Advertisement

ಕಾಲುವೆ, ಚರಂಡಿ ಸ್ವತ್ಛತೆ ಪರಿಶೀಲಿಸಿದ ಡಿಸಿ

11:29 AM Jun 12, 2018 | Team Udayavani |

ಬೀದರ: ನಗರದ ವಿವಿಧ ಬಡಾವಣೆಗಳಲ್ಲಿನ ಕಾಲುವೆ, ಚರಂಡಿಗಳ ಸ್ವತ್ಛತೆಯನ್ನು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌
ಅವರು ಸೋಮವಾರ ಖುದ್ದು ವೀಕ್ಷಿಸಿ ಪರಿಶೀಲಿಸಿದರು.

Advertisement

ಜನವಾಡ ರಸ್ತೆ ಬದಿಯ ಲೇಬರ್‌ ಕಾಲೋನಿ, ಶಾಹಗಂಜ್‌, ಡಿಸಿಸಿ ಬ್ಯಾಂಕ್‌ ಬಳಿಯ ಪ್ರದೇಶದಲ್ಲಿ ಸಂಚರಿಸಿ, ಅಲ್ಲಿನ
ರಾಜ ಕಾಲುವೆ ವೀಕ್ಷಿಸಿದ ಅವರು, ಕಾಲುವೆಗಳಲ್ಲಿ ತುಂಬಿದ್ದ ಕೊಳಚೆ ನೋಡಿ ನಗರಸಭೆ ಅಧಿಕಾರಿಗಳ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕೊಳಕು ತುಂಬಿಕೊಂಡ ಚರಂಡಿ ಹಾಗೂ ಕಾಲುವೆಗಳನ್ನು ಸ್ವತ್ಛಗೊಳಿಸುವಂತೆ
ಸೂಚಿಸಿದರು.

ಮಳೆಗಾಲ ಆರಂಭವಾಗಿದೆ. ಹೀಗಾಗಿ ಕಾಲುವೆಗಳಲ್ಲಿ ನೀರು ಸರಳವಾಗಿ ಹರಿದು ಹೋಗುವಂತಾಗಬೇಕು. ಬಹಳಷ್ಟು
ಕಡೆಗಳಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್‌ ಹಾಗೂ ಇತರೆ ತ್ಯಾಜ್ಯ ತೆಗೆಯಲು ವ್ಯವಸ್ಥೆ ಮಾಡಬೇಕು. ಮಳೆ ನೀರು ಬಂದಾಗ ಕೆಲವೆಡೆ ಚರಂಡಿಗಳು ನೀರಿನಿಂದ ಮುಚ್ಚಿ ಹೋಗುತ್ತವೆ. ಕಾರಣ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.

ಇದೇ ವೇಳೆ ಸಾರ್ವಜನಿಕರು ಕೂಡ ಚರಂಡಿಗಳ ಕುರಿತು ದೂರು ಹೇಳಿದರು. ಸಾರ್ವಜನಿಕರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕಾಲುವೆ, ಚರಂಡಿಗಳ ಸ್ವತ್ಛತೆ ಕೇವಲ ನಗರಸಭೆಯ ಕೆಲಸ ಮಾತ್ರ ಎಂದು ಭಾವಿಸಬೇಡಿ. ಇದರಲ್ಲಿ ಸಾರ್ವಜನಿಕರ ಪಾತ್ರವೂ ಬಹಳ ಮುಖ್ಯವಾಗಿದೆ. ಮನೆಯ ಕಸವನ್ನು ಚರಂಡಿಗೆ ಹಾಕದೇ ನಗರಸಭೆ ಗುರುತಿಸಿದ ಸ್ಥಳದಲ್ಲಿ ಹಾಕಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕುವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ನಗರಸಭೆ ಪೌರಾಯುಕ್ತ ಮನೋಹರ ಎಸ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next