Advertisement

ತ್ಯಾಜ್ಯ ವಿದ್ಯುತ್‌ ಒಪ್ಪಂದ ರದ್ದು

01:42 PM Nov 09, 2020 | Suhan S |

ಬೆಂಗಳೂರು: ಬಹುನಿರೀಕ್ಷಿತ ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಾಗಿ ಫ್ರಾನ್ಸ್‌ ಮೂಲದ “3ವೇಸ್ಟ್‌ ಎ ಫ್ರೆಂಚ್‌ ಕಂಪನಿ’ (3 Wayste a French Company) ಯೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಸರ್ಕಾರ ರದ್ದುಗೊಳಿಸಿದ್ದು, ಇದರೊಂದಿಗೆ ನಗರದ ಹೊರವಲಯದಲ್ಲಿ ಉದ್ದೇಶಿತ ಕಂಪನಿಗೆ ನೀಡಿದ್ದ ಭೂಮಿಯನ್ನು ಹಿಂಪಡೆಯಲು ನಿರ್ಧರಿಸಿದೆ.

Advertisement

ಒಪ್ಪಂದದ ಪ್ರಕಾರ 2020ರ ಜೂನ್‌ ಒಳಗೆ 3 ವೇಸ್ಟ್‌ ಕಂಪನಿಯು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ,ಕಸದಿಂದ ವಿದ್ಯುತ್‌ ಉತ್ಪಾದನೆ ಮಾಡಬೇಕಿತ್ತು. ಆದರೆ, ನಿಗದಿತ ಕಾಲಾವಧಿಯಲ್ಲಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫ‌ಲವಾಗಿದ್ದರಿಂದ ಒಡಂಬಡಿಕೆ ರದ್ದುಗೊಳಿಸಲು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಗೆ ಸೂಚಿಸಿದೆ. ಜತೆಗೆ ಚಿಕ್ಕ ನಾಗಮಂಗಲದಲ್ಲಿ ಘಟಕ ಸ್ಥಾಪನೆಗಾಗಿ ನೀಡಿದ್ದ 15.03 ಎಕರೆ ಜಾಗವನ್ನೂ ತನ್ನ ವಶಕ್ಕೆ ಪಡೆಯಲು ಸೂಚಿಸಲಾಗಿದೆ. ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅದರಂತೆ ಆದೇಶ ಹೊರಡಿಸಲಾಗಿದೆ.

2019ರ ಫೆಬ್ರವರಿಯಲ್ಲಿ ಉದ್ದೇಶಿತ ಕಂಪನಿಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ನಿತ್ಯ 500 ಮೆಟ್ರಿಕ್‌ ಟನ್‌ ಘನ ತ್ಯಾಜ್ಯವನ್ನು ಪಡೆದು, ಅದನ್ನು ಸಂಸ್ಕರಿಸಿ ವಿದ್ಯುತ್‌ ಉತ್ಪಾದನೆ ಮಾಡ ಬೇಕಿತ್ತು. ಈ ಪೈಕಿ 400 ಟನ್‌ ಬಿಬಿಎಂಪಿ ಹಾಗೂ 200 ಟನ್‌ ತ್ಯಾಜ್ಯ ಉತ್ಪಾದನಾ ಸಂಸ್ಥೆ (ಬಲ್ಕ್ ಜನರೇಟರ್)ಗಳಿಂದ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದಕ್ಕಾಗಿ ಚಿಕ್ಕನಾಗಮಂಗಲದ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಲಭ್ಯವಿರುವ 15.03 ಎಕರೆ ಜಾಗವನ್ನು 30 ವರ್ಷಗಳ ಅವಧಿಗೆ ಉಚಿತವಾಗಿ ನೀಡಲಾಗಿತ್ತು. ಇದಕ್ಕೆಕೆಟಿಪಿಪಿ ಕಾಯ್ದೆ 1999 ಸೆಕ್ಷನ್‌4 (ಜಿ)ಯಿಂದ ವಿನಾಯ್ತಿಯನ್ನೂ ನೀಡಲಾಗಿತ್ತು.

