ರಾಮನಗರ: ಗ್ರಾಹಕರ ಸಹಕಾರದಿಂದ ಕೆನರಾ ಬ್ಯಾಂಕ್ ಉನ್ನತಿ ಸಾಧಿಸಿದೆ ಎಂದು ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಜಿ.ವಿ.ರಮಾಕಾಂತರಾವ್ ಅಭಿಪ್ರಾಯಪಟ್ಟರು. ತಾಲೂಕಿನ ಬಿಡದಿಯ ಕೆನರಾ ಬ್ಯಾಂಕ್‌ನಲ್ಲಿ ಅಮ್ಮೆಂಬಾಳ ಸುಬ್ಬರಾವ್ ಪೈ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 116ನೇ ಸಂಸ್ಥಾಪನಾ ದಿನಾಚರಣೆಯಲ್ಲಿ (ಫೌಂಡರ್ಸ್ ಡೇ) ಅವರು ಮಾತನಾಡಿದರು.
ಸಾಮಾಜಿಕ ಕಾಳಜಿ: ಗ್ರಾಹಕರ ವಿಶ್ವಾಸ ಗಳಿಸಲು ಬ್ಯಾಂಕ್ ನಿರಂತರ ಉತ್ತಮ ಸೇವೆ ಒದಗಿಸುತ್ತಿದೆ. ಈ ವಿಚಾರದಲ್ಲಿ ಬ್ಯಾಂಕ್‌ನ ಪ್ರಾಮಾಣಿಕತೆಗೆ ಗ್ರಾಹಕರು ಮನ್ನಣೆ ಕೊಟ್ಟು ಬ್ಯಾಂಕ್‌ನ ಉನ್ನತಿಗೆ ಕಾರಣರಾಗಿದ್ದಾರೆ ಎಂದರು. ತಮ್ಮ ಬ್ಯಾಂಕು ಸಾಮಾಜಿಕ ಸೇವೆ ಯಲ್ಲಿಯೂ ಮುಂದಿದೆ ಎಂದರು.
ದೇಶದಲ್ಲೇ 3ನೇ ಸ್ಥಾನ: ಬ್ಯಾಂಕಿನ ಮುಖ್ಯ ಪ್ರಬಂಧಕ ಬಿ.ವಿ.ಕೇಶವಮೂರ್ತಿ ಮಾತ ನಾಡಿ, ಸಂಸ್ಥಾಪಕ ಎ.ಸುಬ್ಬ ರಾವ್ ಪೈರವರು ಉತ್ತ ಮ ಉದ್ದೇಶಗಳೊಂದಿಗೆ ಸ್ಥಾಪಿಸಿ, ಅಭಿ ವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅವರ ಶ್ರಮ ದಿಂದಾಗಿ ಇಂದು ಕೆನರಾ ಬ್ಯಾಂಕ್ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಈ ಸಾಧನೆಗೆ ಗ್ರಾಹಕರ ಸಹಕಾರ ಮುಖ್ಯವಾಗಿದೆ ಎಂದರು.
ನಿರುದ್ಯೋಗಿಗಳಿಗೆ ತರಬೇತಿ: ಕಾರ್ಯಕ್ರಮ ದಲ್ಲಿ ಹಾಜರಿದ್ದ ಸಾಮಾಜಿಕ ಕಾರ್ಯಕರ್ತ ಬಿಡದಿಯ ಮುತ್ತಣ್ಣ ಮಾತನಾಡಿ, ಕೆನರಾ ಬ್ಯಾಂಕ್‌ನ ಸಾಮಾಜಿಕ ಸೇವೆಯ ಬಗ್ಗೆ ಮೆಚ್ಚುಗೆ ನುಡಿಗಳನ್ನಾಡಿದರು. ವಿದ್ಯಾವಂತ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಸ್ಥಾಪಿಸಿಕೊಳ್ಳಲು ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಕೊಡುತ್ತಿದೆ. ಊಟ, ವಸತಿ ಸಹಿತ ಉಚಿತ ತರಬೇತಿ ನೀಡು ತ್ತಿರುವುದು ಕೆನರಾ ಬ್ಯಾಂಕ್‌ನ ಸಾಮಾಜಿಕ ಬದ್ಧತೆ ಪ್ರದರ್ಶಿಸಿದೆ.
ಬಿಡದಿ ಹೋಬಳಿಯಲ್ಲಿ 2 ಹಾಗೂ ಹಾರೋಹಳ್ಳಿಯಲ್ಲಿ 1 ತರಬೇತಿ ಸಂಸ್ಥೆಯನ್ನು ಕೆನರಾ ಬ್ಯಾಂಕ್ ಸ್ಥಾಪಿಸಿದೆ. ಸ್ಥಳೀಯರು ಇದರ ಉಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಬಿಡದಿ ಇಟ್ಟಮಡು ಪ್ರಾಥಮಿಕ ಶಾಲೆ ಹಾಗೂ ತೊರೆದೊಡ್ಡಿಯ ಪ್ರೌಢಶಾಲೆಯ ತಲಾ ಮೂವರು ಎಸ್ಸಿ, ಎಸ್ಟಿ ವರ್ಗದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ವಿತರಿಸಿ ದರು.
ಬೀದಿಬದಿ ವ್ಯಾಪಾರಿಗಳ ಅರ್ಜಿಯನ್ನು ಪುರಸ್ಕರಿಸಿ ತಲಾ 10 ಸಾವಿರ ರೂ.ಸಾಲದ ಮೊತ್ತ ವನ್ನು ವಿತರಿಸಲಾಯಿತು. ಬೀದಿಬದಿ ವ್ಯಾಪಾರಿಗಳು ಸಹ ಆನ್‌ಲೈನ್ ಪಾವತಿ ಬಳಕೆಗೆ ಅನುಕೂಲವಾಗುವಂತೆ ಬ್ಯಾಂಕ್‌ನ ಕ್ಯೂಆರ್ ಕೋಡ್ ವ್ಯವಸ್ಥೆ ವಿತರಿಸಲಾಯಿತು. ಸಮಾಜ ಸೇವಕ ಇಟ್ಟಮಡು ಸೋಮಣ್ಣ , ಸ್ಥಳೀಯ ಶಾಖೆಯ ವ್ಯವಸ್ಥಾಪಕರಾದ ನೇಖಾ, ಪ್ರಮುಖರಾದ ಸೌಮ್ಯ ಪ್ರೀತಿ, ರಾಜೇಶ್, ದಿಲೀಪ್ ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗ, ಗ್ರಾಹಕರು ಹಾಜರಿದ್ದರು.