Advertisement

ಸೀರೆ ಚಂದವೋ ನೀರೆ ಅಂದವೋ, ಕಾಟನ್‌ಗೂ ಖಾದಿಗೂ ಏನು ಬಂಧವೋ

03:45 AM Jan 18, 2017 | Harsha Rao |

ಫ್ಯಾಶನ್‌ ಜಗತ್ತಿನಲ್ಲಿ ಕ್ಷಣ ಕ್ಷಣಕ್ಕೂ ಅಚ್ಚರಿ. ಫ್ಯಾಶನ್‌ ಟ್ರೆಂಡ್‌ ಯಾವ ರೂಪದಲ್ಲಿ ಹೇಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ ಅನ್ನುವುದನ್ನು ಹೀಗೇ ಅಂತ ನಂಬೋದು ಕಷ್ಟ. ಸರಳ, ಸುಂದರ ಖಾದಿ ಸೀರೆ ಈಗ ಟ್ರೆಂಡಿಯಾಗ್ತಿದೆ. ಬಿಳಿ, ಕೆನೆ ಬಣ್ಣದ ಕಾಟನ್‌ ಸೀರೆಗಳಿಗೆ ಈಗ ಡಿಮ್ಯಾಂಡ್‌ ಹೆಚ್ಚು.
*
ಖಾದಿ, ಕೈ ಮಗ್ಗಕ್ಕೆ ಘನವಾದ ಇತಿಹಾಸ ಇದೆ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇದೆ. ಖಾದಿ ಸಾರ್ವಕಾಲಿಕ ಉಡುಪು, ನಮ್ಮ ನೆಲದ ಹೆಮ್ಮೆ. ಅದು ಹಳತಾಗುವುದು ಅಂತಿಲ್ಲ ಅಂತ ಡಿಸೈನರ್‌ ಅನಾಮಿಕ ಖನ್ನ ಹೇಳುತ್ತಾರೆ. ಈ ಸಾರ್ವಕಾಲಿಕ ಉಡುಪಿನಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಝಗಮಗಿಸುವ ರ್‍ಯಾಂಪ್‌ ಮೇಲೇರಿಯೂ ಖಾದಿ ಸಂಭ್ರಮಿಸಿದೆ. ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ಕೂಲ್‌ ಕೂಲ್‌ ಅನುಭವ ಕೊಡೋದು ಈ ಖಾದಿಯ ಹೆಚ್ಚುಗಾರಿಕೆ. ಇನ್ನೊಂದು ವಿಶೇಷ ಅಂದ್ರೆ ಇದರಲ್ಲಿ ಗಾಳಿ ಸರಾಗವಾಗಿ ಹರಿದಾಡಿ ದೇಹಕ್ಕೆ ಹಾಯಾದ ಅನುಭವ ನೀಡುತ್ತದೆ.
ಖಾದಿ ಉಡುಪು ಸದ್ಯಕ್ಕೀಗ ಲೇಟೆಸ್ಟ್‌ ಸ್ಟ್ರೀಟ್‌ ಟ್ರೆಂಡ್‌ ಆಗಿ ಬದಲಾಗಿದೆ. ಹಾಗಂತ ಖಾದಿಯ ಘನತೆಯೇನೂ ಕುಂದಿಲ್ಲ. ಅದು ಇನ್ನಷ್ಟು ಕಲರ್‌ಫ‌ುಲ್‌ ಆಗಿ ಕ್ಯೂಟ್‌ ಹುಡುಗಿಯರ ಬೆಚ್ಚನೆಯ ಉಡುಪಾಗಿದೆ. 

Advertisement

ವಿದ್ಯಾ ಬಾಲನ್‌ಗೆ ಮೊದಲಿಂದಲೂ ದೇಸಿ ಉಡುಪು ಅಂದ್ರೆ ಅಚ್ಚುಮೆಚ್ಚು. “ಸ್ಕೂಲ್‌ಗೆ ಹೋಗೋ ಟೈಂನಲ್ಲಿ ಜಮ್ಕ ಅಂದ್ರೆ ಪ್ರಾಣ. ಝರಿ ಝರಿಯ ಲಂಗ ಹಾಕ್ಕೊಳ್ಳೋದ್ರಲ್ಲಿ ಸಖತ್‌ ಖುಷಿಯಿತ್ತು. ಇವತ್ತಿಗೂ ನಾನು ಸ್ಕರ್ಟ್‌ ಹಾಕ್ಕೊಂಡ್ರೆ ಪುಟ್ಟ ಹುಡುಗಿ ಫೀಲ್‌ ಆಗುತ್ತೆ. ಆದರೆ ಸರಳವಾಗಿರುವ ಖಾದಿ ಕಂಡರೆ ಬಹಳ ಆಪ್ತವೆನಿಸುವ ಫೀಲ್‌. ಇಂದಿಗೂ ನನಗೆ ಖಾದಿ ಅಂದರೆ ಮನೆ ಊಟ ಉಂಡ ಹಾಗೆ. ಸಂತೃಪ್ತಿ, ನೆಮ್ಮದಿ, ಅಮ್ಮನ ತೋಳಲ್ಲಿರುವಂತ ಬೆಚ್ಚನೆಯ ಅನುಭೂತಿ’ ಂದು ಭಾವುಕವಾಗಿ ಹೇಳುತ್ತಾರೆ ವಿದ್ಯಾ. 

