ಪಣಜಿ: 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಯೋಜನೆಗಾಗಿ ಸರ್ಕಾರ ಮತ್ತು ಸಾರಿಗೆ ಸಚಿವ ಮಾವಿನ್ ಗುಡಿನ್ಹೋ ಅವರನ್ನು ಕಾಂಗ್ರೆಸ್ ನಾಯಕ ಕ್ಯಾಪ್ಟನ್
ವಿರಿಯಾಟೊ ಫೆರ್ನಾಂಡಿಸ್ ಟೀಕಿಸಿದ್ದಾರೆ.
ಈ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಮೊದಲು ಹಳೆಯ ಕ್ಯಾಸಿನೊ ಬೋಟ್‍ಗಳನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಅವರು ಸೂಚಿಸಿದ್ದಾರೆ.
ರಾಜ್ಯದಲ್ಲಿ ಬಾಡಿಗೆ ಓಡಿಸುವ ಬಾಡಿಗೆ ಬೈಕ್ ಮತ್ತು ಕಾರುಗಳಲ್ಲಿ ಹೆಚ್ಚಿನವು ಹಳೆಯದಾಗಿರಬಹುದು. ಆದರೆ ಅವರು ಈ ವಾಹನಗಳ ಮೂಲಕವೇ ತಮ್ಮ ಕುಟುಂಬದ ಉದರ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಈ ಸರ್ಕಾರ ಈ ಬಗ್ಗೆ ಇಷ್ಟೊಂದು ಕಠಿಣ ನಿಲುವು ತಳೆಯುವುದು ಸರಿಯಲ್ಲ. ಸರ್ಕಾರಕ್ಕೆ ಮಾಲಿನ್ಯದ ಬಗ್ಗೆ ಕಾಳಜಿ ಇದ್ದರೆ, ಮೊದಲು ಮಾಂಡವಿ ನದಿಯಿಂದ ಕ್ಯಾಸಿನೊ ಹಡಗುಗಳನ್ನು ತೆಗೆದುಹಾಕಬೇಕು ಎಂದು ಫೆರ್ನಾಂಡಿಸ್ ಹೇಳಿದರು.
ಕ್ಯಾಸಿನೊ ನಿರ್ವಾಹಕರು ಹಳೆಯ ಹಡಗುಗಳನ್ನು ಕ್ಯಾಸಿನೊ ಹಡಗುಗಳಾಗಿ ಸಿದ್ಧಪಡಿಸಿದ್ದಾರೆ. ಈ ಕ್ಯಾಸಿನೊಗಳು ಬೃಹತ್ ಶಕ್ತಿಯುತ ಎಂಜಿನ್‍ಗಳನ್ನು ಹೊಂದಿದ್ದು ಅದು ಭಾರಿ ಮಾಲಿನ್ಯವನ್ನು ಉಂಟುಮಾಡುತ್ತದೆ. “ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಫೆಬ್ರವರಿ 24, 2023 ರಂದು 25 ವರ್ಷಕ್ಕಿಂತ ಹಳೆಯದಾದ ಹಡಗುಗಳನ್ನು ಸ್ಕ್ರ್ಯಾಪ್ ಮಾಡಲು ಅಥವಾ ಮರು ಪ್ರಮಾಣೀಕರಿಸಲು ಹೊಸ ಆದೇಶವನ್ನು ಹೊರಡಿಸಿದೆ. ಈ ದೋಣಿಗಳನ್ನು ಮರು ಪ್ರಯಾಣೀಕರಿಸಬಹುದಾದರೆ, ರಸ್ತೆ ವಾಹನಗಳನ್ನು ಸರ್ಕಾರ ಏಕೆ ಮರು ಪ್ರಯಾಣೀಕರಿಸಲು ಸಾಧ್ಯವಿಲ್ಲ,” ಎಂದರು.