Advertisement
ಹ್ಯೂಬರ್ಟ್ ಹುರ್ಕಾಝ್ 5-7, 6-3, 6-2 ಅಂತರದಿಂದ ಕ್ಯಾಸ್ಪರ್ ರೂಡ್ಗೆ ಆಘಾತವಿಕ್ಕಿದರು. ಬುಸ್ಟ 7-5, 6-7 (7), 6-2ರಿಂದ ಬ್ರಿಟನ್ನ ಡ್ಯಾನ್ ಇವಾನ್ಸ್ಗೆ ಸೋಲುಣಿಸಿದರು.
ವನಿತಾ ಸಿಂಗಲ್ಸ್ನಲ್ಲಿ ಎರಡು ಬಾರಿಯ ಚಾಂಪಿ ಯನ್ ಸಿಮೋನಾ ಹಾಲೆಪ್ “ನ್ಯಾಶನಲ್ ಬ್ಯಾಂಕ್ ಓಪನ್ ಟೆನಿಸ್ ಟೂರ್ನಿ’ಯ ಫೈನಲ್ನಲ್ಲಿ ಬ್ರಝಿಲ್ನ ಹದ್ದಾದ್ ಮಯಾ ಅವರನ್ನು ಎದುರಿಸಲಿದ್ದಾರೆ. ರೊಮೇನಿಯಾದ ಸಿಮೋನಾ ಹಾಲೆಪ್ ಸೆಮಿಫೈನಲ್ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು 2-6, 6-3, 6-4ರಿಂದ ಮಣಿಸಿದರು. ಹದ್ದಾದ್ ಮಯಾ ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 6-4, 7-6 (7) ಅಂತರದ ಗೆಲುವು ಸಾಧಿಸಿದರು.
Related Articles
Advertisement