ಒಟ್ಟಾವಾ: ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆನಡಾ ಸರಕಾರದಿಂದ ಹೊಸ ಹೇಳಿಕೆಯೊಂದು ಹೊರಬಿದ್ದಿದೆ. ನಿಜ್ಜರ್ ಹತ್ಯಾಕಾಂಡದಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ ಎಂದು ಕೆನಡಾ ಸರ್ಕಾರ ಹೇಳಿದೆ.
ಇದರೊಂದಿಗೆ, ನಿಜ್ಜರ್ ಹತ್ಯಾಕಾಂಡದಲ್ಲಿ ಭಾರತದ ಉನ್ನತ ನಾಯಕರು ಭಾಗಿಯಾಗಿದ್ದಾರೆ ಎಂದು ಹೇಳುವ ‘ದಿ ಗ್ಲೋಬ್ ಅಂಡ್ ಮೇಲ್’ ಹೇಳಿಕೆಯನ್ನು ಕೆನಡಾ ತಿರಸ್ಕರಿಸಿದೆ.
ಕೆನಡಾ ಪತ್ರಿಕೆಯ ಈ ವರದಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ನಿರಾಕರಿಸಿತ್ತು. ಕೆನಡಾದ ಮಾಧ್ಯಮಗಳು ಭಾರತದ ಮಾನಹಾನಿ ಮಾಡುವ ಅಭಿಯಾನ ನಡೆಸುತ್ತಿವೆ ಎಂದು ವಿದೇಶಾಂಗ ಸಚಿವಾಲಯ ಆರೋಪಿಸಿತ್ತು.
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಸರ್ಕಾರವು ಸಂಪೂರ್ಣವಾಗಿ ಹಿಂದೆ ಸರಿದಿದ್ದು. ಭಾರತದೊಂದಿಗಿನ ಉದ್ವಿಗ್ನತೆಯ ನಡುವೆ ಈ ಹೊಸ ಹೇಳಿಕೆ ಹೊರಬಿದ್ದಿದೆ ಅಲ್ಲದೆ ಕೆನಡಾ ಪತ್ರಿಕೆಯ ವರದಿ ಪ್ರಕಾರ ನಿಜ್ಜಾರ್ ಹತ್ಯೆ ಸೇರಿದಂತೆ ಕೆನಡಾದ ಅಪರಾಧ ಚಟುವಟಿಕೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಎಸ್ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರವಿದೆ ಎಂದು ವರದಿ ಮಾಡಿತ್ತು. ಆದರೆ ಈ ಕುರಿತು ಹೇಳಿಕೆ ನೀಡಿದ ಟ್ರುಡೋ ಸರ್ಕಾರ ಯಾವುದೇ ಪುರಾವೆಗಳಿಲ್ಲದೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಾವು ಭಾರತದ ಮೇಲೆ ಆರೋಪ ಮಾಡಿದ್ದೇವೆ. ಆ ಸಮಯದಲ್ಲಿ ನಮ್ಮ ಬಳಿ ಗುಪ್ತಚರ ಮಾಹಿತಿ ಮಾತ್ರ ಇತ್ತು ಮತ್ತು ಯಾವುದೇ ಬಲವಾದ ಪುರಾವೆಗಳಿಲ್ಲದ ಕಾರಣ ಹೆಚ್ಚಿನ ತನಿಖೆ ಮತ್ತು ನಮ್ಮೊಂದಿಗೆ ಸಹಕರಿಸುವಂತೆ ನಾವು ಭಾರತೀಯ ಭದ್ರತಾ ಏಜೆನ್ಸಿಗಳನ್ನು ಕೇಳಿದ್ದೇವೆ ಎಂದು ಹೇಳಿದೆ.
ನಿಜ್ಜರ್ ಹತ್ಯೆ ಬಳಿಕ ಬಿಕ್ಕಟು ಆರಂಭ:
ಕಳೆದ ವರ್ಷ ಜೂನ್ 18 ರಂದು ಕೆನಡಾದ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ವಿಚಾರದಲ್ಲಿ ಕೆನಡಾ – ಭಾರತದ ನಡುವೆ ಆಂತರಿಕ ಘರ್ಷಣೆ ಆರಂಭವಾಗಿತ್ತು ಅಲ್ಲದೆ ನಿಜ್ಜಾರ್ ಹತ್ಯೆ ಹಿಂದೆ ಭಾರತದ ಕುಮ್ಮಕು ಇದೆ ಎಂದು ಕೆನಡಾ ಆರೋಪಿಸಿತ್ತು ಆದರೆ ಕೆನಡಾದ ಆರೋಪವನ್ನು ಭಾರತ ನಿರಾಕರಿಸಿತ್ತು. ಇದಾದ ಬಳಿಕ ಎರಡು ರಾಷ್ಟ್ರಗಳ ನಡುವಿನ ಆಂತರಿಕ ಸಂಘರ್ಷ ಎಷ್ಟರಮಟ್ಟಿಗೆ ಇತ್ತೆಂದರೆ ರಾಯಭಾರ ಅಧಿಕಾರಿಗಳನ್ನು ವಜಾಗೊಳಿಸುವ ಹಂತಕ್ಕೆ ತಲುಪಿತ್ತು.
ಇದನ್ನೂ ಓದಿ: IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