ಒಟ್ಟಾವಾ: ಭಾರತೀಯ ಮೂಲದ ಕುಟುಂಬವೊಂದು ಕೆನಡಾದ ಒಂಟಾರಿಯೊದಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.
ಮೃತರನ್ನು ರಾಜೀವ್ ವಾರಿಕೂ(51), ಅವರ ಪತ್ನಿ ಶಿಲ್ಪಾ ಕೋಥಾ(47) ಮತ್ತು ಮಗಳು ಮಾಹೆಕ್ ವಾರಿಕೂ(16) ಎಂದು ಗುರುತಿಸಲಾಗಿದೆ.
ಕೆನಡಾದ ಒಂಟಾರಿಯೊದಲ್ಲಿ ಕುಟುಂಬ ವಾಸವಿದ್ದ ಮನೆಗೆ ಬೆಂಕಿ ತಗುಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು. ಆದರೆ ಮನೆಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ನಿಗೂಢವಾಗಿದೆ ಎನ್ನುತ್ತಾರೆ ಪೊಲೀಸರು.
ಬೆಂಕಿ ಹೊತ್ತಿಕೊಂಡ ಕುರಿತು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮ ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಹೋಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿಡಾ ಬಳಿಕ ಕಾರ್ಯಾಚರಣೆ ನಡೆಸಿದ ಮೇಲೆ ಸುಟ್ಟು ಕರಕಲಾದ ಮನೆಯ ಅವಶೇಷಗಳ ಅಡಿಯಲ್ಲಿ ಮೂರೂ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಸುಮಾರು 15 ವರ್ಷಗಳಿಂದ ಕುಟುಂಬ ಇಲ್ಲಿ ವಾಸವಾಗಿತ್ತು ಕುಟುಂಬದ ಮಧ್ಯೆ ಯಾವುದೇ ಸಮಸ್ಯೆ ಇದ್ದ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Dress Code: ಈ ರಾಜ್ಯದ ಶಿಕ್ಷಕರಿಗೆ ಇನ್ನು ಡ್ರೆಸ್ ಕೋಡ್ ಕಡ್ಡಾಯ.. ಶಿಕ್ಷಣ ಸಚಿವರಿಂದ ಆದೇಶ