ಉಡುಪಿ: ರಾಜ್ಯ ಸರಕಾರಿ ನೌಕರರಿಗೆ 2006ರಿಂದ ಪ್ರಾರಂಭಗೊಳಿ ಸಿರುವ ಅವೈಜ್ಞಾನಿಕ, ಅಭದ್ರತೆಯಿಂದ ಕೂಡಿದ ನೂತನ ಪಿಂಚಣಿ ಯೋಜನೆ ಯನ್ನು ರದ್ದುಗೊಳಿಸಿ ಹಳೆಯದನ್ನೇ ಜಾರಿಗೊಳಿಸಬೇಕು ಎಂದು ಮಾಜಿ ಸಂಸದ, ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು, ಸಂಸದರು ಕೂಡ ಸರಕಾರಿ ನೌಕರರೇ ಆಗಿರುತ್ತಾರೆ. ಅವರಿ ಗೇಕಿಲ್ಲ ನೂತನ ಪಿಂಚಣಿ ಯೋಜನೆ ಎಂದು ಪ್ರಶ್ನಿಸಿದರಲ್ಲದೆ, 1.80 ಲಕ್ಷಕ್ಕೂ
ಅಧಿಕ ಸರಕಾರಿ ನೌಕರಿಗೆ ಸಮಸ್ಯೆಯಾ ಗಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ಕಿತ್ತು ಹಾಕಬೇಕಿದೆ ಎಂದರು.
ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತನಗೆ ಮತ ನೀಡುವಂತೆ ಮನವಿ ಮಾಡಿದರು. ಅಭದ್ರತೆಯಲ್ಲಿ ಅತಿಥಿ ಉಪನ್ಯಾಸಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ 13,500 ಮಂದಿ ಅತಿಥಿ ಉಪನ್ಯಾಸಕರಿದ್ದು, ಅವರಿಗೆ ಕಡಿಮೆ ಸಂಬಳ, ಅದೂ ಕೂಡ ಮೂರ್‍ನಾಲ್ಕು ತಿಂಗಳ ಬಳಿಕ ಪಾವತಿಯಾಗುತ್ತದೆ, ರಜೆ ಇಲ್ಲ. ಸೇವಾ ಭದ್ರತೆ ಇಲ್ಲ. ವೃತ್ತಿಗೆ ತೆರಿಗೆ ಕಡಿತವಾಗುತ್ತದೆ. ಈ ನಡುವೆ ಅವರನ್ನು ಪೂರ್ಣಕಾಲಿಕ ಅಧ್ಯಾಪಕರನ್ನಾಗಿ ಪರಿಗಣಿಸದೆ ನಿಯಮಬಾಹಿರವಾಗಿ ಸಹಾಯಕ ಪ್ರಾಧ್ಯಾಪಕರನ್ನು ರಾಜ್ಯ ಸರಕಾರದ ಶಿಕ್ಷಣ ಇಲಾಖೆ ನೇಮಿಸಿದೆ. ಈ ನೇಮಕಾತಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲೂ ಅವಕಾಶ ನೀಡಿಲ್ಲ ಎಂದವರು ತಿಳಿಸಿದರು.
ಕಾಂಗ್ರೆಸ್ ಭಯೋತ್ಪಾದನೆ
ಅಧಿಕಾರಿಗಳನ್ನು ಬೆದರಿಸಿ ಅಕ್ರಮ ಕೆಲಸಗಳನ್ನು ಮಾಡಿಸಿಕೊಳ್ಳುವುದೇ ಕಾಂಗ್ರೆಸಿಗರ ಚಾಳಿಯಾಗಿದೆ. ಗೂಂಡಾ ರಾಜ್ಯ ನಿರ್ಮಾಣವಾಗಿದೆ. ಅವರ ವರ್ತನೆ ಕಂಡರೂ ಪೊಲೀಸರು ಮೌನಿ ಗಳಾಗಿದ್ದಾರೆ. ಕಾಂಗ್ರೆಸ್ಸಿಗರಿಂದ ಇನ್ನೊಂದು ವಿಧಾನದ ಭಯೋತ್ಪಾದನೆ ಸೃಷ್ಟಿಯಾಗಿದೆ. ಅವರಿಗೆ ಜನತೆ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ವಕ್ತಾರ ಕಟಪಾಡಿ ಶಂಕರ ಪೂಜಾರಿ, ಮಲಯಾಳಿ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ಸತೀಶ್, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.