Advertisement
ಹೊಸದಿಲ್ಲಿಯಲ್ಲಿ ಸೆ.9, 10ರಂದು ಜಿ20 ರಾಷ್ಟ್ರಗಳ ಸಮ್ಮೇಳನ ಮುಕ್ತಾಯವಾಗಿ ಎರಡು ದಿನಗಳ ಬಳಿಕ ಅವರು ಬಲವಂತವಾಗಿ ಇರಬೇಕಾದ ಅನಿವಾರ್ಯ ತೆ ತಾಂತ್ರಿಕ ಕಾರಣಗಳಿಂದ ಸೃಷ್ಟಿಯಾಗಿತ್ತು. ಹೊಸ ದಿಲ್ಲಿಯಿಂದ ಒಟ್ಟಾವಾಕ್ಕೆ 17 ಗಂಟೆಗಳ ಕಾಲ ಪ್ರಯಾಣ ಮಾಡಿದ ಬಳಿಕ ಅವರು ಅಲ್ಲಿಗೆ ತಲುಪಿ ದ್ದಾರೆ. ಹೊಸದಿಲ್ಲಿಯಲ್ಲಿ ಅವರು ಪಟ್ಟ ಪಡಿಪಾಟಲು ಈಗ ಅಲ್ಲಿನ ವಿಪಕ್ಷಗಳಿಗೆ ಆಹಾರವಾಗಿ ಪರಿಣಮಿಸಿದೆ.
Related Articles
Advertisement
ಶೃಂಗದ ಅವಧಿಯಲ್ಲಿ ಪ್ರಧಾನಿ ಮೋದಿಯವರನ್ನು ಟ್ರಾಡೊ ಭೇಟಿಯಾಗಿದ್ದು ಕೇವಲ 15 ನಿಮಿಷ ಮಾತ್ರ. ಆ ಅವಧಿಯಲ್ಲಿ ಪ್ರಧಾನಿಯ ವರು ಏನು ಹೇಳಬೇಕೋ ಅದನ್ನು ಖಡಕ್ ಆಗಿ ಹೇಳಿದ್ದರು.
ಆ ದೇಶದ ಪ್ರಮುಖ ಸುದ್ದಿವಾಹಿನಿ “ಸಿ ಟಿವಿ’ ವರದಿ ಮಾಡಿದ್ದ ಪ್ರಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತ ಮಂಟ ಪಂನಲ್ಲಿ ಜಿ20 ರಾಷ್ಟ್ರಗಳ ಮುಖ್ಯಸ್ಥರಿಗಾಗಿ ಆಯೋಜಿಸಲಾಗಿದ್ದ ಔತಣ ಕೂಟದಲ್ಲಿ ಕೆನಡಾ ಪ್ರಧಾನಿ ಭಾಗವಹಿಸಲಿಲ್ಲ. ಇಷ್ಟು ಮಾತ್ರವಲ್ಲ ಹೊಸದಿಲ್ಲಿಯಲ್ಲಿ ಕೆನಡಾ ಪ್ರಧಾನಿ ಇದ್ದರೂ ಒಕ್ಕೂ ಟದ ರಾಷ್ಟ್ರಗಳಿಗಾಗಿ ಪ್ರಧಾನಿ ಮೋದಿಯವರು ಆರಂಭಿಸಲು ಉದ್ದೇಶಿಸಿರುವ ಜೈವಿಕ ಇಂಧನ ಬಳಕೆ ಮಾಡುವ ರಾಷ್ಟ್ರಗಳ ಗುಂಪಿನ ಉದ್ಘಾಟನೆಯಿಂದಲೂ ದೂರ ಉಳಿದಿದ್ದರು.
ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿ, ಅನಂತರ ರದ್ದು ಮಾಡಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೊಸದಿಲ್ಲಿ ಹೊರವಲಯದಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ರೈತರ ದೀರ್ಘಾವಧಿಯ ಪ್ರತಿಭಟನೆಗೆ ಸಕಲ ನೆರವು ಪೂರೈಕೆಯಾದದ್ದು ಕೆನಡಾ ದಲ್ಲಿ ಸಕ್ರಿಯವಾಗಿ ಇರುವ ನಿಷೇಧಿತ ಸಿಕ್ಖ್ ಫಾರ್ ಜಸ್ಟಿಸ್ ಎಂಬ ಸಂಘಟನೆಯಿಂದ. ಈ ಬಗ್ಗೆ 2021 ಫೆ.12ರಂದು ಜಸ್ಟಿನ್ ಟ್ರಾಡೊ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದ ಸಂದರ್ಭದಲ್ಲಿಯೂ ಕೂಡ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. “ಸರಿ ನೋಡೋಣ’ ಎಂದು ಹೇಳಿದ್ದ ಕೆನಡಾ ಪ್ರಧಾನಿ ಅನಂತರ ಮರೆತೇ ಬಿಟ್ಟರು. ಅದಕ್ಕಿಂತ ಮೊದಲು 2020ರ ಡಿಸೆಂಬರ್‌ನಲ್ಲಿಯೂ ಕೂಡ ಹೊಸದಿಲ್ಲಿಯಲ್ಲಿ ಇರುವ ಕೆನಡಾ ಹೈಕಮಿಷನರ್ ಅವ ರನ್ನು ಕರೆಯಿಸಿಕೊಂಡಿದ್ದ ವಿದೇ ಶಾಂಗ ವ್ಯವಹಾರಗಳ ಸಚಿವಾ ಲಯ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಆ ಸಂದರ್ಭದಲ್ಲಿ ಕೂಡ ಕೆನಡಾ ಪ್ರಧಾನಿ ಭಾರತ ಸರಕಾ ರದ ಸೂಕ್ತ ದಾರಿಗಳ ಮೂಲಕ ವ್ಯಕ್ತಪಡಿಸಲಾಗಿದ್ದ ಕಳವಳಗಳ ಬಗ್ಗೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲ ರಾಗಿದ್ದರು. ಅದರ ಪ್ರಭಾವವೇ ಹೊಸದಿಲ್ಲಿಯ ಕರಾಳ ಪ್ರವಾಸದ ಅನುಭವ.
ಕೆನಡಾದ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಜಾಡಿ ಥಾಮಸ್ ಪ್ರಧಾನಿ ಜಸ್ಟಿನ್ ಟ್ರಾಡೊಗೆ ನೀಡಿದ ವರದಿಯ ಪ್ರಕಾರ ದೇಶದ ಆಂತರಿಕ ವ್ಯವಹಾರಗಳಲ್ಲಿ ಚೀನದ ಹಸ್ತಕ್ಷೇಪವೇ ಹೆಚ್ಚು. ಅದರ ಬಳಿಕ ಭಾರತ ಸರಕಾರದ ಹಸ್ತಕ್ಷೇಪ ಎಂದು ಆರೋಪ ಮಾಡಿದ್ದಾರೆ. ಚೀನ ಮತ್ತು ಕೆನಡಾ ನಡು ವಿನ ರಾಜತಾಂತ್ರಿಕ ಸಂಬಂಧ ಮೇಲ್ನೋ ಟಕ್ಕೆ ಮಾತ್ರ ಚೆನ್ನಾಗಿದೆ ಎನ್ನುವುದು ಸ್ಪಷ್ಟ.2019 ಮತ್ತು 2021ರಲ್ಲಿ ನಡೆದಿದ್ದ ಆ ದೇಶ ಸಂಸತ್ ಚುನಾವಣೆಯಲ್ಲಿ ಚೀನದ ವಿದೇಶಾಂಗ ಇಲಾಖೆ ಭಾರೀ ಪ್ರಭಾವ ಬೀರಿದೆ ಎಂಬ ವಿಚಾರ ಆ ದೇಶದ ಮಾಧ್ಯಮಗಳೇ ಹಲವು ಸಂದರ್ಭಗಳಲ್ಲಿ ವರದಿ ಪ್ರಕಟಿಸಿದ್ದವು. ಆದರೆ ಚೀನ ಮತ್ತು ಭಾರತಕ್ಕೆ ವ್ಯತ್ಯಾಸವಿದೆ. ಚೀನ ಸರಕಾರ ಹಸ್ತಕ್ಷೇಪ ಮಾಡುವ ಮೂಲಕ ಅಲ್ಲಿನ ವ್ಯವಸ್ಥೆಯನ್ನು ಪರೋಕ್ಷವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎನ್ನುವುದು ಬಹಿ ರಂಗ ರಹಸ್ಯ. ಆದರೆ ಭಾರತಕ್ಕೆ ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಏಕೆ ಮಾಡಬೇಕು ಎನ್ನುವುದೇ ಹಾಸ್ಯಾಸ್ಪದ ವಿಚಾರ. ಅಂದ ಹಾಗೆ ಎಲ್ಲವೂ ಸುಸೂತ್ರವಾಗಿ ನಡೆದರೆ 2025ರ ವರೆಗೆ ಹಾಲಿ ಪ್ರಧಾನಿ ಜಸ್ಟಿನ್ ಟ್ರಾಡೊ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಹೀಗೆನ್ನಲು ಕಾರಣವಿದೆ. ಆ ವರ್ಷ ಅಲ್ಲಿನ ಸಂಸತ್‌ನ ಕೆಳಮನೆ ಹೌಸ್ ಆಫ್ ಕಾಮನ್ಸ್‌ಗೆ ಚುನಾವಣೆ ನಡೆಯಲಿದೆ. ಸದ್ಯ ವಿಪಕ್ಷವಾಗಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಸದ್ಯ ಬೆಂಬಲ ಹೆಚ್ಚಾಗುತ್ತಿದೆ. ಹೊಸದಿಲ್ಲಿಯ ಶೃಂಗ ಆರಂಭವಾಗು ವುದಕ್ಕಿಂತ ಎರಡು ದಿನ ಮೊದಲು ಅಂದರೆ ಸೆ. 7ರಂದು ಬಿಡುಗಡೆಯಾಗಿದ್ದ ರಾಜಕೀಯ ಸಮೀಕ್ಷೆಯ ಪ್ರಕಾರ ಶೇ.40 ಮಂದಿ ಅಲ್ಲಿನ ಪ್ರಜೆಗಳು ಸದ್ಯದ ವಿಪಕ್ಷಕ್ಕೇ ಮತ ಹಾಕುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.26 ಮಂದಿ ಹಾಲಿ ಆಡಳಿತ ಪಕ್ಷ ಲಿಬರಲ್ ಪಾರ್ಟಿ ಆಫ್ ಕೆನಡಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಪ್ರಧಾನಿ ಟ್ರಾಡೊ ಜನಪ್ರಿಯತೆ ಎಷ್ಟು ಎನ್ನುವುದು ಜಗತ್ತಿಗೇ ಸಾರಿ ಹೇಳಿದಂತಾಗುತ್ತದೆ. ಹಲವು ಸ್ವಯಂಕೃತ ಅಪರಾಧಗಳನ್ನು ಎಸಗಿ ನಗೆಪಾಟಲಿಗೆ ಈಡಾಗಿರುವ ಕೆನಡಾ ಸರಕಾರದಲ್ಲಿ ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಬಳಕೆ ಮಾಡಲಾ ಗುತ್ತಿರುವ ವಿಮಾನ ಓಬಿರಾಯನ ಕಾಲದ್ದು. “ಸಿಸಿ-150 ಪೋಲರಿಸ್ 15001” ವಿಮಾನವನ್ನು ಅಲ್ಲಿನ ಸರಕಾರ 1980ರಲ್ಲಿ ಖರೀದಿ ಮಾಡಲಾಗಿತ್ತು. ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಗೆ ಬೆಂಬಲ ನೀಡುವ ಕೆನಡಾ ಬಳಿ ಐದು ವಿಮಾನಗಳು ಇವೆ. ಇಂತಿಪ್ಪ ಐದು ವಿಮಾನಗಳ ಪೈಕಿ ಸರಕಾರದ ಬಳಕೆಗಾಗಿ ಇರು ವುದು ಮೂರು ಮಾತ್ರ. 15003 ಸರಣಿಯ ವಿಮಾನ ದಕ್ಷಿಣ ಪೆಸಿಫಿಕ್ ಸಮುದ್ರ ವ್ಯಾಪ್ತಿಯ ಗ್ವಾಮ್ ಎಂಬಲ್ಲಿ ಫ್ರಾನ್ಸ್‌ನ ವಿಮಾನಕ್ಕೆ ಢಿಕ್ಕಿ ಹೊಡೆದು ದುರಸ್ತಿಯಾಗದೆ ಹಾಗೆಯೇ ನಿಂತಿದೆಯಂತೆ. ಸದರಿ ವಿಮಾನಗಳ ಹಾರುವ ಅವಧಿ 2027ಕ್ಕೆ ಮುಕ್ತಾಯವಾಗಲಿದೆ. ಇನ್ನು ಟ್ರಾಡೊ ಸಾಹೇಬರು ವಿದೇಶದ ಪ್ರವಾಸದ ವೇಳೆ ಮುಖಭಂಗಕ್ಕೆ ಈಡಾಗುವುದು ಹೊಸದೇನೂ ಅಲ್ಲ. 2016ರಲ್ಲಿ ಅವರು ಬೆಲ್ಜಿಯಂಗೆ ಹೋಗು ತ್ತಿದ್ದಾಗ ತಾಂತ್ರಿಕ ತೊಂದರೆಯಿಂದ ಮತ್ತೆ ಟೊರಾಂ ಟೋಗೆ ವಾಪಸಾಗಿತ್ತು. ರಾಯಲ್ ಕೆನೆಡಿಯನ್ ಏರ್‌ಫೋರ್ಸ್‌ನ ಮಾಹಿತಿಯ ಪ್ರಕಾರ 2019ರಲ್ಲಿ ವಿಮಾನವನ್ನು ಒಂಟಾರಿಯೋ ವಿಮಾನ ನಿಲ್ದಾಣದಲ್ಲಿ ಎಳೆದುಕೊಂಡು ಹೋಗುತ್ತಿರ ಬೇಕಾದರೆ, ಅದು ನಿಯಂತ್ರಣ ತಪ್ಪಿ ನಿಲ್ದಾಣದ ಆವರಣದ ಗೋಡೆಗೆ ಗುದ್ದಿ, ಅದರ ಮೂತಿ ಮತ್ತು ಎಂಜಿನ್‌ಗೆ ಪೆಟ್ಟಾಗಿತ್ತು. ಈ ಘಟನೆ ಬಳಿಕ ಅದನ್ನು ಸೇವೆಯಿಂದ ಹೊರಗೆ ಇಡಲಾಗಿದೆ. 2018ರಲ್ಲಿ ಅವರು ಅವರು ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದ ವೇಳೆ ರೋಮ್ ವಿಮಾನ ನಿಲ್ದಾಣದಲ್ಲಿ ಇಂಧನ ಭರ್ತಿ ಮಾಡುತ್ತಿರಬೇಕಾದರೆ ತೊಂದರೆಗೆ ಸಿಲುಕಿಕೊಂಡಿತ್ತು. ಒಟ್ಟು ಎರಡು ಗಂಟೆಗಳ ಕಾಲ ಅವರು ಏರ್‌ಪೋರ್ಟ್‌ನಲ್ಲಿಯೇ ಕಾಲಕಳೆಯಬೇಕಾಗಿದ್ದ ದುಃಸ್ಥಿತಿ ಬಂದಿತ್ತು. ಅದೇ ಸಂದರ್ಭದಲ್ಲಿ ಕೆನಡಾ ಹೈಕಮಿಷನ್ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಔತಣಕೂಟಕ್ಕೆ ಖಲಿಸ್ಥಾನ ಉಗ್ರ ಸಂಘಟನೆಯ ನಾಯಕನಿಗೆ ಆಮಂತ್ರಣ ನೀಡಲಾಗಿತ್ತು. ಕಟು ಟೀಕೆಯ ಬಳಿಕ ಅದನ್ನು ವಾಪಸ್ ಪಡೆಯಲಾಗಿತ್ತು. ಅವರ ಧೋರಣೆಗಳಿಂದಲೇ ಅವರು ಟೀಕೆಗೆ ಒಳಗಾಗುವಂತಾಗಿದೆ. ಸದಾಶಿವ ಕೆ.