Advertisement
ನಗರದ ಜನರಲ್ ಕಾರಿಯಪ್ಪ ರಸ್ತೆ ಕಾಮಗಾರಿ ವಾರದೊಳಗೆ ಮುಗಿಸದಿದ್ದರೆ ಗುತ್ತಿಗೆದಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದ ಅಂತಿಮಗೊಳಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಗೆ ಸೂಚಿಸಿದರು.
Related Articles
Advertisement
ಬಿ.ಎಚ್. ರಸ್ತೆಯ ಕೆಲವು ಕಡೆ ಛೇಂಬರ್ ಅಸ್ತವ್ಯಸ್ತವಾಗಿ ಮಾಡಿರುವ ಬಗ್ಗೆ ಗುತ್ತಿಗೆ ದಾರರನ್ನು ಪ್ರಶ್ನಿಸಿದಾಗ ಪಿ.ಎಂ.ಸಿ ವತಿಯಿಂದ ಸ್ವೀಕೃತವಾದ ನಕ್ಷೆಯಲ್ಲಿರುವಂತೆ ಛೇಂಬರ್ ನಿರ್ಮಿಸಿರುತ್ತೇವೆ ಎಂದು ಉತ್ತರಿಸಿದರು. ಯುಜಿಡಿ ಪೈಪ್ ಲೈನ್ ಒಡೆದು ರಸ್ತೆಯಲ್ಲಿ ಕೊಳಚೆ ನೀರು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ mಸಾಂಕ್ರಾಮಿಕ ರೋಗಗಳು ಹರಡುತ್ತವೆ. ಕೂಡಲೇ ಕ್ರಮವಹಿಸಬೇಕೆಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಪೈಪ್‌ಲೈನ್ ಅಳವಡಿಸಿಲ್ಲ: ಅಶೋಕ ರಸ್ತೆ, ಭಗವಾನ್ ಮಹಾವೀರ ರಸ್ತೆಯಲ್ಲಿ ಛೇಂಬರ್ ಕಾರ್ಯ ಪೂರ್ಣಗೊಂಡಿದ್ದರೂ ಕವರ್ ಸ್ಲಾಬ್ಸ್ಸ ರಿಯಾಗಿ ಮುಚ್ಚಿಲ್ಲ. ರಸ್ತೆಯ ಒಂದು ಕಡೆ ಮಾತ್ರ ಪ್ರಾರಂಭಿಸಿ ಮತ್ತೂಂದು ಕಡೆ ಈವರೆವಿಗೂ ಕಾಮಗಾರಿ ಪ್ರಾರಂಭಿಸಿಲ್ಲ ಹಾಗೂ ಪೈಪ್‌ಲೈನ್ ಅಳವಡಿಸಿಲ್ಲ. ಎರಡೂ ರಸ್ತೆಗಳು ಜನಸಂದಣಿಯಿಂದ ಕೂಡಿರುವುದರಿಂದ ಮಣ್ಣು ಸಮತಟ್ಟು ಗೊಳಿಸಲು ಸೂಚಿಸಿದಾಗ, ಗುತ್ತಿಗೆದಾರರು ರೋಲರ್ ರಿಪೇರಿಯಲ್ಲಿದ್ದು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೆಟ್ಟು ನಿಂತಿದೆ ಎಂದರು.
ಇದರಿಂದ ಸಿಟ್ಟಾದ ಶಾಲಿನಿ ರಜನೀಶ್, ಕಾರಣ ನೀಡದೆ ಗುತ್ತಿಗೆದಾರರು ಕಾಮಗಾರಿ ಪೂರ್ಣ ಗೊಳಿಸಬೇಕು ಎಚ್ಚರಿಕೆ ನೀಡಿದರು. ವಾಹನ ಸವಾರರಿಗೆ ಸಂಚರಿಸಲು ತೊಂದರೆ ಯಾಗುತ್ತಿರುವುದರಿಂದ ಈ ರಸ್ತೆಗಳಲ್ಲಿರುವ ಬೀದಿಬದಿ ವ್ಯಾಪಾರಿಗಳ ಮನವೊಲಿಸಿ ಇನ್ನೆರಡು ದಿನಗಳಲ್ಲಿ ಬೇರೆಡೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಿಕೆ ಪರಿಸರ ಅಭಿಯಂತರರಿಗೆ ಸೂಚನೆ ನೀಡಿದರು. ಡಾ. ರಾಧಾಕೃಷ್ಣ ರಸ್ತೆಯ ಒಂದು ಭಾಗದಲ್ಲಿಯಾದರೂ ಛೇಂಬರ್‌ಗಳು, ಪೈಪ್‌ಲೈನ್ ಅಳವಡಿಕೆ, ಡ್ರೆçನ್ ನಿರ್ಮಾಣ ಹಾಗೂ ಪಾದಚಾರಿ ಮಾರ್ಗ ಏಕಕಾಲದಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಗುತ್ತಿಗೆ ರದ್ದುಪಡಿಸಲಾಗುವುದೆಂದು ಎಚ್ಚರಿಕೆ ನೀಡಿದರು