ಹೊಸದಿಲ್ಲಿ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಭಾರತದ ಮಾಜಿ ಶೂಟರ್ ಪೂರ್ಣಿಮಾ ಜನಾನೆ (42) ಸೋಮವಾರ ನಿಧನ ಹೊಂದಿದರು.
ಅಂತಾರಾಷ್ಟ್ರೀಯ ಶೂಟಿಂಗ್ ನ್ಪೋರ್ಟ್ಸ್ ಫೆಡರೇಶನ್ ಪರವಾನಿಗೆ ಹೊಂದಿದ್ದ ಕೋಚ್ ಆಗಿದ್ದ ಪೂರ್ಣಿಮಾ ಜನಾನೆ ಅವರಲ್ಲಿ 2 ವರ್ಷಗಳ ಹಿಂದೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು.
ಮಾಜಿ ಶೂಟರ್ ಜಾಯ್‌ದೀಪ್ ಕರ್ಮಾಕರ್ ಪ್ರಕಾರ, ಚಿಕಿತ್ಸೆ ಬಳಿಕ ಪೂರ್ಣಿಮಾ ಚೇತರಿಸಿಕೊಳ್ಳುತ್ತಿದ್ದರು. ಆದರೀಗ ಸಾವಿನ ಸುದ್ದಿ ಬಂದಪ್ಪಳಿಸಿದೆ.
ಮಹಾರಾಷ್ಟ್ರದವರಾದ ಪೂರ್ಣಿಮಾ ಜನಾನೆ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್, ಏಶ್ಯನ್ ಚಾಂಪಿಯನ್‌ಶಿಪ್, ಕಾಮನ್ವೆಲ್ತ್ ಚಾಂಪಿಯನ್‌ಶಿಪ್ ಮೊದಲಾದ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
10 ಮೀ. ಏರ್ ರೈಫಲ್ ಶೂಟಿಂಗ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದ್ದರು. ಮಹಾರಾಷ್ಟ್ರ ಸರಕಾರದ ಶಿವ ಛತ್ರಪತಿ ಕ್ರೀಡಾ ಪ್ರಶಸ್ತಿಗೆ ಭಾಜನರಾಗಿದ್ದರು.
ಪೂರ್ಣಿಮಾ ಜನಾನೆ ನಿಧನಕ್ಕೆ ಭಾರತದ ನ್ಯಾಶನಲ್ ರೈಫಲ್ ಅಸೋಸಿಯೇಶನ್ ಶೋಕ ವ್ಯಕ್ತಪಡಿಸಿದೆ.