ಮಂಡ್ಯ: ರಾಜ್ಯದ ಉತ್ಛ ನ್ಯಾಯಾಲಯವುಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆಮೀಸಲಾತಿ ಪ್ರಕಟಿಸಿದ್ದ ರಾಜ್ಯ ಸರ್ಕಾರದಅಧಿಸೂಚನೆಯನ್ನು ರದ್ದುಪಡಿಸಿ, ಆದೇಶ ನೀಡಿರುವುದರಿಂದ ಕಳೆದ ಎರಡು ವರ್ಷಗಳಿಂದ ಅಧಿಕಾರವಿಲ್ಲದೆ ಮೌನವಾಗಿದ್ದ ಪುರಪಿತೃಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಜಿಲ್ಲೆಯ 1 ನಗರಸಭೆ, 6 ಪುರಸಭೆ ಹಾಗೂ 1 ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರದ ಅಧಿಸೂಚನೆಯಂತೆ ಚುನಾವಣೆ ನಡೆದು ನೂತನ ಅಧ್ಯಕ್ಷಹಾಗೂ ಉಪಾಧ್ಯಕ್ಷರಾಗಿಆಯ್ಕೆಯಾಗಿದ್ದರು. ಆದರೆ, ತೀರ್ಪಿನಿಂದಕೈಕೈ ಹಿಸುಕಿಕೊಳ್ಳುವಂತಾಗಿದೆ.
ಮೀಸಲಾತಿ ತರಲು ದೊಡ್ಡ ರಾಜಕೀಯವೇ ನಡೆದಿತ್ತು. ಸರ್ಕಾರದ ಮೊದಲನೇ ಅಧಿಸೂಚನೆ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಎರಡು ವರ್ಷಗಳ ಕಾಲ ವಿಚಾರಣೆ ನಡೆದು ಕಳೆದು ತಿಂಗಳು ಹೊಸದಾಗಿ ಅಧಿಸೂಚನೆ ಹೊರಡಿಸಿ, ನ.5ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಜಿಲ್ಲೆಯಲ್ಲೂ ಚುನಾವಣೆ ನಡೆಸಲಾಗಿತ್ತು. ಅದರ ವಿರುದ್ಧ ರಾಜ್ಯಾದ್ಯಂತ ಸುಮಾರು 25ಕ್ಕೂ ರಿಟ್‌ಅರ್ಜಿಗಳು ಸಲ್ಲಿಕೆಯಾದಕಾರಣಹೈಕೋರ್ಟ್ ಎರಡನೇ ಮೀಸಲಾತಿ ಅಧಿಸೂಚನೆಯನ್ನುರದ್ದುಪಡಿಸಿ, ರೊಟೇಷನ್ ಆಧಾರದ ಮೇಲೆ ಹೊಸ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆಸೂಚಿಸಿರುವುದು ಪುರಪಿತೃಗಳಿಗೆ ನುಂಗಲಾರದ ತುತ್ತಾಗಿದೆ.
ಅಧಿಕಾರ ಹಿಡಿಯಲು ಕಸರತ್ತು: ಮಂಡ್ಯ ನಗರಸಭೆ, ಮದ್ದೂರು, ಶ್ರೀರಂಗಪಟ್ಟಣ, ನಾಗ ಮಂಗಲ, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡಪವುರ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯ್ತಿ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿದ್ದವು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಲಾಬಿ ನಡೆಸಿಪ್ರವಾಸ, ಗೌಪ್ಯ ಸ್ಥಳಗಳಿಗೆ ತೆರಳಿದ್ದರು. ಅಲ್ಲದೆ, ಕೆಲವು ಕಡೆ ಸದಸ್ಯರ ಪಕ್ಷಾಂತರ ನಡೆದಿದ್ದರೆ, ಕೆಲವು ಕಡೆ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದರು.
ಅಧಿಕಾರ ಸ್ವೀಕರಿಸಿದ್ದ ಅಧ್ಯಕ್ಷ-ಉಪಾಧ್ಯಕ್ಷರು: ಜಿಲ್ಲೆಯ ಆರುಕಡೆ ಜೆಡಿಎಸ್ ಅಧಿಕಾರ ಹಿಡಿದಿದ್ದರೆ, ಬೆಳ್ಳೂರು ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ವಶವಾಗಿತ್ತು. ಕೆ.ಆರ್.ಪೇಟೆ ಪುರಸಭೆಯ ಫಲಿತಾಂಶ ಇನ್ನೂ ಪ್ರಕಟವಾಗದೆ ಉಳಿದಿತ್ತು. ಈಗಾಗಲೇ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಪುರಪಿತೃಗಳು ಅಧಿಕಾರ ಸ್ವೀಕರಿಸಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಸಾಮಾನ್ಯ ಸಭೆ ಕರೆದು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ತಯಾರಿಗಳು ಜೋರಾಗಿಯೇ ನಡೆದಿದ್ದವು. ಅಲ್ಲದೆ, ಅಧಿಕಾರಿಗಳ ಸಭೆ ನಡೆಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಯತ್ನದಲ್ಲಿದ್ದರು. ಈಗ ಬಂದಿರುವ ತೀರ್ಪಿನಿಂದ ಮತ್ತೆ ನಾಲ್ಕು ವಾರಗಳ ಕಾಲ ಕಾಯಬೇಕಾಗಿದ್ದು, ಸರ್ಕಾರದ ಮುಂದಿನ ಕ್ರಮದ ಮೇಲೆ ನಿರ್ಧಾರ ಕೈಗೊಳ್ಳಲು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಮುಂದಾಗಿದ್ದಾರೆ.
ರಾಜ್ಯ ಉತ್ಛ ನ್ಯಾಯಾಲಯ ಸರ್ಕಾರದ ಮೀಸಲಾತಿ ಅಧಿಸೂಚನೆಯನ್ನು ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ರಾಜ್ಯ ಸರ್ಕಾರಏನು ನಿರ್ದೇಶನ ನೀಡಲಿದೆ ಎಂಬುದನ್ನು ಕಾದು ನೋಡಿ, ನಂತರ ಸರ್ಕಾರದ ನಿರ್ದೇಶನದಂತೆ ಮುಂದಿನಕ್ರಮ ವಹಿಸಲಾಗುವುದು.
–ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ, ಮಂಡ್ಯ