ವಾಷಿಂಗ್ಟನ್: ಈ ಹಿಂದೆ ಸಾಕಷ್ಟು ಬಾರಿ ತಾಪ ಹೆಚ್ಚಿರುವ ಪ್ರದೇಶಗಳಲ್ಲಿ ಅಂದರೆ ಅತಿಯಾದ ಉಷ್ಣಾಂಶದಲ್ಲಿ ಕೋವಿಡ್-19 ವೈರಸ್ ಬದುಕುಳಿಯುವ ಅವಕಾಶ ಕಡಿಮೆ ಎಂಬ ಊಹೆ, ಗಾಳಿ ಸುದ್ದಿಗಳು ಹರಿದಾಡಿದ್ದವು.
ಇದೀಗ ಈ ಅಂಶವನ್ನು ಅಮೆರಿಕದ ಸಂಶೋಧಕರು ಸತ್ಯವೆಂದು ದೃಢಪಡಿಸಿದ್ದಾರೆ. ಈ ಮಾರಣಾಂತಿಕ ಸೋಂಕನ್ನು
ನಾಶಪಡಿಸುವ ಸಾಮರ್ಥ್ಯ ಸೂರ್ಯನ ಬೆಳಕಿಗೆ ಇದೆ ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ.
ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ವಿಭಾಗದ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರರಾಗಿರುವ
ವಿಲಿಯಂ ಬ್ರಾÂನ್ ಅವರು ಗುರುವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಟ್ರಾವೈಲೆಟ್ ಕಿರಣಗಳು ಸೋಂಕಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಬೇಸಗೆಯಲ್ಲಿ ಸೋಂಕು ಪ್ರಸರಣ ಪ್ರಮಾಣ ಕಡಿಮೆ ಇರಲಿದೆ ಎಂದಿದ್ದಾರೆ.
ಭೂಮೇಲ್ಮೆ„ ಹಾಗೂ ಗಾಳಿಯಲ್ಲಿರುವ ಸೋಂಕನ್ನು ಅನ್ನು ಸೂರ್ಯನ ಬೆಳಕು ಕೊಲ್ಲುತ್ತದೆ ಎಂಬುದನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಉಷ್ಣಾಂಶ ಮತ್ತು ಆದ್ರìತೆ ಎರಡರಲ್ಲೂ ಯಾವುದೇ ಅಂಶ ಹೆಚ್ಚಾದರೂ ವೈರಸ್‌ಗೆ ಬದುಕುಳಿಯುವುದು ಕಷ್ಟ ಎನ್ನುತ್ತಾರೆ ಸಂಶೋಧಕರು.
ಹಿಂದಿನಿಂದಲೂ ಅಲ್ಟ್ರಾವೈಲೆಟ್ ಕಿರಣಗಳು ಸೋಂಕಿನ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತಿತ್ತು. ಅದರಲ್ಲಿರುವ ವಿಕಿರಣಗಳು ಸೋಂಕಿನಲ್ಲಿರುವ ಅನುವಂಶಿಕ ವಸ್ತು ಮತ್ತು ಪುನರಾವರ್ತಿಸುವ ಸಾಮರ್ಥ್ಯದ ಮೇಲೆ ಹಾನಿ ಮಾಡುತ್ತದೆ.
ಆದರೆ ಬೇಸಗೆಯಲ್ಲಿನ ನೈಸರ್ಗಿಕ ಕಿರಣಗಳು ಪ್ರಭಾವ ಬೀರಲಿದೆಯೇ ಎಂಬುದನ್ನು ನಿಖರವಾಗಿ ತಿಳಿಯುವ ಪ್ರಯತ್ನ ಪ್ರಗತಿಯಲ್ಲಿದೆ.