Advertisement

ಅಭ್ಯರ್ಥಿಗಳ ಚಿತ್ತ ಚನ್ನರಾಯಪಟ್ಟಣದತ್ತ

02:32 PM Apr 21, 2021 | Team Udayavani |

ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಚಿತ್ತಚನ್ನರಾಯಪಟ್ಟಣ ತಾಲೂಕಿನತ್ತ ಹೆಚ್ಚು ವಾಲುತ್ತಿದ್ದು,ತಮ್ಮ ಪರವಾಗಿ ವಿಜಯಲಕ್ಷ್ಮೀ ಒಲಿಸಿಕೊಳ್ಳಲುಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೆಚ್ಚು ಮಂದಿ ಕಸಾಪ ಸದಸ್ಯರನ್ನು ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆ ಹೊಂದಿದೆ.

Advertisement

ಹಾಗಾಗಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆಸ್ಪರ್ಧಿಸಿರುವ ಅಭ್ಯರ್ಥಿಗಳು ನಿತ್ಯವೂ ತಾಲೂಕಿಗೆ ಭೇಟಿ ನೀಡಿ ಪರಿಷತ್ತಿನ ಮತದಾರರ ಸಂಪರ್ಕಿಸುತ್ತಿದ್ದಾರೆ. ತಾಲೂಕಿನಲ್ಲಿ ಯಾರು ಹೆಚ್ಚು ಮತಪಡೆಯುತ್ತಾರೆ ಅವರಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ.

ಮತದಾರ ಪಟ್ಟಿಪರಿಷ್ಕರಣೆಯಾಗಿ ಹಲವುದಶಕ: ಜಿಲ್ಲಾ ಘಟಕ ಅಧ್ಯಕ್ಷಸ್ಥಾನದ ಅಭ್ಯರ್ಥಿಗಳಿಗೆಸಾಕಷ್ಟು ಸವಾಲುಗಳುಎದುರಾಗುತ್ತಿವೆ. ಮತದಾರರ ಹುಡುಕುವುದೇ ಒಂದು ಸವಾಲಾಗಿ ಮಾರ್ಪಟ್ಟಿದೆ. ಕಸಾಪ ಸದಸ್ಯರು ಅಷ್ಟುಸುಲಭವಾಗಿ ಅಭ್ಯರ್ಥಿಗಳ ಕೈಗೆ ಸಿಗುತ್ತಿಲ್ಲ,ಮತದಾರರ ಪಟ್ಟಿಯಲ್ಲಿ ಇರುವಕೆಲ ಮತದಾರರು ವಿಳಾಸಒಂದೆಡೆಯಾದರೆ ವಾಸಮತ್ತೂಂದೆಡೆ, ಮೃತಪಟ್ಟವರ ಹೆಸರೂ ಇನ್ನೂಮತಪಟ್ಟಿಯಲ್ಲಿರುವುದನ್ನು ನೋಡಿದರೆ ಜಿಲ್ಲೆಯಕಸಾಪ ಮತದಾರರ ಪಟ್ಟಿಪರಿಷ್ಕರಣೆಗೊಂಡು ಹಲವುದಶಕಗಳೇ ಕಳೆದಿವೆ ಎನ್ನಬೇಕು.

ಮತದಾರರನ್ನು ಹುಡುಕುವುದೇದೊಡ್ಡ ಸವಾಲು: ಕಸಾಪ ಸದಸ್ಯತ್ವಪಡೆಯುವಾಗ ನೀಡಿರುವ ವಿಳಾಸವೇ ಈಗಲೂಪಟ್ಟಿಯಲ್ಲಿದೆ. ಆ ಸ್ಥಳಕ್ಕೆ ತೆರಳಿ ನೋಡಿದರೆ ಅಲ್ಲಿ ಯಾರು ಇಲ್ಲ, ಸ್ಥಳದಿಂದ ಬೇರೆಡೆ ವರ್ಗಾವಣೆಯಾಗಿದ್ದಾರೆ. ಅವರು ತಮ್ಮ ವಿಳಾಸ ಬದಲಾಯಿಸಿಕೊಂಡಿಲ್ಲ, ಪರಿಷತ್ತಿಗೆ ಸದಸ್ಯರಾಗಿದ್ದ ವೇಳೆಯ ಯುವತಿಯರು ಮದುವೆಯಾಗಿ ತಮ್ಮ ಗಂಡನ ಮನೆಗೆ ತೆರಳಿದ್ದರೂ ತಾಲೂಕಿನ ತಮ್ಮ ತವರುಮನೆ ವಿಳಾಸ ಪಟ್ಟಿಯಲ್ಲಿದೆ.

