Advertisement

Canada; ಟ್ರಾಡೊ ಸರಕಾರ ಪತನಕ್ಕೆ ಸಿದ್ಧ: ಸಂಸದ ಘೋಷಣೆ

01:51 AM Dec 22, 2024 | Team Udayavani |

ಟೊರಾಂಟೊ: ಕೆನಡಾದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಜಸ್ಟಿನ್‌ ಟ್ರಾಡೊ ನೇತೃತ್ವದ ಸರಕಾರವನ್ನು ಪತನಗೊಳಿಸಿಯೇ ಸಿದ್ಧ ಎಂದು ಭಾರತ ಮೂಲದ ಸಂಸದ ಜಗ್‌ಮೀತ್‌ ಸಿಂಗ್‌ ನೇತೃತ್ವದ ನ್ಯೂ ಡೆಮಾಕ್ರಾಟಿಕ್‌ ಪಕ್ಷ ಘೋಷಣೆ ಮಾಡಿದೆ. ಪ್ರಧಾನಿಯಾಗಿ ಟ್ರಾಡೊ ವಿಫ‌ಲರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತೇವೆ ಎಂದು ಸಿಂಗ್‌ ಹೇಳಿದ್ದಾರೆ. ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಕೂಡ ಪ್ರಧಾನಿ ಹುದ್ದೆಗೆ ಜಸ್ಟಿನ್‌ ಟ್ರಾಡೊ ರಾಜೀನಾಮೆ ಕೊಡಬೇಕು. ನಿಮ್ಮ ಮೇಲೆ ದೇಶದ ಜನರ ವಿಶ್ವಾಸ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.