Advertisement

ಪ್ರಾದೇಶಿಕ ಆಯುಕ್ತರ ಹುದ್ದೆ ರದ್ದತಿಗೆ ಕಿಡಿ

08:21 PM Jul 14, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಅಧಿಕಾರ ವಿಕೇಂದ್ರೀಕರಣ ಮತ್ತು ಆಡಳಿತಾತ್ಮಕ ಅನುಕೂಲತೆ ಉದ್ದೇಶದಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳು ಸರ್ಕಾರಕ್ಕೆ ಭಾರವಾಗಿವೆಯೇ? ಇವುಗಳನ್ನು ರದ್ದು ಮಾಡುವದು ನ್ಯಾಯವೇ? ಇಂತಹ ಒಂದು ಚರ್ಚೆ ಈಗ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಗಂಭೀರವಾಗಿ ನಡೆದಿದೆ.

ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದು ಮಾಡುವುದು ಸೂಕ್ತ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ ಅವರು ಸರ್ಕಾರಕ್ಕೆ ಶಿಫಾರಸು ಮಾಡಿ ವರದಿ ನೀಡಿದ ನಂತರ ಈ ಶಿಫಾರಸಿನ ಬಗ್ಗೆ ವ್ಯಾಪಕ ಪ್ರಮಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಆಡಳಿತ ಸುಧಾರಣಾ ಆಯೋಗ-2ರ ಶಿಫಾರಸುಗಳಂತೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸುವುದು ವಿಕೇಂದ್ರೀಕರಣದ ಮನೋಭಾವಕ್ಕೆ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ಈ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬಾರದು ಎಂಬ ಒತ್ತಾಯ ಸಹ ಕೇಳಿಬಂದಿದೆ. ಹೋರಾಟದ ಸುಳಿವು ಸಹ ಕಂಡಿದೆ. ಇನ್ನೊಂದು ಕಡೆ ಸ್ವತಃ ಕಂದಾಯ ಸಚಿವ ಆರ್‌.ಅಶೋಕ ಅವರು ಪ್ರಾದೇಶಿಕ ಆಯುಕ್ತರ ಕಚೇರಿಗಳು ಸರ್ಕಾರಕ್ಕೆ ಬಿಳಿಯಾನೆಯಂತಾಗಿವೆ ಎಂದು ಹೇಳಿರುವುದು ಸಾರ್ವಜನಿಕವಾಗಿ ಟೀಕೆಗಳಿಗೆ ಗುರಿಯಾಗಿದೆ.

ಬೆಂಗಳೂರಿನಲ್ಲಿ ಅನೇಕ ಬಿಳಿಯಾನೆಗಳು ಇವೆ. ರಿಗೆ ಈ ಆನೆಗಳು ಕಾಣಲಿಲ್ಲವೇ. ಅದೆಲ್ಲವನ್ನೂ ಬಿಟ್ಟು ಪ್ರಾದೇಶಿಕ ಆಯುಕ್ತರ ಕಚೇರಿಗಳ ಮೇಲೆ ಕಣ್ಣು ಹಾಕಿರುವುದು ಏಕೆ, ಇದರ ಹಿಂದೆ ಉನ್ನತಾಧಿಕಾರಿಗಳ ಲಾಬಿ ಕೆಲಸ ಮಾಡಿದೆಯಾ ಎಂದು ಹೋರಾಟಗಾರರು ಹಾಗೂ ಅಭಿವೃದ್ಧಿ ಪರ ಚಿಂತಕರು ಪ್ರಶ್ನೆಕಂದಾಯ ಸಚಿವ ಮಾಡಿದ್ದಾರೆ.

ರಾಜ್ಯದಲ್ಲಿಯ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವಾಲಯವನ್ನು ರಚಿಸಬೇಕು ಎಂಬ ಶಿಫಾರಸು ಅಧಿಕಾರ ವಿಕೇಂದ್ರಿಕರಣದ ವಿರೋಧಿ. ಇಂತಹ ಕ್ರಮ ಜನರಿಗಾಗಲಿ, ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತಕ್ಕಾಗಲಿ ಅನುಕೂಲಕರವಾದದ್ದಲ್ಲ. ಹಿರಿಯ ಐಎಎಸ್‌ ಅಧಿಕಾರಿಗಳು ಬೆಂಗಳೂರಿನಿಂದ ಹೊರಗೆ ಹೋಗಲು ಇಚ್ಛಿಸುವದಿಲ್ಲ ಎಂಬ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನೇ ರದ್ದುಗೊಳಿಸುವುದು ನ್ಯಾಯವಾದ ಕ್ರಮವಲ್ಲ ಎಂಬುದು ಉತ್ತರ ಕರ್ನಾಟಕದ ಹೋರಾಟಗಾರರ ಅಭಿಪ್ರಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next