ಇನ್ನು ಮೃತಪಟ್ಟಿರುವಸದಸ್ಯರ ಹೆಸರನ್ನು ಕೈಬಿಟ್ಟಿಲ್ಲ, ಹಲವು ಮತದಾರರವಿಳಾಸದಲ್ಲಿ ಊರಿನ ಹೆಸರಿಲ್ಲ, ಕೆಲವೆಡೆ ತಪ್ಪಾಗಿ ನಮೂದಿಸಲಾಗಿದೆ. ಈ ಎಲ್ಲಾ ಕಾರಣದಿಂದ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ದೊಡ್ಡಸವಾಲಾಗಿದೆ.

Advertisement

ಅಂಚೆ ಪತ್ರಗಳು ಮರಳುತ್ತಿವೆ: ಚುನಾವಣೆಯಲ್ಲಿತಮ್ಮನ್ನು ಬೆಂಬಲಿಸುವಂತೆ ಕೋರಿ ಅಭ್ಯರ್ಥಿಗಳುಮತದಾರರಿಗೆ ಅಂಚೆ ಪತ್ರದ ಮೂಲಕ ಮತಯಾಚನೆಮಾಡುತ್ತಿದ್ದಾರೆ. ಆದರೆ ತಪ್ಪು ವಿಳಾಸ ಎಂದುಪತ್ರಗಳು ಹಿಂದಿರುಗಿ ಬಂದಿದೆ. ಚುನಾವಣೆ ದಿನಾಂಕಪ್ರಕಟಣೆಗೆ ಮೊದಲೇ ಕಸಾಪ ಮತದಾರರಪಟ್ಟಿ ಲೋಪವಿದ್ದರೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.

ಈ ಮಾಹಿತಿ ಬಹುತೇಕ ಮತದಾರರಿಗೆತಲುಪದ ಪರಿಣಾಮ ಹೆಸರು ಮತ್ತು ವಿಳಾಸಸರಿಪಡಿಸುವ ಗೋಜಿಗೆ ಹೋಗಿಲ್ಲ, ಹೀಗಾಗಿಮತದಾರರ ಪಟ್ಟಿ ಗೊಂದಲಕ್ಕೆ ಅವಕಾಶ ನೀಡಿದೆ.

ಅಭ್ಯರ್ಥಿ ಸಮಯ, ಹಣ ವ್ಯರ್ಥ: ಮತದಾರರಹಳೆ ಪಟ್ಟಿಯನ್ನು ಹಿಡಿದುಕೊಂಡು ಅಭ್ಯರ್ಥಿಗಳುಪ್ರಚಾರ ಪ್ರಾರಂಭಿಸಿದ್ದು, ಅಲ್ಲಿ ಇಲ್ಲಿ ಅಲೆಯುತ್ತಿದ್ದಾರೆ,ಬಹುತೇಕ ಮತದಾರರ ವಿಳಾಸ ಬದಲಾಗಿರುವುದನ್ನುಕಂಡು ದಿಕ್ಕು ತೋಚದಂತಾದರೆ, ಮೃತಪಟ್ಟವರಹೆಸರು ನೋಡಿ ಬೇಸ್ತುಬೀಳುತ್ತಿದ್ದಾರೆ, ಮತದಾರರಹುಡುಕುವುದರಲ್ಲೇ ಸಮಯ ಹಾಗೂ ಸುತ್ತಾಟಕ್ಕೆಹೆಚ್ಚು ಹಣ ವ್ಯಯವಾಗುತ್ತಿದ್ದರೂ ತಾಲೂಕಿನ ಬಗ್ಗೆಅಭ್ಯರ್ಥಿಗಳ ಆಸಕ್ತಿ ಕಳೆದುಕೊಳ್ಳದೆ ಮತಭೇಟೆಗೆ ಮುಂದಾಗುತ್ತಿದ್ದಾರೆ.

ಶಾಮಸುಂದರ್‌ ಕೆ ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next