Advertisement

ಸೊಲ್ಲಾಪುರ ಸಂಸದರ ಜಾತಿ ಪ್ರಮಾಣ ಪತ್ರ ರದ್ದು

11:34 PM Feb 24, 2020 | Team Udayavani |

ಸೊಲ್ಲಾಪುರ: ಸೊಲ್ಲಾಪುರ ಲೋಕಸಭೆ ಮೀಸಲು ಮತಕ್ಷೇತ್ರದ ಹಾಲಿ ಸಂಸದ ಡಾ| ಜಯ ಸಿದ್ಧೇಶ್ವರ ಸ್ವಾಮಿಗಳ ಜಾತಿ ಪ್ರಮಾಣ ಪತ್ರವನ್ನು (ಬೇಡ ಜಂಗಮ) ಪರಿಶೀಲನಾ ಸಮಿತಿ ಸೋಮವಾರ ರದ್ದುಗೊಳಿಸಿದೆ. ಕಳೆದ ವಾರ ಸಂಸದರ ಜಾತಿ ಪ್ರಮಾಣ ಪತ್ರದ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಲಾಗಿತ್ತು.

Advertisement

ನಂತರ ಜಾತಿ ಪ್ರಮಾಣ ಪತ್ರ ದಕ್ಷತಾ ಸಮಿತಿ ಸದಸ್ಯರು ಕಾನೂನಿನ ಅಭ್ಯಾಸ ಮಾಡಿದ ಬಳಿಕ ಸಂಸದ ಡಾ| ಜಯ ಸಿದ್ಧೇಶ್ವರ ಸ್ವಾಮಿಗಳು ಚುನಾವಣೆಯಲ್ಲಿ ಸಲ್ಲಿಸಿದ ಜಾತಿ ಪ್ರಮಾಣ ಪತ್ರ ನಕಲಿಯಾಗಿದ್ದರಿಂದ ಅದನ್ನು ರದ್ದುಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ಸೊಲ್ಲಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ, ಬಿಜೆಪಿ ಅಭ್ಯರ್ಥಿಯಾಗಿ ಗೌಡಗಾಂವ ಮಠದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಯಾಗಿ ಡಾ| ಪ್ರಕಾಶ ಅಂಬೇಡ್ಕರ್‌ ಸೇರಿ 13 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next