ಮುಳಬಾಗಿಲು : ತಾಲೂಕು ಪಂಚಾಯತಿಯಲ್ಲಿ ಖಾಲಿ ಇದ್ದ ಇಒ ಹುದ್ದೆಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಪಂ ಇಒ ಎಸ್.ನಾರಾಯಣ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಬಾಲಪ್ಪ ಆದೇಶಿಸಿದ್ದಾರೆ.
ಜು.03 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಡಳಿತಾತ್ಮಕ ಹಿತ ದೃಷ್ಟಿಯಿಂದ ರಾಜ್ಯದ ವಿವಿಧ ತಾಲೂಕು ಪಂಚಾಯತಿಗಳಲ್ಲಿ ಕಾರ್ಯನಿರ್ವಹಿ ಸುತ್ತಿದ್ದ ಗ್ರೂಪ್-ಎ (ಕಿರಿಯ ಶ್ರೇಣಿ) 32 ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿ, ಸಹಾಯಕ ಯೋಜನಾಧಿಕಾರಿಗಳನ್ನು ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿ ಮತ್ತು 9 ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿ, ಸಹಾಯಕ ಯೋಜನಾಧಿಕಾರಿಗಳನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸರ್ಕಾರದ ಉಪ ಕಾರ್ಯದರ್ಶಿ ಬಾಲಪ್ಪ ಅವರು ಆದೇಶಿಸಿದ್ದರು.
ಭ್ರಷ್ಟಾಚಾರ ಆರೋಪ: ವರ್ಗಾವಣೆಗೊಂಡ ಅಧಿ ಕಾರಿಗಳನ್ನು ಅವರ ಮಾತೃ ಇಲಾಖೆಗೆ ಹಿಂದಿರುಗಿಸಿ ದ್ದಾರೆ. ಹಾಗೇಯೇ ಮುಳಬಾಗಿಲು ತಾ.ಪಂ. ಇಒ ಖಾಲಿ ಹುದ್ದೆಗೆ ಗದಗ ಜಿಲ್ಲೆಯ ಶಿರಹಟ್ಟಿ ತಾ.ಪಂ ಇಒ ಎಸ್ .ನಾರಾಯಣ್ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ, ಒತ್ತಡಕ್ಕೆ ಮಣಿದ ಸರ್ಕಾರ ಜು. 27ರಂದು ಎಸ್ .ನಾರಾಯಣ್‌ರ ವರ್ಗಾವಣೆಯ ಆದೇಶ ರದ್ದುಗೊಳಿಸಿದ್ದಾರೆ. ಇದರಿಂದ ಸದರೀ ತಾ.ಪಂ ಇಒ ಹುದ್ದೆಯಲ್ಲಿ ನಗರದ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಸರ್ವೇಶ್ ಎರಡು ಬಾರಿ ಪ್ರಭಾರ ಇಒ ಆಗಿ ಕಾರ್ಯನಿರ್ವಹಿಸಿ ಮಾತೃ ಇಲಾಖೆ ಹಿಂದುರುಗಿದ್ದರು. ಅಷ್ಟಕ್ಕೆ ಸುಮ್ಮನಾಗದ ಡಾ.ಕೆ. ಸರ್ವೇಶ್ ಮೂರನೇ ಬಾರಿಗೆ ತಾ.ಪಂ. ಪ್ರಭಾರ ಇಒ ಆಗಿ 2021ರ ನವಂಬರ್ 1ರಿಂದ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಯ ನಿರ್ವಹಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ವ್ಯಸಗಿದ್ದಾರೆಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳು ಅವರ ವರ್ಗಾವಣೆಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಅಲ್ಲದೇ ನಿವೃತ್ತ ಯೋಧ ಹಾಗೂ ಗುತ್ತಿಗೆದಾರ ಒಬ್ಬರು ಸರ್ವೇಶ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು: ಕರ್ನಾಟಕ ಸರ್ಕಾರದ ನಡುವಳಿಗಳು ಸಂಖ್ಯೆ : ಪಸಂಮೀ ಇ-71 