ನಿತ್ಯ 9.2 ಮೆ.ವಾ. ಉತ್ಪಾದನೆ: ಒಪ್ಪಂದ ಮಾಡಿಕೊಂಡ ಕಂಪನಿಯು ನಿತ್ಯ 9.2 ಮೆ.ವಾ. ವಿದ್ಯುತ್‌ ಉತ್ಪಾದನೆ ಮಾಡುವುದಾಗಿ ಹೇಳಿತ್ತು. ಅದನ್ನು ಪ್ರತಿ ಯೂನಿಟ್‌ಗೆ 7.08 ರೂ. ದರದಲ್ಲಿ ಬೆಸ್ಕಾಂಗೆ ನೀಡುವ ಸಂಬಂಧ “ವಿದ್ಯುತ್‌ ಖರೀದಿ ಒಪ್ಪಂದ’ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅಲ್ಲದೆ, ಪ್ರತಿ ವರ್ಷ ಈ ದರ ಹೆಚ್ಚಿಸುವುದು ಹಾಗೂ ಬಂಡವಾಳ ಹೂಡಿಕೆದಾರರಿಗೆ ಕನಿಷ್ಠ ಶೇ.50ಕಾರ್ಯ ಸಾಧ್ಯತಾ ಅಂತರ ನಿಧಿ (ವಯಾಬಿಲಿಟಿ ಗ್ಯಾಪ್‌ ಫ‌ಂಡ್‌) ಭರಿಸಿಕೊಡುವ ಭರವಸೆಯನ್ನೂ ನೀಡಲಾಗಿತ್ತು. ಜತೆಗೆ ಬಿಬಿಎಂಪಿ ಪೂರೈಸುವ ಪ್ರತಿ ಟನ್‌ ತ್ಯಾಜ್ಯಕ್ಕೆ 750 ರೂ. ಪ್ರವೇಶ ಶುಲ್ಕ (ಗೇಟ್‌ ಫೀ), ಅನುಮೋದನೆಗಳ ನಂತರ ಏಳು ತಿಂಗಳಲ್ಲಿ ವಿದ್ಯುತ್‌ ಉತ್ಪಾದನೆ ಕಾರ್ಯ ಕೈಗೊಳ್ಳಬೇಕಾಗಿತ್ತು. ಆದರೆ, ಇದುವರೆಗೆ ಅನುಷ್ಠಾನಗೊಳಿಸದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.

ಯಥಾಸ್ಥಿತಿ ವಶಕ್ಕೆ: ಇದಲ್ಲದೆ, ಚಿಕ್ಕನಾಗಮಂಗಲದಲ್ಲಿ ಚಾಲ್ತಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿನ ಪಿಇಬಿ ಶೆಡ್‌ಗಳು ಹಾಗೂ ಯಂತ್ರೋಪಕರಣಗಳನ್ನು 3 ವೇಸ್ಟ್‌ ಫ್ರೆಂಚ್‌ ಕಂಪನಿಗೆ ನೀಡಿದ್ದರೆ, ಯಥಾಸ್ಥಿತಿ ಬಿಬಿಎಂಪಿಯು ವಶಕ್ಕೆ ಪಡೆಯಬೇಕು. ಗುತ್ತಿಗೆ ನೀಡಿರುವ ಜಾಗ/ ಶೆಡ್‌ ಮತ್ತಿತರ ಯಂತ್ರೋಪಕರಣಗಳನ್ನು ಬ್ಯಾಂಕ್‌ಗಳಿಗೆ ಅಡಮಾನ ಇಟ್ಟು ಸಾಲ ಪಡೆದಿಲ್ಲ ಎಂಬುದನ್ನು ಪಾಲಿಕೆ ಖಾತ್ರಿಪಡಿಸಿಕೊಳ್ಳಬೇಕು. ಗುತ್ತಿಗೆ ನೀಡಿರುವ ಜಾಗವನ್ನು ಮರುಗುತ್ತಿಗೆ ನೀಡದಿರುವ ಬಗ್ಗೆಯೂ ದೃಢಪಡಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.

Advertisement

ಮತ್ತೂಂದು ಕಂಪನಿ ಆಸಕ್ತಿ :  ನಗರದಲ್ಲಿ ನಿತ್ಯ ಒಟ್ಟಾರೆ4 ಸಾವಿರ ಮಟ್ರಿಕ್‌ ಟನ್‌ಕಸ ಉತ್ಪಾದನೆ ಆಗುತ್ತದೆ. ಇದರಲ್ಲಿ ಶೇ.40 ಅಂದರೆ,1,800 ಮೆ.ಟ. ತ್ಯಾಜ್ಯವನ್ನು “ವೇಸ್ಟ್‌ ಟು ಎನರ್ಜಿ’ ಯೋಜನೆ ಅಡಿ ಸಂಸ್ಕರಿಸಲು ಉದ್ದೇಶಿಸಿದೆ. ಈ ಸಂಬಂಧ ಮೂರುಕಂಪನಿಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿಕನ್ನಹಳ್ಳಿಯಲ್ಲಿ ಸಾತಾರಿಂಕಂಪನಿಯು ಸಾವಿರ ಮೆ.ಟ., ಚಿಕ್ಕನಾಗಮಂಗಲದಲ್ಲಿ3 ವೇಸ್ಟ್‌600 ಮೆ.ಟ. ಹಾಗೂ ದೊಡ್ಡಬಿದರಕಲ್ಲಿನಲ್ಲಿ ಇಂಡಿಯಂ100 ಮೆ.ಟ. ಸಾಮರ್ಥ್ಯ ಹೊಂದಿವೆ. ಇದರೊಂದಿಗೆ ಮಾವಳ್ಳಿಪುರದಲ್ಲಿ ಫ‌ರ್ಮ್ ಗ್ರೀನ್‌ ಎಂಬ ಮತ್ತೂಂದುಕಂಪನಿ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿದೆ.

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next