದೇವಮ್ಮ (ಪಕ್ಷೇತರ). ಸಾಮಾನ್ಯ ಮಹಿಳೆಯ 10 ನೇ ವಾರ್ಡಿನಿಂದ ಎಸ್. ಲಕ್ಷ್ಮಿ (ಕಾಂಗ್ರೆಸ್), ಗಿರಿಜಾ (ಬಿಜೆಪಿ), ನಜ್ಮಾ ಅಪ್ಸರ್‌ಖಾನ್ (ಬಿಎಸ್‌ಪಿ), ಅಫ್ರಿನ್ ಬಾನು (ಎಸ್‌ಡಿಪಿಐ) ಎನ್. ತನುಜಾ, ನಿಂಗಮಣಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಮಳೆಯ 11ನೇ ವಾರ್ಡಿನಿಂದ ಶಾಂತಮ್ಮ (ಕಾಂಗ್ರೆಸ್), ಸರಸ್ವತಿ (ಬಿಜೆಪಿ) ಸಬೀಹಾ ಬೇಗಂ (ಬಿಎಸ್‌ಪಿ) ನಾಮಪತ್ರ ಸಲ್ಲಿಸಿದರು.