ಪಸಸೇ 2021 ಬೆಂಗಳೂರು, 06.07.2021, ರಂತೆ ಪಶು ವೈದ್ಯಾಧಿಕಾರಿಗಳನ್ನು ಇತರೇ ಇಲಾಖೆಗಳಿಗೆ ನಿಯೋಜನೆ ಮೇಲೆ ಕಳುಹಿಸುವುದನ್ನು ನಿರ್ಬಂಧಿಸಿ ಆದೇಶಿಸಿದೆ. ನಂತರ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಆಯುಕ್ತಾಲಯ ಅಪಸಂ/ಸಿಬ್ಬಂದಿ-ಎ4/ ವಿವ-14/2021-22 ಬೆಂಗಳೂರು, ಅಕ್ಟೋಬರ್ 2022 ರಂತೆ ಆಯುಕ್ತರು ಪಶು ವೈದ್ಯ ಡಾ.ಕೆ. ಸರ್ವೇಶ್‌ರನ್ನು ತಾ.ಪಂ. ಹೆಚ್ಚುವರಿ ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಆದರೂ ಡಾ.ಸರ್ವೇಶ್ ಮಾತ್ರ ಸರ್ಕಾರದ ಆದೇಶಗಳನ್ನು ಲೆಕ್ಕಿಸದೇ ಹೆಚ್ಚುವರಿ ಪ್ರಭಾರ ಇಒ ಹುದ್ದೆಯಲ್ಲಿಯೇ ಮುಂದುವರೆದಿದ್ದಾರೆ. ವಿವಿಧ ಇಲಾಖೆಗಳಿಂದ ಬಂದು ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಪಂ ಇಒಗಳನ್ನು ವರ್ಗಾವಣೆಯಲ್ಲಿ ಮಾತೃ ಇಲಾಖೆಗೆ ಹಿಂದಿರುಗಿಸಿದ್ದಾರೆ.ಆದರೆ, ಪಶು ವೈದ್ಯಾಧಿಕಾರಿಯೊಬ್ಬರು ಮೂರು ಸಾರಿ ವರ್ಗಾವಣೆ ಮಾಡಿಸಿಕೊಂಡು ತಾ.ಪಂ. ಇಒ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಸರ್ಕಾರವೇ ಹಲವಾರು ಬಾರಿ ಮಾತೃ ಇಲಾಖೆಗೆ ಹಿಂದಿರುಗುವಂತೆ ಆದೇಶಿಸಿದ್ದರೂ ಯಾವುದೇ ಆದೇಶಗಳನ್ನೂ ಲೆಕ್ಕಿಸದೇ ಇದೇ ಹುದ್ದೆಯಲ್ಲಿ ಮುಂದುವರೆದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನಗರದ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಸರ್ವೇಶ್ ರಾಜಕಾರಣಿಗಳ ಬೆಂಬಲದಿಂದ ಮೂರನೇ ಬಾರಿಗೂ ತಾ.ಪಂ. ಹೆಚ್ಚುವರಿ ಪ್ರಭಾರ ವಹಿಸಿಕೊಂಡು ತಾ.ಪಂ.ನಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸರ್ಕಾರ ಭ್ರಷ್ಟಾಚಾರ ತನಿಖೆ ಮಾಡಿ ವರ್ಗಾವಣೆ ಮಾಡಬೇಕು.
– ಕೀಲುಹೊಳಲಿ ಸತೀಶ್, ಸಂಸ್ಥಾಪಕ ಅಧ್ಯಕ್ಷ ಪರಶುರಾಮಸೇನೆ ತಾ.ಪಂ
ಇಒಗಳ ವರ್ಗಾವಣೆ ಕುರಿತಂತೆ ಯಾವುದೇ ರೀತಿಯ ಪ್ರತಿಕ್ರಿಯೇ ನೀಡುವುದಿಲ್ಲ . ಸರ್ಕಾರ ನೀಡಿರುವ ಆದೇಶದಂತೆ ಕೆಲಸ ನಿರ್ವಹಿಸುವುಲಾಗುವುದು.
– ಪದ್ಮಾ ಬಸವಂತಪ್ಪ. ಜಿ.ಪಂ. ಸಿಇಒ ಕೋಲಾರ
ನರೇಗಾ ಯೋಜನೆಯಡಿ ಕಾಮಗಾರಿ 13 ಲಕ್ಷ ರೂ. ಬಿಲ್ ಮಾಡಲಿಲ್ಲ, ಹಣ ಮಂಜೂರು ಮಾಡುವಂತೆ ಜಿ.ಪಂ. ಹಿಂದಿನ ಸಿಇಒಗೆ ಮನವಿ ನೀಡಿದ್ದು, ಅವರು ಹಣ ಬಿಡುಗಡೆ ಮಾಡುವಂತೆ ಆದೇಶ ಮಾಡಿದ್ದರೂ ತಾ.ಪಂ. ಪ್ರಭಾರ ಇಓ ಸರ್ವೇಶ್ ಬಿಲ್ ಕೊಡಲಿಲ್ಲ, ಹಲವು ತಿಂಗಳ ಹಿಂದೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ
. – ಕೆಂಪಾಪುರ ಶ್ರೀನಿವಾಸಗೌಡ, ಗುತ್ತಿಗೆದಾರ.
-ಎಂ.ನಾಗರಾಜಯ್ಯ