ಸಭ್ಯಸಾಚಿ ಡಿಸೈನ್‌
ವಿದ್ಯಾಗೆ ಸಭ್ಯಸಾಚಿ ಡಿಸೈನ್‌ಗಳಲ್ಲಿ ಖಾದಿನೇ ಬಹಳ ಇಷ್ಟವಂತೆ. ಅವರು ಇಲ್ಲಿ ಉಟ್ಟಿರೋದೂ ಸಭ್ಯಸಾಚಿ ಡಿಸೈನ್‌ ಮಾಡಿರೋ ಖಾದಿ ಸೀರೆ. ಅಚ್ಚಬಿಳಿಪಿನ ಸೀರೆಗೆ ಬಂಗಾರದ ಬಣ್ಣದ ಬಾರ್ಡರ್‌ ಇದೆ. ಫ‌ುಲ್‌ ಸ್ಲಿàವ್‌ ಇರೋ ಡಿಸೈನರ್‌ ಬ್ಲೌಸ್‌ ತೊಟ್ಟಿದ್ದಾರೆ. ಈ ಸೀರೆ ಡಿಸೈನ್‌ ಮಾಡಿರೋ ಸಭ್ಯಸಾಚಿ ಪ್ರಕಾರ, ಖಾದಿಗೆ ಇರುವ ಡಿಗ್ನಿಟಿ ಮತ್ಯಾವ ಉಡುಗೆಗೂ ಇಲ್ಲ. ಅದರಲ್ಲೂ ಸೀರೆಗಿರುವ ಘನತೆ ಮತ್ಯಾವ ಉಡುಗೆಗೂ ಇಲ್ಲ ಅಂತಾರೆ. 

ಖಾದಿಯಲ್ಲರಳುವ ಬುದ್ಧ 
ಖಾದಿ ಸೀರೆಗಳಲ್ಲಿ ಬುದ್ಧನ ವಿನ್ಯಾಸಕ್ಕೆ ಮಹತ್ವ ಹೆಚ್ಚು. ಕೈ ಮಗ್ಗದ ಖಾದಿ ಕಾಟನ್‌ ಸೀರೆಯಲ್ಲಿ ಕಲಾವಿದರು ಬುದ್ಧನ ಚಿತ್ರ ಬರೆಯುತ್ತಾರೆ. ಬಿಳಿ ಬಣ್ಣದ ಸೀರೆಯಲ್ಲಿ ಕೆನೆಬಣ್ಣ, ಹೊಂಬಣ್ಣದ ಬುದ್ಧ ಚಿತ್ರಗಳು. ಹಳದಿ ಹಸಿರು ಮಿಶ್ರಿತ ಬಣ್ಣದ ಸೀರೆಯಲ್ಲಿ ಅದೇ ಬಣ್ಣದ ಬುದ್ಧನ ಪ್ರಿಂಟ್‌ಗಳು ಜನಪ್ರಿಯವಾಗುತ್ತಿವೆ.  

ಟ್ರೈಬಲ್‌ ಆರ್ಟ್‌ ಖಾದಿ
ಚಕಿತಗೊಳಿಸುವ ವೆಜಿಟೇಬಲ್‌ ಕಲರ್‌ನ ಆರ್ಟ್‌ಗಳನ್ನು ಖಾದಿ ಸಿಲ್ಕ್ ಸೀರೆಗಳಲ್ಲಿ ಕಾಣಬಹುದು. ಕಾಟನ್‌ ಖಾದಿಯಲ್ಲೂ ಸಹಜ ನೈಸರ್ಗಿಕ ಬಣ್ಣದ ಬುಡಕಟ್ಟಿನ ಕಡ್ಡಿ ಚಿತ್ರಗಳು ಸಹಜವಾಗಿ, ಸುಂದರವಾಗಿ ಕಾಣುತ್ತವೆ. ಆದರೆ ಹೆಚ್ಚು ಟ್ರೈಬಲ್‌ ಪ್ರಿಂಟ್‌ಗಳು ಕಾಣಸಿಗೋದು ಖಾದಿ ಸಿಲ್ಕ್ನಲ್ಲೇ. ಒರಿಸ್ಸಾ ಇಂಥ ಕಲೆಗಳ ತವರು. ಅಲ್ಲಿ ಕೈಯಲ್ಲೇ ನೇಯ್ದ ಖಾದಿಬಟ್ಟೆಯಲ್ಲಿ ಬುಡಕಟ್ಟಿನ ಮಂದಿ ಸಾಂಪ್ರದಾಯಿಕ ಚಿತ್ರ ಬರೆಯುತ್ತಾರೆ. ಖಾದಿ ಸೀರೆಯ ಮೇಲಿನ ಒರಿಜಿನಲ್‌ ವೆಜಿಟೆಬಲ್‌ ಟ್ರೈಬಲ್‌ ಆರ್ಟ್‌ಗಳು ಸ್ವಲ್ಪ ದುಬಾರಿಯಾದರೂ ಆ ಎಲಿಗೆಂಟ್‌ ಲುಕ್‌ಗೆ ಸಾಟಿಯಿಲ್ಲ. 
ನಿಮ್ಮ ನಿಲುವಿಗೆ ಗಾಂಭೀರ್ಯದ ಟಚ್‌ ಕೊಡೋದು ಈ ಖಾದಿ ಸೀರೆಯ ವಿಶೇಷತೆ. ನಿಮ್ಮ ವಾರ್ಡ್‌ರೋಬ್‌ನಲ್ಲಿ ಖಾದಿ ಸೀರೆಗೂ ಜಾಗವಿರಲಿ, ಖಾದಿ ನಿಮ್ಮನ್ನು ಬೆಚ್ಚಗಿಡಲಿ.

Advertisement

– ನಿಶಾಂತ್‌ ಕಮ್ಮರಡಿ

Advertisement

Udayavani is now on Telegram. Click here to join our channel and stay updated with the latest news.

Next