Advertisement

ಪ್ರಾಥಮಿಕ ಹಂತದಲ್ಲೇ ಕ್ಯಾನ್ಸ್‌ರ್‌ ಚಿಕಿತ್ಸೆ ಅವಶ್ಯ

11:51 AM Feb 09, 2018 | |

ಪಿರಿಯಾಪಟ್ಟಣ: ವಿಶ್ವದಾದ್ಯಂತ ಪ್ರತಿವರ್ಷ 12.7ಮಿಲಿಯನ್‌ ಜನರು ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದು , ಪ್ರಥಮಿಕ ಹಂತದಲ್ಲೇ ಚಿಕಿತ್ಸೆ ನೀಡಿದಲ್ಲಿ ಕ್ಯಾನ್ಸ್‌ರ್‌ ಗುಣಪಡಿಸಬಹುದಾಗಿದೆ ಎಂದು ತಾಲೂಕು ಆರೋಗ್ಯಶಿಕ್ಷಣಾಧಿಕಾರಿ ಪಿ.ಪಿ.ಲತಾ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಅಬ್ಬಳತಿ ಗ್ರಾಮದಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್‌ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್‌ನಿಂದಾಗಿ ಪ್ರತಿವರ್ಷ ಏಳು ಮಿಲಿಯನ್‌ ಜನರು ಸಾವಿಗೀಡಾಗುತ್ತಿದ್ದು, ಭಾರತದಲ್ಲಿಯೇ ಪ್ರತಿನಿತ್ಯ 1500 ಜನ ಈ ಮಾರಕ ಖಾಯಿಲೆಯಿಂದಾಗಿ ಮೃತಪಡುತ್ತಿದ್ದಾರೆ.

ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚಿದಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಕ್ಯಾನ್ಸ್‌ರ್‌ ಗುಣಪಡಿಸ ಬಹುದಾಗಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶ್ವಾಸಕೋಶ ಕ್ಯಾನ್ಸರ್‌, ಬಾಯಿ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌, ಗರ್ಭಕೋಶ ಕ್ಯಾನ್ಸರ್‌ ಸೇರಿದಂತೆ ವಿವಿಧ ಕ್ಯಾನ್ಸರ್‌ ರೋಗಗಳ ಕುರಿತಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಭವಾನಿ, ಕಿರಿಯ ಆರೋಗ್ಯ ಸಹಾಯಕ ವಿಶ್ವಜ್ಞ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವಿಶಾಲಾಕ್ಷಿ, ಲತಾ, ಶಿಕ್ಷಕರಾದ ಶಹನ್‌ತಾಜ್‌, ಚಂದ್ರೇಗೌಡ, ಪಿ.ಟಿ.ಮಹದೇವ, ರೇಣುಕಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next