Advertisement

2025ರಲ್ಲಿ 15.7 ಲಕ್ಷ ಕ್ಯಾನ್ಸರ್‌ ಪ್ರಕರಣಗಳು? : ಸಂಶೋಧನಾ ವರದಿ

10:33 AM Aug 20, 2020 | sudhir |

ಹೊಸದಿಲ್ಲಿ: ಭಾರತದಲ್ಲಿ ಪ್ರಸಕ್ತ ವರ್ಷ 13.9 ಲಕ್ಷ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದ್ದು, 2025ರ ವೇಳೆಗೆ ಈ ಸಂಖ್ಯೆ 15.7 ಲಕ್ಷಕ್ಕೇರಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ಮತ್ತು ಬೆಂಗಳೂರು ಮೂಲದ ರಾಷ್ಟ್ರೀಯ ರೋಗಗಳ ಮಾಹಿತಿ ಮತ್ತು ಸಂಶೋಧನ ಕೇಂದ್ರ (ಎನ್‌ಸಿಡಿಐಆರ್‌)ದ ವರದಿ ಹೇಳಿದೆ.

Advertisement

ಅರ್ಬುದ ಕಾಯಿಲೆಗೆ ಅತಿ ಹೆಚ್ಚು ಬಲಿಯಾಗುತ್ತಿರುವುದು ಮಹಿಳೆಯರು ಎಂಬ ಮಾಹಿತಿಯನ್ನೂ ಈ ವರದಿ ಬಿಚ್ಚಿಟ್ಟಿದೆ. 2020ರಲ್ಲಿ 7.12 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಕ್ಯಾನ್ಸರ್‌ ಪತ್ತೆಯಾಗಿದ್ದು, 2025ರ ವೇಳೆಗೆ ಇದು 8.06 ಲಕ್ಷ ದಾಟಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. 2025ರ ವೇಳೆಗೆ ಸ್ತನ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ (2,38,908) ಕಂಡುಬರಲಿದ್ದು, ನಂತರದ ಸ್ಥಾನವನ್ನು ಶ್ವಾಸಕೋಶ(1,11,328) ಮತ್ತು ಬಾಯಿ(90,060) ಕ್ಯಾನ್ಸರ್‌ ಪಡೆಯಲಿದೆ.

ತಂಬಾಕು ಸಂಬಂಧಿ ಕ್ಯಾನ್ಸರ್‌ ಪ್ರಕರಣಗಳು ಈ ವರ್ಷ 3.7 ಲಕ್ಷದಷ್ಟಾಗುವ ಸಾಧ್ಯತೆಯಿದೆ. ಅಂದರೆ, ಇಡೀ ವರ್ಷದ ಒಟ್ಟಾರೆ ಕ್ಯಾನ್ಸರ್‌ ಪ್ರಕರಣಗಳ ಪೈಕಿ ಶೇ.27.1ರಷ್ಟು ಪ್ರಕರಣಗಳು ತಂಬಾಕು ಸಂಬಂಧಿಯಾಗಿರಲಿವೆ ಎಂದೂ ವರದಿ ಹೇಳಿದೆ. 28 ಜನ ಸಂಖ್ಯೆ ಆಧರಿತ ಕ್ಯಾನ್ಸರ್‌ ರಿಜಿಸ್ಟ್ರಿಗಳು ಮತ್ತು 58 ಆಸ್ಪತ್ರೆ ಆಧರಿತ ಕ್ಯಾನ್ಸರ್‌ ರಿಜಿಸ್ಟ್ರಿಗಳಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿ ಈ ವರದಿ ತಯಾರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next