ಧಾರವಾಡ: ಎಸ್‌ಡಿಎಂ ಆಸ್ಪತ್ರೆ ವೈದ್ಯರು ರಕ್ತದ ಕ್ಯಾನ್ಸರ್‌ಗೆ ಕಿಮೊಥೆರಪಿ ಚಿಕಿತ್ಸೆ ನೀಡದೇ ರೋಗ ಗುಣ ಪಡಿಸಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಆಲಗೂರಲಿ ಗ್ರಾಮದ ರೋಗಿರೊಬ್ಬರಿಗೆ ಮೂಲವ್ಯಾಧಿ ತೊಂದರೆಯುಂಟಾಗಿತ್ತು.
ಆಗ ಹತ್ತಿರದ ವೈದ್ಯರಿಗೆ ತೋರಿಸಿದ್ದರು.
ರಕ್ತದಲ್ಲಿ ಪ್ಲೇಟ್‌ಲೆàಟ್ ಕಣಗಳ ಸಂಖ್ಯೆ ಕಡಿಮೆ ಇದ್ದುದ್ದರಿಂದ ವಿಜಯಪುರದ ಪೆಥಾಲಜಿ ಪ್ರಯೋಗಾಲಯದಲ್ಲಿ ಬೋನ್ ಮ್ಯಾರೋ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ ರೋಗಿಗೆ ಅಕ್ಯೂಟ್ ಪ್ರೊಮೈಲೊಸೈಟಿಕ್ ಲೂಕಿಮಿಯಾ ಎಂಬ ರಕ್ತದ ಕ್ಯಾನ್ಸರ್ ಇರೋದು ಬೆಳಕಿಗೆ ಬಂದಿತ್ತು. ಆಗ ವಿಜಯಪುರದಲ್ಲೇ ಅವರಿಗೆ ರಕ್ತ ಹಾಗೂ ಪ್ಲೇಟ್‌ಲೆàಟ್ ವರ್ಗಾವಣೆ ಮಾಡಿ ಧಾರವಾಡಕ್ಕೆ ಕಳುಹಿಸಿಕೊಡಲಾಗಿತ್ತು.
ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ದಾಖಲಾದ ನಂತರ ರೋಗಿಯನ್ನು ಮತ್ತೂಮ್ಮೆ ಬೋನ್ ಮ್ಯಾರೊ ಪರೀಕ್ಷೆ ಮಾಡಲಾಗಿತ್ತು. ಮಾದರಿಗಳನ್ನು ಸೈಟೋಜೆನೆಟಿಕ್ಸ್ ಹಾಗೂ μಶ್ ಪರೀಕ್ಷೆಗಳಿಗಾಗಿ ದೆಹಲಿಗೆ ಕಳುಹಿಸಿಕೊಡಲಾಗಿತ್ತು. “ಅಕ್ಯೂಟ್ ಪ್ರೊಮೈಲೂಸೈಟಿಕ್ ಲ್ಯೂಕಿಮಿಯಾ’ಇರುವುದನ್ನು ಧೃಢಪಡಿಸಿಕೊಳ್ಳಲಾಯಿತು.
ರೋಗಿ ಮತ್ತು ಮನೆಯವರ ಜತೆ ಸಮಾಲೋಚನೆ ನಂತರ ಕೇವಲ ಆರ್ಸನಿಕ್ ಟ್ರೆಆಕ್ಸೆಡ್ ಹಾಗೂ ಆಲ್ ಟ್ರಾನ್ಸ್ ರೆಟಿನೊಯಿಕ್ ಆಸಿಡ್ ಮಾತ್ರೆಗಳನ್ನು ಬಳಸಿ ಚಿಕಿತ್ಸೆ ನೀಡಲಾಯಿತು. 42 ದಿನಗಳ ಪ್ರಥಮ ಹಂತದ ಚಿಕಿತ್ಸೆ ನಂತರ ರಕ್ತದಲ್ಲಿಯ ಹಿಮೋಗ್ಲೋಬಿನ್, ಪ್ಲೇಟ್‌ಲೆಟ್ ಇತ್ಯಾದಿಗಳ ಪ್ರಮಾಣ ಸಹಜ ಸ್ಥಿತಿಗೆ ಮರಳಿದ್ದು, ಮತ್ತೂಮ್ಮೆ ಬೋನ್ ಮ್ಯಾರೋ ಪರೀಕ್ಷೆ ಮಾಡಲಾಗಿ ಕ್ಯಾನ್ಸರ್
ನ ಯಾವುದೇ ಜೀವಕೋಶಗಳು ಕಂಡು ಬಂದಿಲ್ಲ. ಸದ್ಯಕ್ಕೆ ಈ ರೋಗ ಮತ್ತೆ ಬರದಂತೆ ಮಾಡಲು ಮೆಂಟೆನೆನ್ಸ್ ಚಿಕಿತ್ಸೆ
ನಡೆಯುತ್ತಿದೆ. ಧಾರವಾಡ ಶ್ರೀ ಧರ್ಮಸ್ಥಳ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈ ಚಿಕಿತ್ಸೆಯನ್ನು ಪ್ರಪ್ರಥಮವಾಗಿ ನೀಡಲಾಗಿದ್ದು, ರಕ್ತಶಾಸ್ತ್ರ ವಿಭಾಗದ ವೈದ್ಯರಾದ ಡಾ| ಗಿರೀಶ ಬಾಳಿಕಾಯಿ, ಡಾ| ಗಿರೀಶ ಕಾಮತ್ ಅವರು ಈ ಚಿಕಿತ್ಸೆ ನೆರವೇರಿಸಿದ್ದಾರೆ.
ಈಗಾಗಲೇ ಇದನ್ನು ಮುಂಬೈ, ಪುಣೆ, ಬೆಂಗಳೂರಿನಲ್ಲಿ ಪ್ರಯೋಗ ಮಾಡಲಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಇಂತಹ ಪ್ರಯತ್ನಗಳು ಆಗಿರಲಿಲ್ಲ. ಕಿಮೋಥೆರಪಿ ಚಿಕಿತ್ಸೆಯಲ್ಲಿ ಕ್ಯಾನ್ಸರ್‌ನ ಟ್ಯೂಮರ್‌ಸೆಲ್ಸ್‌ಗಳನ್ನು ಕೊಲ್ಲಲಾಗುತ್ತದೆ. ಆದರೆ ನಾವು ಟ್ಯೂಮರ್ ಸೆಲ್‌ಗಳನ್ನು ಸಾಮಾನ್ಯ ಸೆಲ್‌ಗಳಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇವೆ. ಇಲ್ಲಿ ರೋಗಿಯು ಶೇ.85ಕ್ಕಿಂತಲೂ ಹೆಚ್ಚು ಗುಣಮುಖರಾಗುವ ಸಾಧ್ಯತೆ ಇದೆ.
– ಡಾ|ಗಿರೀಶ ಕಾಮತ್, ರಕ್ತಶಾಸ್ತ್ರವಿಭಾಗ, ಎಸ್‌ಡಿಎಂ, ಧಾರವಾಡ