Advertisement

ವಿಡಿಯೋ ಕಾನ್ಫರೆನ್ಸ್‌ ಸಭೆ ರದ್ದುಗೊಳಿಸಿ

06:56 PM Sep 19, 2020 | Suhan S |

ತುಮಕೂರು: ಉಪವಿಭಾಗ ಮಟ್ಟದ ಪ.ಜಾತಿ, ಪರಿಶಿಷ್ಟವರ್ಗದ ದಲಿತ ಹಿತರಕ್ಷಣಾ ಸಮಿತಿ ಸಭೆಯನ್ನು ವಿಡಿ ಯೋ ಕಾನ್ಫರೆನ್ಸ್‌ ಮೂಲಕ ಕರೆದಿರುವುದನ್ನು ರದ್ದುಪಡಿಸಿ ಪೊಲೀಸ್‌ ಚಿಲುಮೆ ಅಥವಾ ಬಾಲ ಭವನದಲ್ಲಿ ಕರೆಯುವಂತೆ ನಿರ್ದೇಶನ ನೀಡಬೇಕು ಎಂದುಆಗ್ರಹಿಸಿ ಜಿಲ್ಲಾ ದಲಿತ ಸಂಘಟನೆಗಳ ಮುಖಂಡರ ಒಕ್ಕೂಟ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲು ನಿರ್ಧರಿಸಿರುವ ಸಭೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು. ತುಮಕೂರು ಉಪವಿಭಾಗ ಮಟ್ಟದ ಎಸ್ಸಿ, ಎಸ್ಟಿಹಿತರಕ್ಷಣಾ ಸಮಿತಿ ಸಭೆಯನ್ನು ಸೆ.21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ 11 ಗಂಟೆಗೆ ವಿಡಿಯೋಕಾನ್ಫರೆನ್ಸ್‌ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿದೆ. ಆದರೆ ಸಾಕಷ್ಟು ದಲಿತ ಮುಖಂಡರಲ್ಲಿ ಸ್ಕ್ರೀನ್‌ಟಚ್‌ಮೊಬೈಲ್‌ ಇರುವುದಿಲ್ಲ. ಕೀ ಪ್ಯಾಯ್ಡ ಮೊಬೈಲ್‌ಗ‌ಳನ್ನು ಬಳಸುತ್ತಿದ್ದಾರೆ. ಜತೆಗೆ ಸಾಕಷ್ಟು ಮುಖಂಡರಿಗೆ ಮೊಬೈಲ್‌ನಲ್ಲಿ ಮಾತನಾಡುವುದಕ್ಕೂ ಬರುವುದಿಲ್ಲ. ಎಸ್ಸಿ, ಎಸ್ಟಿ ಜನಾಂಗದ ತುರ್ತು ಸಮಸ್ಯೆಗಳು ಸಾಕಷ್ಟಿವೆ. ಆದ್ದರಿಂದಈಹಿಂದೆ ಯಾವ ರೀತಿ ಸಭೆ ಕರೆಯುತ್ತಿದ್ದರೋ ಅದೇ ರೀತಿ ಸಭೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ರಂಗನಾಥ್‌, ಕೋವಿಡ್‌ ಇರುವುದರಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸುವುದಾಗಿ ಉಪವಿಭಾಗಾಧಿಕಾರಿಗಳು ಹೇಳುತ್ತಾರೆ. ಆದರೆ ಮುಖಾಮುಖೀ ಸಭೆ ನಡೆಸಿದರೂ ನಮ್ಮ ಸಮಸ್ಯೆಗಳು ಬಗೆಹರಿಯುವುದಿಲ್ಲ. ಇನ್ನು ವಿಡಿಯೋ ಕಾನ್ಫೆರೆನ್ಸ್‌ಮೂಲಕ ನಡೆಸುವ ಸಭೆಯಲ್ಲಿ ಎಷ್ಟರ ಮಟ್ಟಿಗೆ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.

ದಸಂಸಜಿಲ್ಲಾಧ್ಯಕ್ಷಪಿ.ಎನ್‌.ರಾಮಯ್ಯಮಾತನಾಡಿ, ತುಮಕೂರು ವಿಭಾಗ ಮಟ್ಟದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಸಭೆಯನ್ನು ಸೆ. 21 ಕರೆದಿದ್ದಾರೆ. ವಿಡಿಯೋಕಾನ್ಫರೆನ್ಸ್‌ ಮೂಲಕಕರೆದಿರುವ ಸಭೆಯಲ್ಲಿ ರದ್ದುಪಡಿಸಿ ಕೋವಿಡ್‌-19 ನಿಯಮಾವಳಿ ಪ್ರಕಾರವೇ ಅಂತರ ಕಾಯ್ದುಕೊಂಡು ಸಮುದಾಯ ಭವನ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಸಭೆ ನಡೆಸಬೇಕು. ಈ ಸಂಬಂಧ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಪೂಜ ಹನುಮಯ್ಯ, ರಾಜೇಶ್‌, ಜೆಸಿಬಿ ವೆಂಕಟೇಶ್‌, ಗಂಗಯ್ಯ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next